Asianet Suvarna News Asianet Suvarna News

ಎಲ್ಲೆಂದರಲ್ಲಿ ಕಸ ಎಸೆದವರಿಗೆ 4 ಲಕ್ಷ ದಂಡ

ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸ ಎದೆಯೋ ಅಭ್ಯಾಸ ನಿಮಗಿದ್ದರೆ ಬೀಳುತ್ತೆ ಭಾರೀ ದಂಡ, ಹುಷಾರ್

Waste Management BBMP Collects 4 Lakh Fine
Author
Bengaluru, First Published Sep 15, 2019, 7:28 AM IST

ಬೆಂಗಳೂರು [ಸೆ.15]: ಕಳೆದ 13 ದಿನದಲ್ಲಿ ನಗರದ ರಸ್ತೆ ಬದಿ, ಕೆರೆ ಆವರಣ ಸೇರಿದಂತೆ ಇನ್ನಿತರ ಪ್ರದೇಶದಲ್ಲಿ ಅನಧಿಕೃತವಾಗಿ ಕಸ ಎಸದವರಿಗೆ ಪಾಲಿಕೆಯಿಂದ ನಾಲ್ಕು ಲಕ್ಷ ರು. ದಂಡ ವಿಧಿಸಲಾಗಿದೆ.

ಬಿಬಿಎಂಪಿ ಸಮರ್ಪಕವಾಗಿ ತ್ಯಾಜ್ಯ ನಿರ್ವಹಣೆ ಮಾಡದವರ ಮೇಲೆ ದಂಡ ಪ್ರಯೋಗಕ್ಕೆ ಮುಂದಾಗಿದ್ದು, ಸೆ.1ರಿಂದ ಕಸ ನಿರ್ವಹಣೆ ಮೇಲೆ ನಿಗಾ ವಹಿಸುವುದಕ್ಕೆ 232 ಮಾರ್ಷಲ್‌ಗಳನ್ನು ನೇಮಿಸಿದೆ. ಕಳೆದ 13 ದಿನದಲ್ಲಿ ನಗರದಲ್ಲಿ ಎಲ್ಲೆಂದರಲ್ಲಿ ಕಸ ಸುರಿಯುವವರಿಗೆ 4.10 ಲಕ್ಷ ರು. ದಂಡ ವಿಧಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಲಿಕೆ ಘನತ್ಯಾಜ್ಯ ವಿಭಾಗದ ಹೆಚ್ಚುವರಿ ಆಯುಕ್ತ ಡಿ.ರಂದೀಪ್‌, ಪಾಲಿಕೆಯ 160 ವಾರ್ಡ್‌ಗಳಲ್ಲಿ ಮಾರ್ಷಲ್‌ಗಳು ವಿವಿಧ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದು, 13 ದಿನದಲ್ಲಿ 4,10,130 ರು. ದಂಡ ವಿಧಿಸಿದ್ದಾರೆ. ಹೀಗಾಗಿ, ಸಾರ್ವಜನಿಕರು ಹಸಿ ಮತ್ತು ಒಣ ತ್ಯಾಜ್ಯ ಬೇರ್ಪಡಿಸಿ ಪ್ರತಿದಿನ ಮನೆಯ ಬಳಿ ಆಗಮಿಸುವ ಬಿಬಿಎಂಪಿ ಪೌರಕಾರ್ಮಿಕರಿಗೆ ನೀಡುವಂತೆ ಮನವಿ ಮಾಡಿದ್ದಾರೆ.

Follow Us:
Download App:
  • android
  • ios