Asianet Suvarna News Asianet Suvarna News

ರಾಜ್ಯಸಭೆ ಸದಸ್ಯ, ನಟ ಜಗ್ಗೇಶ್ ಮನೆಗೆ ಮಳೆ ನೀರು: ಟ್ವೀಟ್‌ ಮಾಡಿ ಅಸಮಾಧಾನ

Actor Jaggesh: ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ಗ್ರಾಮದಲ್ಲಿರುವ ಜಗ್ಗೇಶ್ ಮನೆಗೆ ನೀರು ನುಗ್ಗಿದೆ

Water Logged in Rajya Sabha Member Actor Jaggesh Farm House Tumakuru mnj
Author
First Published Aug 28, 2022, 1:31 PM IST

ತುಮಕೂರು (ಆ. 28): ರಾಜ್ಯಸಭೆ ಸದಸ್ಯ, ನಟ ಜಗ್ಗೇಶ್ (Actor Jaggesh) ಮನೆಗೆ ಮಳೆ‌ನೀರು ನುಗ್ಗಿದೆ.  ತುಮಕೂರು (Tumkur) ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ಗ್ರಾಮದಲ್ಲಿರುವ ಜಗ್ಗೇಶ್ ಮನೆಗೆ ನೀರು ನುಗ್ಗಿದೆ. ಮಾಯಸಂದ್ರ ಜಗ್ಗೇಶ್ ಹುಟ್ಟೂರು. ಮಾಯಸಂದ್ರ ಗ್ರಾಮದ ಜಗ್ಗೇಶ್ ತೋಟದ ಮನೆ ಜಲಾವೃತಗೊಂಡಿದೆ. ನಿನ್ನೆ ರಾತ್ರಿ ಸುರಿದ ಮಳೆಯಿಂದ ಮನೆ ಜಲಾವೃತಗೊಂಡಿದೆ.  ಮನೆಗೆ ನೀರು ನುಗ್ಗಿರುವುದರ ಬಗ್ಗೆ ಜಗ್ಗೇಶ್ ಟ್ವೀಟ್‌ ಮಾಡಿ ಮಾಹಿತಿ ನೀಡಿದ್ದಾರೆ. 

ನೀರು ಹರಿಯುವ ಕಾಲುವೆ ಒತ್ತುವರಿ ಮಾಡಿಕೊಂಡ ಪರಿಣಾಮ ಮನೆಗೆ ನೀರು ನುಗ್ಗಿದೆ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಟ್ವೀಟ್ ಮೂಲಕ ರಾಜ್ಯಸಭಾ ಸದಸ್ಯ ನಟ ಜಗ್ಗೇಶ್ ಅಸಮಧಾನ ಹೊರಹಾಕಿದ್ದಾರೆ. 

 

ಕರ್ನಾಟಕದ ವಿಧಾನಸಭೆಯಿಂದ ರಾಜ್ಯಸಭೆಗೆ  ಆಯ್ಕೆಯಾಗಿದ್ದ ಚಿತ್ರ ನಟಜಗ್ಗೇಶ್ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ಲೆಹರ್ ಸಿಂಗ್ (ಮೂವರೂ ಬಿಜೆಪಿ) ಹಾಗೂ ಕೇಂದ್ರದ ಮಾಜಿ ಸಚಿವ ಜೈರಾಂ ರಮೇಶ್ (ಕಾಂಗ್ರೆಸ್) ಜುಲೈ 8ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಜಗ್ಗೇಶ್ ಹಾಗೂ ಲೆಹರ್ ಸಿಂಗ್ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದಿದ್ದರು.  ಜಗ್ಗೇಶ್  ಕನ್ನಡದಲ್ಲಿ, ತಮ್ಮ ಆರಾದ್ಯ ದೈವ ಶ್ರೀಗುರು ರಾಘವೇಂದ್ರ ಸ್ವಾಮಿಗಳ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು. 

Follow Us:
Download App:
  • android
  • ios