Ramanagara: ಸುಗ್ಗನಹಳ್ಳಿ ಸೇತುವೆ, ಭಕ್ಷಿ ಕೆರೆ ವೀಕ್ಷಿಸಿದ ಶಾಸಕಿ ಅನಿತಾ ಕುಮಾರಸ್ವಾಮಿ
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕುಸಿದು ಹೋದ ಸುಗ್ಗನಹಳ್ಳಿ ಸೇತುವೆ ಹಾಗೂ ಏರಿ ಒಡೆದು ಅನಾಹುತಕ್ಕೆ ಕಾರಣವಾದ ಭಕ್ಷಿ ಕೆರೆ ಕಾಮಗಾರಿಯನ್ನು ಶಾಸಕಿ ಅನಿತಾ ಕುಮಾರಸ್ವಾಮಿ ಬುಧವಾರ ವೀಕ್ಷಿಸಿದರು.
ರಾಮನಗರ (ಸೆ.08): ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕುಸಿದು ಹೋದ ಸುಗ್ಗನಹಳ್ಳಿ ಸೇತುವೆ ಹಾಗೂ ಏರಿ ಒಡೆದು ಅನಾಹುತಕ್ಕೆ ಕಾರಣವಾದ ಭಕ್ಷಿ ಕೆರೆ ಕಾಮಗಾರಿಯನ್ನು ಶಾಸಕಿ ಅನಿತಾ ಕುಮಾರಸ್ವಾಮಿ ಬುಧವಾರ ವೀಕ್ಷಿಸಿದರು. ಅರ್ಕಾವತಿ ನದಿಯಲ್ಲಿ ಪ್ರವಾಹಕ್ಕೆ ಕುಸಿದು ಹೋದ ಸುಗ್ಗನಹಳ್ಳಿ ಸೇತುವೆಯನ್ನು ವೀಕ್ಷಿಸಿದ ಶಾಸಕರು, ಗ್ರಾಮಸ್ಥರಿಂದ ಅಹವಾಲು ಆಲಿಸಿ ಸುಗ್ಗನಹಳ್ಳಿ - ಮಾಯಗಾನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ತಾತ್ಕಾಲಿಕ ವ್ಯವಸ್ಥೆ ಮಾಡುವ ಭರವಸೆ ನೀಡಿದರು.
ಸುಗ್ಗನಹಳ್ಳಿ ಸೇತುವೆ ಕುಸಿದಿರುವುದರಿಂದ ಸುಗ್ಗನಹಳ್ಳಿ - ಮಾಯಗಾನಹಳ್ಳಿ ಮಾರ್ಗದ ಐದಾರು ಗ್ರಾಮಗಳಿಗೆ ಪರ್ಯಾಯ ಮಾರ್ಗದಲ್ಲಿ ಸಾರಿಗೆ ಬಸ್‌ಗಳ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚಿಸಿದರು. ಆನಂತರ ಕೆರೆ ಏರಿ ಒಡೆದು ಸೀರಳ್ಳದ ಮೂಲಕ ಅರ್ಕೇಶ್ವರ ಕಾಲೋನಿ, ಟಿಪ್ಪುನಗರ, ಜಿಯಾ ಉಲ್ಲಾ ಬ್ಲಾಕ್, ಗೌಸಿಯಾ ನಗರ, ಯಾರಬ್ ನಗರ ಸೇರಿದಂತೆ ಹಲ ಬಡಾವಣೆಗಳಿಗೆ ಭಾರೀ ಪ್ರಮಾಣದ ನೀರು ನುಗ್ಗಿ ಅವಾಂತರ ಸೃಷ್ಟಿಸಿದ ಭಕ್ಷಿ ಕೆರೆ ಏರಿ ನಿರ್ಮಾಣ ಕಾಮಗಾರಿ ವೀಕ್ಷಿಸಿದರು.
Ramanagara: ನೆರೆ ಸಂತ್ರಸ್ತರಿಗೆ 1 ಲಕ್ಷ ಪರಿಹಾರ ನೀಡಿ: ಇಬ್ರಾಹಿಂ
ಅನಿತಾ ಕುಮಾರಸ್ವಾಮಿ, ಮಹಾ ಮಳೆಯಿಂದ ಆಗಿರುವ ಅನಾಹುತಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಾಮನಗರ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿ ರಾಜ್ಯಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದರು. ಮಳೆಯಿಂದ ಸಾವಿರಾರು ಮನೆಗಳು ಜಖಂಗೊಂಡಿವೆ. ಕೃಷಿ, ತೋಟಗಾರಿಕೆ ಉತ್ಪನ್ನಗಳು ನೀರು ಪಾಲಾಗಿವೆ. ಕೆರೆಗಳ ಏರಿ ಒಡೆದರೆ, ಸೇತುವೆಗಳು ಕೊಚ್ಚಿ ಹೋಗಿವೆ. ಇದೆಲ್ಲವನ್ನು ಸರಿಪಡಿಸುವ ಕೆಲಸ ಆಗಬೇಕಿದ್ದು, ಇದಕ್ಕಾಗಿ ಸರ್ಕಾರ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದರು. ಸುಗ್ಗನಹಳ್ಳಿ ಸೇತುವೆ ನಿರ್ಮಾಣವಾಗಿ 35 ವರ್ಷಗಳಾಗಿದೆ.
ಅರ್ಕಾವತಿ ನದಿಯಿಲ್ಲಿ 5 ಸಾವಿರ ಕ್ಯುಸೆಕ್ ನೀರು ಹರಿಯುತ್ತಿರುವ ಕಾರಣ ಅದರ ರಭಸಕ್ಕೆ ಸೇತುವೆ ಕುಸಿದಿದ್ದು, ಸರ್ಕಾರದ ಗಮನಕ್ಕೆ ತಂದು ನೂತನ ಸೇತುವೆ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದು ಹೇಳಿದರು. ಮರಳವಾಡಿ ಸೇರಿದಂತೆ ಅನೇಕ ಭಾಗಗಳಲ್ಲಿ ಕೆರೆಗಳ ಜತೆಗೆ ಸೇತುವೆಗಳನ್ನು ದುರಸ್ತಿ ಪಡಿಸಬೇಕಿದೆ. ಮಳೆ ನಿಲ್ಲುವವರೆಗೂ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಮಳೆ ನಿಂತ ಮೇಲೆ ಸೇತುವೆಗಳು ಕುಸಿದಿರುವ ಭಾಗಗಳಲ್ಲಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ಅನಿತಾ ತಿಳಿಸಿದರು.
ಪ್ರವಾಹ ಸ್ಥಳಗಳಿಗೆ ಭೇಟಿ: ಮಳೆ ಹಾನಿ ಪೀಡಿತ ಹಾರೋಹಳ್ಳಿಯ ವಿವಿಧ ಪ್ರದೇಶಗಳಿಗೆ ಶಾಸಕಿ ಅನಿತಾ ಕುಮಾರಸ್ವಾಮಿ ಹಾಗೂ ಜಿಲ್ಲಾಧಿಕಾರಿ ಅವಿನಾಶ್ ಭೇಟಿ ನೀಡಿ ಪರಿಶೀಲಿಸಿದರು. ಅಧಿಕಾರಿಗಳೊಂದಿಗೆ ಮಳೆ ಹಾನಿ ವೀಕ್ಷಣೆ ಆರಂಭಿಸಿದ ಶಾಸಕರು, ಚೌಡೇಶ್ವರಿ ದೇವಸ್ಥಾನದ ರಸ್ತೆಯಲ್ಲಿನ ಹತ್ತಾರು ಮನೆಗಳಿಗೆ ಭೇಟಿ ನೀಡಿ ಮಳೆ ಹಾನಿಯಿಂದಾದ ನಷ್ಟದ ಸಂಪೂರ್ಣ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿದರು.
ರಾಮನಗರ ಜಿಲ್ಲೆಯಲ್ಲಿ ಮುಂದುವರಿದ ಮಳೆ: ಜಮೀನುಗಳು ಜಲಾವೃತ
ಮಾರಸಂದ್ರ ರಸ್ತೆಯ ಕೆರೆ ವೀಕ್ಷಿಸಿದ ನಂತರ ಜಲಾವೃತವಾಗಿರುವ ಸರ್ಕಾರಿ ಆಸ್ಪತ್ರೆ ಪರಿಶೀಲಿಸಿ ಮಾತನಾಡಿದ ಅನಿತಾ, ಸರ್ಕಾರಿ ಆಸ್ಪತ್ರೆಯನ್ನು ತಾತ್ಕಾಲಿಕವಾಗಿ ಸಮುದಾಯ ಭವನಕ್ಕೆ ಸ್ಥಳಾಂತರ ಮಾಡಲಾಗಿದೆ. ಜೊತೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಎರಡು ಎಕರೆ ಜಾಗ ಗುರುತಿಸಿ ಆ ಜಾಗದಲ್ಲಿ ನೂತನ ಆಸ್ಪತ್ರೆ ನಿರ್ಮಾಣ ಮಾಡಲು ಕಾಮಗಾರಿ ಅಂದಾಜುಪಟ್ಟಿತಯಾರಿಸಿ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಕಾಮಗಾರಿ ಮುಗಿಯುವವರೆಗೂ ಕೆರೆಯಲ್ಲಿರುವ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಲಾಗುವುದು. ಕೆರೆಯ ಪಕ್ಕದಲ್ಲಿರುವ ಕೋಡಿಯಿಂದ ನೀರನ್ನು ಹೊರಬಿಡಲಾಗಿದೆ ಎಂದು ಹೇಳಿದರು.