Asianet Suvarna News Asianet Suvarna News

Udupi: ಬೀಳಲು ಸಿದ್ಧವಾಗಿರುವ ನೀರಿನ ಟ್ಯಾಂಕ್ ತೆರವುಗೊಳಿಸಲು ಸಾರ್ವಜನಿಕರ ಒತ್ತಾಯ

ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಪಂಚಾಯತ್ ವ್ಯಾಪ್ತಿಯ ಪೇತ್ರಿ ಗ್ರಾಮದಲ್ಲಿರುವ ಹಳೆಯ ನೀರಿನ ಟ್ಯಾಂಕ್ ಅನ್ನು ತೆರವು ಮಾಡಿ ಬೇರೊಂದು ಸ್ಥಳದಲ್ಲಿ ಮರು ನಿರ್ಮಿಸುವ ಬದಲು ಮತ್ತೆ ಬಣ್ಣ ಬಳೆದು ತೇಪೆ ಹಚ್ಚುವ ಕೆಲಸ ಮಾಡ್ತಿದ್ದಾರೆ.

Water tank ready to fall in udupi near brahmavara gow
Author
First Published Jan 17, 2023, 8:06 PM IST

ಉಡುಪಿ (ಜ.17): ಸಾರ್ವಜನಿಕ ಸ್ಥಳದಲ್ಲೇ ಕುಸಿದು ಬೀಳಲು  ಸಿದ್ದವಾಗಿರೋ ಈ ಟ್ಯಾಂಕ್ ಒಮ್ಮೆ ನೋಡ್ತಿದ್ರೆ ಯಾರಾದ್ರೂ ಬೆಚ್ಚಿ ಬೀಳೋದು ಗ್ಯಾರೆಂಟಿ. ಇದು ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಪಂಚಾಯತ್ ವ್ಯಾಪ್ತಿಯ ಪೇತ್ರಿ ಗ್ರಾಮದಲ್ಲಿರುವ ಹಳೆಯ ಟ್ಯಾಂಕ್ ಒಂದರ ಸ್ಥಿತಿ. ಬರೋಬ್ಬರಿ 34 ವರ್ಷದ ಹಳೆಯ ನೀರು ಸಂಗ್ರಹಣಾ ಟ್ಯಾಂಕ್ ನ ಧಾರಣಾ ಸಾಮರ್ಥ್ಯ ಕುಸಿದಿದ್ದರೂ ಇನ್ನೂ ತೆರವು ಮಾಡಿ ಬೇರೊಂದು ಸ್ಥಳದಲ್ಲಿ ಮರು ನಿರ್ಮಿಸುವ ಬದಲು ಮತ್ತೆ ಬಣ್ಣ ಬಳೆದು ತೇಪೆ ಹಚ್ಚುವ ಕೆಲಸ ಮಾಡ್ತಿದ್ದಾರೆ ಅಧಿಕಾರಿಗಳು. ಒಂದು ಲಕ್ಷ ನೀರು ಸಂಗ್ರಹಣಾ ಸಾಮರ್ಥ್ಯ ಇರುವ ಟ್ಯಾಂಕ್ ಚೇರ್ಕಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಐದು ವಾರ್ಡ್‌ ಗಳ 350 ಮನೆಗಳಿಗೆ ನೀರು ಸರಬರಾಜು ಮಾಡುತ್ತೆ. ಇಷ್ಟು ಸಾಮರ್ಥ್ಯದ ಟ್ಯಾಂಕ್ ನ ಧಾರಣಾ ಸಾಮರ್ಥ್ಯ 30 ವರ್ಷ ಮಾತ್ರ. 

ಇದೀಗ ಈ ಟ್ಯಾಂಕ್ ನಿರ್ಮಾಣಗೊಂಡು 34 ವರ್ಷಗಳಾಗಿದ್ದು ಬಿರುಕು ಬಿಟ್ಟು ಅಪಾಯವನ್ನ ಆಹ್ವಾನಿಸುತ್ತಿರುವುದು ಒಂದೆಡೆಯಾದ್ರೆ ಪಿಡಬ್ಲೂ ಡಿ ಅಧಿಕಾರಿಗಳು ರಸ್ತೆ ಅಗಲೀಕರಣ ಹಿನ್ನಲೆ ಈ ಟ್ಯಾಂಕ್ ಬುಡದಲ್ಲೇ ಮಣ್ಣು ಅಗೆದು ಅಪಾಯವನ್ನು ಸೃಷ್ಟಿಸುತ್ತಿದ್ದಾರೆ. ಹೀಗಾಗಿ ಸ್ಥಳೀಯರು ಪ್ರತೀ ಕ್ಷಣ ಆತಂಕದಲ್ಲೇ ದಿನ ಕಳೆಯುವಂತಾಗಿದೆ.

Udupi: ಗಾಂಜಾ ಮತ್ತಿನಲ್ಲಿ ದರೋಡೆ: ಆರೋಪಿಗಳ ಹೆಡೆಮುರಿಕಟ್ಟಿದ ಪೊಲೀಸ್ ಪಡೆ

ಚೇರ್ಕಾಡಿ ಗ್ರಾಮಪಂಚಾಯತ್ ನಿಂದ ಜಿಲ್ಲಾ ಪಂಚಾಯತ್ ಗೆ ಬಹಳಷ್ಟು ಬಾರಿ ಮನವಿ ಮಾಡಿದ್ರು ಈ ವರೆಗೆ ಟ್ಯಾಂಕ್ ತೆರವು ಮಾಡಿ ಮರು ನಿರ್ಮಿಸಲು ಆಸಕ್ತಿ ವಹಿಸುತ್ತಿಲ್ಲ ಅಧಿಕಾರಿಗಳು. ನಮ್ಮ ಕೈಯಲ್ಲಿ ಇಲ್ಲ ಎಲ್ಲವೂ ಜಿಲ್ಲಾಪಂಚಾಯತ್ ಅಧಿಕಾರಿಗಳು, ಶಾಸಕರ ಕೈಯಲ್ಲಿದೆ ಅಂತ ಚೇರ್ಕಾಡಿ ಗ್ರಾಮಪಂಚಾಯತ್ ಉಪಾಧ್ಯಕ್ಷ ಕಿಟ್ಟಪ್ಪ ಅಮಿನ್ ಅಸಹಾಯಕತೆ ಹೊರಹಾಕಿದ್ದಾರೆ.

ಉಡುಪಿಯಲ್ಲಿ ನಿತ್ಯಾನಂದ ಸ್ವಾಮಿಗಳ ಮಂದಿರ ಉದ್ಘಾಟನೆ

ಈ ಬಗ್ಗೆ  ಜಿಲ್ಲಾ ಪಂಚಾಯತ್ ಸಿಇಓ ಬಳಿ ಪ್ರತಿಕ್ರಿಯೆ ಕೇಳಲು ಮುಂದಾದಾಗ ಸ್ಪಷ್ಟನೆ ಕೊಡದೆ ಟ್ಯಾಂಕ್ ತೆರವು ಮಾಡುವುದಾಗಿ ಭರವಸೆ ನೀಡಿದ್ದಾರೆ ಸಿಇಓ ಪ್ರಸನ್ನ. ಒಟ್ಟಾರೆ ಆಗ್ಲೋ ಈಗ್ಲೋ ಬೀಳೊ ಸ್ಥಿತಿಯಲ್ಲಿ ಇರುವ ಟ್ಯಾಂಕನ್ನ ಕೂಡಲೇ ಸುರಕ್ಷತಾ ಕ್ರಮಗಳೊಂದಿಗೆ ತೆರವು ಮಾಡಬೇಕಿದೆ. ಅಧಿಕಾರಿಗಳು ವಿಳಂಭ ಮಾಡಿ ಟ್ಯಾಂಕ್ ಕುಸಿದು ಆಗೋ ಅನಾಹುತಕ್ಕೆ ಹೊಣೆ ಯಾರು ಎನ್ನುತ್ತಿದ್ದಾರೆ ಸ್ಥಳೀಯರು.

Follow Us:
Download App:
  • android
  • ios