ಆಲಮಟ್ಟಿ ಜಲಾಶಯದಿಂದ ನೀರು ಹೊರಕ್ಕೆ, ಸಕಲ ಸುರಕ್ಷಾ ಕ್ರಮ

ಆಲಮಟ್ಟಿ ಜಲಾಶಯದಿಂದ ಹೆಚ್ಚಿನ ನೀರು ಹೊರಬಿಟ್ಟಿದ್ದು  ಲಿಂಗಸಗೂರು ತಾಲೂಕಿನ ಶೀಲಹಳ್ಳಿ ಸೇತುವೆಯ ಮೇಲೆ ನೀರು ಹರಿದಿದೆ.

Water Released from Almatti Dam Raichur

ರಾಯಚೂರು [ಜು. 30]  ಆಲಮಟ್ಟಿ ಜಲಾಶಯದಿಂದ ಅಧಿಕ ನೀರು‌ ಬಿಡುಗಡೆ ಮಾಡಲಾಗಿದೆ.  ನಾರಾಯಣಪುರ ಜಲಾಶಯದಿಂದ ಕೃಷ್ಣ ನದಿಗೆ ಹೆಚ್ಚಿನ ನೀರು ಹರಿಸಲಾಗಿದೆ.

ನಾರಾಯಣಪುರ ಜಲಾಶಯದಿಂದ ಈಗ 1.63 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಪರಿಣಾಮ ಲಿಂಗಸಗೂರು ತಾಲೂಕಿನ ಶೀಲಹಳ್ಳಿ ಸೇತುವೆಯ ಮೇಲೆ ನೀರು ಹರಿದಿದೆ.

ಸೇತುವೆ ಮುಳಗಿರುವ ಹಿನ್ನೆಲೆಯಲ್ಲಿ ಕಡದರಗಡ್ಡೆ, ಯರಗೋಡ, ಗೋನವಾಟ್ಲ ಸೇರಿದಂತೆ ಐದು ಗ್ರಾಮಗಳ ಸಂಪರ್ಕ ಸ್ಥಗಿತವಾಗಿದೆ. ಸ್ಥಳದಲ್ಲಿ ಲಿಂಗಸಗೂರು ತಹಸೀಲ್ದಾರ್ ಹಾಗೂ ಅಗ್ನಿ ಶಾಮಕ ದಳ ಸಿಬ್ಬಂದಿ ಮತ್ತು ಪೊಲೀಸರು ವ್ಯವಸ್ಥೆ ನೊಡಿಕೊಳ್ಳುತ್ತ ಇದ್ದಾರೆ. ಇನ್ನಷ್ಟು ನೀರು ಹರಿಸಿದರೆ ರಸ್ತೆ ಸಂಪರ್ಕ ಸ್ಥಗಿತವಾಗುವ ಸಾಧ್ಯತೆ ಇದೆ.

ಆರಂಭದಲ್ಲಿ ಕ್ಷೀಣವಾಗಿದ್ದ ಮುಂಗಾರು ಇದೀಗ ಎಲ್ಲ ಭಾಗದಲ್ಲಿಯೂ ಚುರುಕಾಗಿದೆ. ಕರ್ನಾಟಕ ಅಲ್ಲದೇ ಮಹಾರಾಷ್ಟ್ರ ಭಾಗದಲ್ಲಿ ಜೋರು ಮಳೆಯಾಗುತ್ತಿದೆ. ಮುಂಬೈ ಮಹಾನಗರ ಸಹ ಮಳೆಯಿಂದ ತತ್ತರಿಸಿತ್ತು. ಕೊಂಚ ತಡವಾಗಿ ಆದರೂ ಕೃಷಿ ಚಟುವಟಿಕೆಗಳು ಆರಂಭವಾಗಿರುವುದು ಶುಭ ಸುದ್ದಿ..

Latest Videos
Follow Us:
Download App:
  • android
  • ios