ಮಂಡ್ಯ(ಡಿ.31): ಕೇರಳದಿಂದ ತ್ಯಾಜ್ಯವನ್ನು ಕರ್ನಾಟಕಕ್ಕೆ ಕಳುಹಿಸಲಾಗುತ್ತಿದೆ ಎಂಬ ಮಾಹಿತಿ ಬಯಲಾಗಿದೆ. ಸಕ್ಕರೆನಾಡು ಮಂಡ್ಯದಲ್ಲಿ ಕೇರಳದ ತ್ಯಾಜ್ಯ ತುಂಬಿದ ಎರಡು ಲಾರಿಗಳನ್ನು ಜಪ್ತಿ ಮಾಡಲಾಗಿದೆ.

ಕೇರಳದ ತ್ಯಾಜ್ಯವನ್ನು ಕರ್ನಾಟಕಕ್ಕೆ ರವಾನೆ ಮಾಡಲಾಗುತ್ತಿದ್ದು, ಸಕ್ಕರೆನಾಡು ಮಂಡ್ಯದಲ್ಲಿ ಕೇರಳದ ತ್ಯಾಜ್ಯ ತುಂಬಿದ ಎರಡು ಲಾರಿ ಜಪ್ತಿ ಮಾಡಲಾಗಿದೆ. 25ಕ್ಕೂ ಹೆಚ್ಚು ಕೇರಳದ ತ್ಯಾಜ್ಯ ತುಂಬಿರೋ ಲಾರಿಗಳು ನೆನ್ನೆ ರಾತ್ರಿ  ಕರ್ನಾಟಕಕ್ಕೆ ಬಂದಿರುವ ಬಗ್ಗೆಯೂ ಖಚಿತ ಮಾಹಿತಿ ಲಭ್ಯವಾಗಿದೆ.

ಅರಮನೆ ನಗರಿಯಲ್ಲಿ ಇಯರ್‌ ಎಂಡ್ ಜೋಶ್‌..! ಶೇ.90ರಷ್ಟು ಹೋಟೆಲ್ ಬುಕ್

ಕೇರಳದ ಗಡಿ ಬಳಿಯ ಕರ್ನಾಟಕ ಚೆಕ್ ಪೋಸ್ಟ್‌ನಲ್ಲಿ ಅಕ್ರಮ ನಡೆಯುತ್ತಿದ್ದು, ಕರ್ನಾಟಕದ ಚೆಕ್ ಪೋಸ್ಟ್ ಸಿಬ್ಬಂದಿಗೆ 2 ಸಾವಿರ ಕೊಟ್ಟು ಕೇರಳದ ತ್ಯಾಜ್ಯ ತುಂಬಿದ ಲಾರಿಗಳು‌‌ ಕರ್ನಾಟಕಕ್ಕೆ ಎಂಟ್ರಿ ಕೊಡುತ್ತಿವೆ ಎನ್ನಲಾಗುತ್ತಿದೆ.

ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಶ್ರೀರಂಗಪಟ್ಟಣ ಪೊಲೀಸರು ಕಾರ್ಯಾಚರಣೆ ನಡೆಸಿ ತ್ಯಾಜ್ಯ ತುಂಬಿದ ಲಾರಿ ಜಪ್ತಿ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಆಲೆಮನೆಗಳಿಗೆ ಕೇರಳದ ಕಸದ ತ್ಯಾಜ್ಯ ಪೂರೈಕೆಯಾಗುತ್ತಿದೆ ಎನ್ನಲಾಗುತ್ತಿದೆ. ರಬ್ಬರ್, ಬಟ್ಟೆ,ಪ್ಲಾಸ್ಟಿಕ್, ಪೇಪರ್‌ ಸೇರಿ ಹಲವು ತ್ಯಾಜ್ಯದಿಂದ ಉರುವಲಾಗಿ ಬಳಕೆ ಮಾಡಲಾಗುತ್ತಿದೆ.

ಮಂಗಳೂರು: ಇನ್ನು ಡಿಸಿ ಕಚೇರಿ ಎದುರು ಪ್ರತಿಭಟನೆ ಕಷ್ಟ

ಕೇರಳದ ಕಸದ ಲಾರಿಗಳಿಗಳಿಂದಾಗಿ ರಾಜ್ಯದಲ್ಲಿ ವ್ಯಾಪಕವಾಗಿ ಕಸದ ಕಮಿಷನ್ ದಂಧೆ ನಡಿಯುತ್ತಿದೆ. ಪೊಲೀಸರು ಕಾರ್ಯಾಚರಣೆ ನಡೆಸಿ ಲಾರಿ ಚಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕೇರಳದ ತ್ಯಾಜ್ಯ ಕರ್ನಾಟಕಕ್ಕೆ ಬರುತ್ತಿದ್ದರೂ ಕ್ರಮ ಕೈಗೊಳ್ಳದೆ ಕೈಕಟ್ಟಿ ಕುಳಿತಿರುವ ಅರಣ್ಯ,ಪೊಲೀಸ್, ಮತ್ತು ಪರಿಸರ ಇಲಾಖೆ ವಿರುದ್ದ ಪರಿಸರವಾದಿಗಳ ಆಕ್ರೋಶ ವ್ಯಕ್ತವಾಗಿದೆ. ಶ್ರೀರಂಗಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಪೇಜಾವರ ಶ್ರೀ: ಈಡೇರಿದ 2 ಆಸೆಗಳು, ಈಡೇರದ 3 ಕನಸುಗಳು