Gadag; ಔಷಧ ಉಗ್ರಾಣಕ್ಕೆ ಹೊಕ್ಕ ಮಳೆ ನೀರು, ಅಂದಾಜು 4 ಕೋಟಿ ರೂ ಮೌಲ್ಯದ ಔಷಧಿ ಜಲಾವೃತ
ಗದಗ ಜಿಲ್ಲೆಯ ಜಿಮ್ಸ್ ಆಸ್ಪತ್ರೆ ನೆಲ ಮಹಡಿಯಲ್ಲಿರುವ ಮುಖ್ಯ ಡ್ರಗ್ ಸ್ಟೋರ್ ನಲ್ಲಿ ಮಳೆ ನೀರು ತುಂಬಿದ ಪರಿಣಾಮ ಕೋಟ್ಯಂತರ ಮೌಲ್ಯದ ಔಷಧಿಗಳು, ಮೆಡಿಕಲ್ ಉಪಕರಣಗಳು ಹಾಳಾಗುವ ಹಂತದಲ್ಲಿವೆ.
ವರದಿ : ಗಿರೀಶ್ ಕಮ್ಮಾರ, ಏಷ್ಯಾನೆಟ್ ಸುವರ್ಣ ನ್ಯೂಸ್
ಗದಗ (ಸೆ.8): ತಾಲೂಕಿನ ನಾಗಾವಿ ಗ್ರಾಮದ ವ್ಯಾಪ್ತಿಯಲ್ಲಿರುವ ಜಿಮ್ಸ್ ಆಸ್ಪತ್ರೆ ಔಷಧ ಉಗ್ರಾಣದಲ್ಲಿ ಮಳೆ ನೀರು ಅವಾಂತರ ಸೃಷ್ಟಿಸಿದೆ. ಜಿಮ್ಸ್ ಆಸ್ಪತ್ರೆ ನೆಲ ಮಹಡಿಯಲ್ಲಿರುವ ಮುಖ್ಯ ಡ್ರಗ್ ಸ್ಟೋರ್ ನಲ್ಲಿ ಮಳೆ ನೀರು ತುಂಬಿದ ಪರಿಣಾಮ ಕೋಟ್ಯಂತರ ಮೌಲ್ಯದ ಔಷಧಿಗಳು, ಮೆಡಿಕಲ್ ಉಪಕರಣಗಳು ಹಾಳಾಗುವ ಹಂತದಲ್ಲಿವೆ. ಸತತ ಮಳೆ ಹಾಗೂ ಆಸ್ಪತ್ರೆ ಪಕ್ಕದ ಗುಡ್ಡದ ನೀರು ಹರಿದು ಆಸ್ಪತ್ರೆ ನೆಲ ಮಹಡಿ ಹೊಕ್ಕು ಅವಾಂತರ ಸೃಷ್ಟಿಸಿದೆ. ಸೋಮವಾರ ರಾತ್ರಿಯಿಂದ ಜಿಲ್ಲೆಯಾದ್ಯಂತ ವರುಣ ಅಬ್ಬರಿಸ್ತಿದ್ದಾನೆ. ಅದ್ರಲ್ಲೂ ನಾಗಾವಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮಳೆ ಬಿದ್ದ ಬಗ್ಗೆ ವರದಿಯಾಗಿತ್ತು. ಸೋಮವಾರ ರಾತ್ರಿಯಿಂದ್ಲೆ ಡ್ರಗ್ ಗೋಡೌನ್ ನಲ್ಲಿ ನೀರು ತುಂಬಿಕೊಳ್ತಿತ್ತು.. ಈ ವರೆಗೂ ಸುಮಾರು ಮೂರು ಫೀಟ್ ನಷ್ಟುಜ ನೀರು ಸಂಗ್ರಹವಾಗಿದೆ. ಗೋಡೌನ್ ನ ರ್ಯಾಂಕ್ ನಲ್ಲಿರಿಸಿದ್ದ ಸಿರೆಂಜ್, ಸ್ಯಾನಿಟೈಜರ್, ಟ್ಯಾಬ್ಲೆಟ್ ತುಂಬಿದ ಡಬ್ಬ, ಸರ್ಜಿಕಲ್ ಗ್ಲೌಸ್, ಚೌಷಧಿ ಬಾಟಲಿಗಳು ತೇಲಾಡ್ತಿದೆ. ಮೊನ್ನೆಯಿಂದ್ಲು ನೀರನ್ನ ಹೊರಹಾಕೋದಕ್ಕೆ ಪ್ರಯತ್ನ ನಡೆದಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಬಂದು ಪಂಪ್ ಸೆಟ್ ಮೂಲಕ ನೀರು ಖಾಲಿ ಮಾಡೋದಕ್ಕೆ ಮುಂದಾಗಿದ್ರು.. ಆದ್ರೆ, ಚಿಕ್ಕ ವಸ್ತುಗಳು ಪಂಪ್ ಸೆಟ್ ಪೈಪ್ ಗೆ ಸಿಲುಕಿ ನೀರು ಎತ್ತೋದಕ್ಕೆ ಸಾಧ್ಯವಾಗಿರಲಿಲ್ಲ.. ಇದ್ರಿಂದಾಗಿ ಜಿಮ್ಸ್ ಆಸ್ಪತ್ರೆಯ ನರ್ಸಿಂಗ್ ಸ್ಟಾಫ್, ಡ್ರಗ್ ಹೌಸ್ ಸಿಬ್ಬಂದಿಗಳೇ ಸೇರಿ ಔಷಧಿಗಳನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಮುಂದಾಗಿದ್ದಾರೆ.
ಅಂದಾಜು 1 ಕೋಟಿ ರೂಪಾಯಿ ಮೌಲ್ಯದ ಔಷಧಿ ಹಾಳಾಗಿರುವ ಬಗ್ಗೆ ಶಂಕೆ
ಮುಖ್ಯ ಡ್ರಗ್ ಗೋಡೌನ್ ನಲ್ಲಿ ಅಂದಾಜು 4 ಕೋಟಿ ರೂಪಾಯಿ ಮೌಲ್ಯದ ಔಷಧಿ ಸಂಗ್ರಹವಾಗಿತ್ತು ಎನ್ನಲಾಗ್ತಿದೆ. ಅದ್ರಲ್ಲಿ ಸುಮಾರು ಒಂದು ಕೋಟಿ ಮೌಲ್ಯದ ಸಾಮಗ್ರಿ ಹಾಳಾಗಿರೋ ಬಗ್ಗೆಯೂ ಅಂದಾಜಿಸಲಾಗ್ತಿದೆ. ವಿಷ್ಯ ತಿಳಿದು ಸ್ಥಳಕ್ಕೆ ಬಂದಿದ್ದ ಜಿಮ್ಸ್ ನಿರ್ದೇಶಕಿ ರೇಖಾ ಸೋನವಣೆ, ಪ್ರಾಣ ಹಾನಿ ಆಗಿಲ್ಲ ಅನ್ನೋದು ನೆಮ್ಮದಿ ತಂದಿದೆ. ಊಹೆಗೂ ನಿಲುಕದ ರೀತಿಯಲ್ಲಿ ಗೋಡೌನ್ ಗೆ ನೀರು ನುಗ್ಗಿದೆ. ಮೊದಲು ಔಷಧಿಗಳನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲು ಮುಂದಾಗಿದ್ದೇವೆ. ಬಹುತೇಕ ಔಷಧಿಗಳ ಪ್ಯಾಕೆಟ್ ಏರ್ ಸೀಲ್ ಆಗಿದೆ. ಸಮಿತಿ ರಚನೆ ಮಾಡಿ ರೀಯೂಸ್ ಮಾಡ್ಬಹುದಾದ ಔಷಧಿಗಳ ಪಟ್ಟಿ ಮಾಡ್ತೇವೆ. ಔಷಧಿ ಕೊರತೆಯಾಗ್ದಂತೆ ನೋಡ್ಕೊತೇವೆ ಅಂತಿದಾರೆ.
Mysuru: ಮಳೆ ಹಾನಿ ಕುರಿತು ನಿಖರ ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸಿ: ಜಿ.ಟಿ.ದೇವೇಗೌಡ
ನಾಲ್ಕು ತಿಂಗಳ ಹಿಂದೆಯೇ ಡ್ರಗ್ ಹೌಸ್ ಸ್ಥಳಾಂತರಕ್ಕೆ ಶಿಫಾರಸು.?
ಆಸ್ಪತ್ರೆ ನೆಲ ಮಹಡಿ ಇತ್ತೀಚೆಗೆ ಸೋರುತ್ತಿದೆ. ಆಗಾಗ ಮಳೆ ಬಂದಾಗ ಸಣ್ಣಮಟ್ಟದಲ್ಲಿ ನೀರು ಹರಿದು ಬರ್ತಿತ್ತು.. ಹೀಗಾಗಿ ಮುಖ್ಯ ಮತ್ತು ಉಪ ಗೋಡೌನ್ ಗಳನ್ನ ಶಿಫ್ಟ್ ಮಾಡೋಣ ಅನ್ನೋ ಪ್ರಸ್ತಾವವನ್ನ ಗೋಡೌನ್ ಅಧಿಕಾರಿಗಳು ಆಡಳಿತ ಮಂಡಳಿ ಗಮನಕ್ಕೆ ತಂದಿತ್ತು. ಹೀಗಿದ್ರೂ ಸ್ಥಳಾಂತರ ಮಾಡ್ದಿರೋದು ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿದೆ ಎನ್ನಲಾಗ್ತಿದೆ.
Ramanagara: ಸುಗ್ಗನಹಳ್ಳಿ ಸೇತುವೆ, ಭಕ್ಷಿ ಕೆರೆ ವೀಕ್ಷಿಸಿದ ಶಾಸಕಿ ಅನಿತಾ ಕುಮಾರಸ್ವಾಮಿ
ವೈದ್ಯರು ಬರೆದುಕೊಟ್ಟ ಔಷಧಿಯಲ್ಲಿ ಅರ್ಧದಷ್ಟು ಔಷಧಿಯನ್ನ ಮಾತ್ರ ಜಿಮ್ಸ್ ನಲ್ಲಿ ಕೊಡಗತಾರೆ ಅನ್ನೋ ಆರೋಪ ಹಿಂದಿನಿಂದ ಇತ್ತು.. ವೈದ್ಯರನ್ನ ಕೇಳಿದ್ರೆ ಔಷಧಿ ಕೊರತೆ ಇದೆ ಅನ್ನೋ ರಾಗವನ್ನ ಎಳೀತಿದ್ರು. ಈಗ ಔಷಧಿ ಗೋಡಾವನ್ ನೀರು ತುಂಬಿದ್ದು, ಔಷಧಿ ಕೊರತೆಯಾಗ್ದಂತೆ ಯಾವ ರೀತಿ ನಿಭಾಯಿಸ್ತಾರೆ ಅನ್ನೋದು ಈಗಿನ ಪ್ರಶ್ನೆ.