ನೀವೂ ಸ್ವಲ್ಪ ಚೆಕ್ ಮಾಡ್ಕೊಳ್ಳಿ: ಪೆಟ್ರೋಲ್‌ನಲ್ಲಿ ನೀರು ಮಿಕ್ಸ್ ಆಗಿರಬಹುದು?
ಪೆಟ್ರೋಲ್‌ನಲ್ಲಿ ನೀರು ಮಿಶ್ರಣ| ಇದರಿಂದ ಕೆಟ್ಟು ಹೋದ ಕೆಲ ವಾಹನಗಳು| ಅನುಮಾನದಿಂದ ಪ್ಲಾಸ್ಟಿಕ್ ಬಾಟಲ್‌ನಲ್ಲಿ ಪೆಟ್ರೋಲ್ ತುಂಬಿಸಿ ನೋಡಿದಾಗ ಇದರಲ್ಲಿ ನೀರು ಮಿಶ್ರಣವಾಗಿರುವುದು ದೃಢ ಪಟ್ಟಿದೆ| ಹೂವಿನಹಡಗಲಿ ತಾಲೂಕಿನ ಮಾಗಳ ಗ್ರಾಮದ ಕಿಸಾನ್ ಸೇವಾ ಕೇಂದ್ರ ಪೆಟ್ರೋಲ್ ಬಂಕ್ ನಡೆದ ಘಟನೆ|
ಹೂವಿನಹಡಗಲಿ(ಡಿ.11): ತಾಲೂಕಿನ ಮಾಗಳ ಗ್ರಾಮದ ಕಿಸಾನ್ ಸೇವಾ ಕೇಂದ್ರದ ಹೆಸರಿನಲ್ಲಿ ನಡೆಯುತ್ತಿರುವ ಬಂಕ್‌ನಲ್ಲಿ ಪೆಟ್ರೋಲ್‌ನಲ್ಲಿ ನೀರು ಬರುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಮಂಗಳವಾರ ಬಂಕ್ ಬಂದ್ ಮಾಡಿಸಿದ್ದಾರೆ.
ಕಳೆದೊಂದು ವಾರದಿಂದ ಪೆಟ್ರೋಲ್‌ನಲ್ಲಿ ನೀರು ಮಿಶ್ರಣವಾಗಿದ್ದು, ಜನ ಗೊತ್ತಿಲ್ಲದಂತೆ ತಮ್ಮ ಬೈಕ್‌ಗಳಿಗೆ ತುಂಬಿಸಿಕೊಳ್ಳುತ್ತಿದ್ದರು. ಇದರಿಂದ ಕೆಲ ವಾಹನಗಳು ಕೆಟ್ಟು ಹೋಗಿದ್ದು, ಅನುಮಾನದಿಂದ ಪ್ಲಾಸ್ಟಿಕ್ ಬಾಟಲ್‌ನಲ್ಲಿ ಪೆಟ್ರೋಲ್ ತುಂಬಿಸಿ ನೋಡಿದಾಗ ಇದರಲ್ಲಿ ನೀರು ಮಿಶ್ರಣವಾಗಿರುವುದು ದೃಢ ಪಟ್ಟಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಬಂಕ್ ಬಂದ್ ಮಾಡಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕಳೆದ ಅಕ್ಟೋಬರ್ ತಿಂಗಳಿನಲ್ಲೇ ಇದೇ ರೀತಿಯಲ್ಲಿ ಇಂಧನದಲ್ಲಿ ನೀರು ಮಿಶ್ರಣವಾಗಿತ್ತು. ಈ ವರೆಗೂ ಬಂಕ್ ಮಾಲೀಕರು ಸರಿಪಡಿಸುವ ಗೋಜಿಗೆ ಹೋಗಿಲ್ಲ. ಈಗ ಕೇಳಿದರೆ ಪೆಟ್ರೋಲ್‌ನಲ್ಲಿರುವ ನೀರು ತೆಗೆಯಲು ಕಂಪನಿ ವತಿಯಿಂದ ಬರುತ್ತಾರೆ ಎಂದು ಹೇಳುತ್ತಿದ್ದಾರೆ. ಇಂಧನದಲ್ಲಿರುವ ನೀರು ಹೊರಗೆ ತೆಗೆಯುವ ವರೆಗೂ ಬಂಕ್ ಬಂದ್ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.