Asianet Suvarna News Asianet Suvarna News

ಅಮಾನಿಕೆರೆಗೆ ಹೇಮೆ ನೀರು, 90 ದಿನ ನೀರು ಹರಿದರೆ ಅಮಾನಿಕೆರೆ ಸಂಪೂರ್ಣ ಭರ್ತಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಕೂಸು ಸ್ಮಾರ್ಟ್‌ ಸಿಟಿ ಅನುದಾನದಲ್ಲಿ ತುಮಕೂರು ನಗರದ ಅಮಾನಿಕೆರೆಗೆ ಬುಗಡನಹಳ್ಳಿ ಕೆರೆಯಿಂದ ಪೈಪ್‌ಲೈನ್‌ ಮೂಲಕ ಹೇಮಾವತಿ ನೀರನ್ನು ತುಂಬಿಸುವ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ.

Water released to amanikere from hema river
Author
Bangalore, First Published Jul 12, 2020, 11:04 AM IST

ತುಮ​ಕೂರು(ಜು.12): ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಕೂಸು ಸ್ಮಾರ್ಟ್‌ ಸಿಟಿ ಅನುದಾನದಲ್ಲಿ ತುಮಕೂರು ನಗರದ ಅಮಾನಿಕೆರೆಗೆ ಬುಗಡನಹಳ್ಳಿ ಕೆರೆಯಿಂದ ಪೈಪ್‌ಲೈನ್‌ ಮೂಲಕ ಹೇಮಾವತಿ ನೀರನ್ನು ತುಂಬಿಸುವ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ.

ಸಂಸದ ಜಿ.ಎಸ್‌. ಬಸವರಾಜ್‌ ಅವರು ಅಮಾನಿಕೆರೆ ಭೇಟಿ ನೀಡಿ ಮಾತನಾಡಿ, ತುಮಕೂರು ಮಹಾ ನಗರದ 24* 7 ಕುಡಿಯುವ ನೀರು ಸೌಲಭ್ಯಕ್ಕೆ ಹೆಚ್ಚುವರಿ ಸುಧಾರಣೆಗೆ ಹೇಮಾವತಿ ನೀರನ್ನು ಅಮಾನಿಕೆರೆಗೆ ತುಂಬಿಸುವ ಸ್ಮಾರ್ಟ್‌ಸಿಟಿ ಅನುದಾನದ .32.38 ಕೋಟಿ ವೆಚ್ಚದ ಯೋಜನೆ ಇದಾಗಿದೆ ಎಂದರು.

ಉತ್ತರ ಉತ್ತರವೇ, ದಕ್ಷಿಣ ದಕ್ಷಿಣವೇ; ಏನಿದು ನಾಗರೀಕತೆಯ ಲೆಕ್ಕಾಚಾರವೇ?

ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯವರಿಗೆ ನೀಡಲಾಗಿದೆ. ಮಳೆಗಾಲದ ಸಮಯದಲ್ಲಿ ಬುಗಡನಹಳ್ಳಿ ಕೆರೆ ತುಂಬಿದ ನಂತರ ಪೈಪ್‌ಲೈನ್‌ ಮೂಲಕ ತುಮಕೂರು ನಗರದ ಅಮಾನಿಕೆರೆಗೆ ನೀರನ್ನು ತುಂಬಿಸಲಾಗುತ್ತದೆ. ಬೇಸಿಗೆ ಸಮಯದಲ್ಲಿ ಬುಗುಡನಹಳ್ಳಿ ಜಲಸಂಗ್ರಹಾರದಲ್ಲಿ ನೀರಿನ ಕೊರತೆ ಉಂಟಾದ ಸಂದರ್ಭದಲ್ಲಿ ಅಮಾನಿಕೆರೆ ನೀರನ್ನು ಬಳಸಲಾಗುತ್ತೆ ಎಂದರು.

ತುಮಕೂರು ಅಮಾನಿಕೆರೆಯು 173 ಎಂಟಿಎಫ್‌ಟಿ ಸಾಮರ್ಥ್ಯವನ್ನು ಹೊಂದಿದ್ದು, ಪ್ರತಿದಿನ ಪೈಪ್‌ಲೈನ್‌ ಮುಖಾಂತರ 2 ಎಂಟಿಎಫ್‌ಟಿಯಷ್ಟುನೀರನ್ನು ಅಮಾನಿಕೆರೆಗೆ ಸರಬರಾಜು ಮಾಡಬಹುದಾಗಿದೆ. ಅಧಿಕೃತವಾಗಿ ಅಮಾನಿಕೆರೆಗೆ ನೀರನ್ನು ಹರಿಸಲು ಪ್ರಾರಂಭ ಮಾಡಿದ 90 ದಿನಗಳಲ್ಲಿ ಕೆರೆಯನ್ನು ಸಂಪೂರ್ಣವಾಗಿ ತುಂಬಿಸಬಹುದಾಗಿದೆ. ಅಮಾನಿಕೆರೆಯಲ್ಲಿ ನೀರು ತುಂಬಿಸುವುದರಿಂದ ಸುತ್ತಮುತ್ತಲ್ಲಿನ ಪ್ರದೇಶದ ಅಂತರ್‌ಜಲ ಮಟ್ಟವು ಸುಧಾರಣೆಯಾಗಲಿದೆ ಎಂದರು.

ವಿಕ್ಟೋರಿಯಾ ಆಸ್ಪತ್ರೆ ICUನಲ್ಲಿದ್ದ 70 ವರ್ಷದ ಕೊರೋನಾ ಸೋಂಕಿತ ಆತ್ಮಹತ್ಯೆ

ತುಮಕೂರು ನಗರದ ಶಾಸಕ ಜಿ.ಬಿ. ಜ್ಯೋತಿಗಣೇಶ್‌ ಮಾತನಾಡಿ, ಇದು ಪ್ರಾಯೋಗಿಕ ಪರೀಕ್ಷೆಯಷ್ಟೆ, ಯಶಸ್ವಿಯಾಗಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಅಮಾನಿಕೆರೆಗೆ ನೀರು ತುಂಬಿಸುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಈ ಯೋಜನೆಯು ತ್ವರಿತಗತಿಯಲ್ಲಿ ಪೂರ್ಣಗೊಳಲು ಸಹಕರಿಸಿದ ಸಿಎಂ ಬಿ.ಎಸ್‌. ಯಡಿಯೂರಪ್ಪ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್‌, ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ, ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ಅಧ್ಯಕ್ಷ ಡಾ. ರಾಕೇಶ್‌ ಸಿಂಗ್‌, ಹಿಂದಿನ ಅಧ್ಯಕ್ಷೆ ಶಾಲಿನಿ ರಜಿನೀಶ್‌, ಜಿಲ್ಲಾಧಿಕಾರಿ ಡಾ. ರಾಕೇಶ್‌ ಕುಮಾರ್‌, ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ರಂಗಸ್ವಾಮಿ, ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.

Follow Us:
Download App:
  • android
  • ios