ಮಲೆನಾಡಿನಲ್ಲಿ ಮುಂಗಾರು ಚುರುಕುಗೊಂಡಿದ್ದು, ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಹೊಸನಗರ ತಾಲೂಕಿನ ನಗರ ಹೋಬಳಿಯ ಚಕ್ರಾ ಹಾಗೂ ಸಾವೇಹಕ್ಲು ಜಲಾಶಯಗಳು ಬಹುತೇಕ ಭರ್ತಿಯಾಗಿವೆ.
ಶಿವಮೊಗ್ಗ(ಜು.30): ಹೊಸನಗರ ತಾಲೂಕಿನ ನಗರ ಹೋಬಳಿಯ ಚಕ್ರಾ ಹಾಗೂ ಸಾವೇಹಕ್ಲು ಜಲಾಶಯಗಳು ಬಹುತೇಕ ಭರ್ತಿಯಾಗಿವೆ. ಈ ಜಲಾಶಯಗಳ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು ಜಲಾಶಯಕ್ಕೆ ಸಾಕಷ್ಟುನೀರು ಹರಿದು ಬರುತ್ತಿದೆ.
ಮಲೆನಾಡಿನಲ್ಲಿ ಮುಂಗಾರು ಚುರುಕುಗೊಂಡಿದ್ದು, ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಹಾಗೆಯೇ ಕೃಷಿ ಚಟುವಟಿಗಳೂ ಭರದಿಂದ ಸಾಗಿದೆ.
ಕೃಷ್ಣಾ ನದಿ ಪಾತ್ರದಲ್ಲಿ ಮಳೆ, ತುಂಬಿದ ನಾರಾಯಣಪುರ ಡ್ಯಾಂ: ಹೈ ಅಲರ್ಟ್
ಸಾವೇಹಕ್ಲು ಜಲಾಶಯದ ಗರಿಷ್ಠ ಮಟ್ಟ582 ಮೀ. ಆಗಿದ್ದು, ಇದೀಗ ಜಲಾಶಯದ ಮಟ್ಟ580.40 ಮೀ.ಗೆ ತಲುಪಿದೆ. ಹೀಗಾಗಿ ಈ ಜಲಾಶಯದಿಂದ 1400 ಕ್ಯುಸೆಕ್ ನೀರನ್ನು ಲಿಂಗನಮಕ್ಕಿ ಜಲಾಶಯಕ್ಕೆ ಹರಿಸಲಾಗುತ್ತಿದೆ.
ಚಕ್ರಾ ಜಲಾಶಯದ ಗರಿಷ್ಠ ನೀರಿನ ಮಟ್ಟ579.12 ಮೀ. ಆಗಿದ್ದು, ಇದೀಗ ಜಲಾಶಯದ ನೀರಿನ ಮಟ್ಟ575.16 ಮೀ.ಗೆ ತಲುಪಿದೆ. ಜಲಾಶಯದಿಂದ 500 ಕ್ಯೂಸೆಕ್ ನೀರನ್ನು ಲಿಂಗನಮಕ್ಕಿ ಜಲಾಶಯಕ್ಕೆ ಹರಿಸಲಾಗುತ್ತಿದೆ.
