ವಿಜಯಪುರವನ್ನೇ ತನ್ನದಾಗಿಸಿಕೊಳ್ಳಲು ಪ್ಲ್ಯಾನ್‌: ಸ್ಮಾರಕಗಳೆಲ್ಲವೂ ವಕ್ಫ್‌ ಪಾಲು?

ವಿಶ್ವವಿಖ್ಯಾತ ಗೋಳಗುಮ್ಮಟ, ಬಾರಾಕಮಾನ್, ಇಬ್ರಾಹಿಂ ರೋಜಾ ಸಹ ವಕ್ಫ್‌ ಪ್ರಾಪರ್ಟಿ ಎಂದು ತನ್ನ ದಾಖಲೆಯಲ್ಲಿ ವಕ್ಫ್‌ ನಮೂದಿಸಿಕೊಂಡಿದೆ. ಅಲ್ಲದೆ, ಇಲ್ಲಿನ 43 ಸ್ಮಾರಕಗಳಿಗೂ 34 ವರ್ಷಗಳ ಹಿಂದೆಯೇ ಅಂದರೆ, 1990ರಲ್ಲಿಯೇ ನೋಟಿಸ್ ನೀಡಿತ್ತು ಎನ್ನಲಾಗಿದೆ. 

Was It All the important monuments in Vijayapur belong to the Waqf grg

ಶಶಿಕಾಂತ ಮೆಂಡೆಗಾರ

ವಿಜಯಪುರ(ಡಿ.13):  ಐತಿಹಾಸಿಕ ಗುಮ್ಮಟಗಳ ನಗರಿ ವಿಜಯಪುರದಲ್ಲಿರುವ ಪ್ರಮುಖ ಸ್ಮಾರಕಗಳ ಮೇಲೂ ಈ ವಕ್ಫ್‌ ಕೆಂಗಣ್ಣು ಬಿದ್ದಿದೆ. ದಾನಿಗಳು ನೀಡಿದ ಭೂಮಿ, ಹಣಕೊಟ್ಟು ಖರೀದಿಸಿದ ಆಸ್ತಿಗಳು, ಇತರರಿಂದ ಬಂದ ಉಡುಗೊರೆಗಳು ಮಾತ್ರ ವಕ್ಫ್‌ ಆಸ್ತಿಗಳು ಎನ್ನುತ್ತಿದ್ದ ವಕ್ಫ್‌ ಬೋರ್ಡ್, ನಗರದಲ್ಲಿರುವ ಐತಿಹಾಸಿಕ ಆದಿಲ್‌ಶಾಹಿಗಳ ಸ್ಮಾರಕಗಳು ಹಾಗೂ ಐತಿಹಾಸಿಕ ಕಟ್ಟಡಗಳುಳ್ಳ ಪ್ರವಾಸಿ ತಾಣಗಳೆಲ್ಲವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಐದು ದಶಕಗಳ ಹಿಂದೆಯೇ ಪ್ಲಾನ್ ಮಾಡಿತ್ತು ಎಂಬ ಭಯಾನಕ ವಿಚಾರ ಇದೀಗ ಬೆಳಕಿಗೆ ಬಂದಿದೆ. 

ಐವತ್ತು ವರ್ಷಗಳ ಹಿಂದೆಯೇ ವಿಜಯಪುರದ 43 ಸ್ಮಾರಕಗಳ ಮೇಲೆ ವಕ್ಫ್‌ ಕಣ್ಣು ಬಿದ್ದಿದೆ. ಎಲ್ಲ ಸ್ಮಾರಕಗಳನ್ನೂ 1974 ಫೆಬ್ರುವರಿ 14ರಂದು ತನ್ನ ಗೆಜೆಟ್ ನೋಟಿಫಿಕೇಷನ್‌ನಲ್ಲಿ ಸೇರಿಕೊಂಡಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಈಗಾಗಲೇ ನಮ್ಮ ಭೂಮಿ ಕಸಿದುಕೊಳ್ಳಲಾಗುತ್ತಿದೆ ಎಂದು ಆತಂಕಕ್ಕೊಳಗಾಗಿರುವ ರೈತರು, ಮಠಾಧೀಶರು ಸದ್ಯ ಹೋರಾಟ ನಡೆಸುತ್ತಿದ್ದಾರೆ. ಆದರೆ, ಇದಕ್ಕೂ ಮೊದಲೇ 1974ರ ಗೆಜೆಟ್‌ನಲ್ಲಿಯೇ ವಿಜಯಪುರದ 43 ಸ್ಮಾರಕಗಳನ್ನು ತನ್ನ ಸುಪರ್ದಿಗೆ ತೆಗೆದುಕೊಂಡು, ಇಡೀ ವಿಜಯಪುರವನ್ನೇ ತನ್ನದಾಗಿಸಿಕೊಳ್ಳಲು ವಕ್ಫ್‌ ಹೊರಟಿತ್ತೆ ಎಂಬ ಪ್ರಶ್ನೆ ಕೂಡ ಈಗ ಉದ್ಭವವಾಗಿದೆ.

ಬೆಳಗಾವಿ ಅಧಿವೇಶನ ಸಮಯದಲ್ಲೇ ಪ್ರತ್ಯೇಕ ಇಂಡಿ ಜಿಲ್ಲೆಯ ಕೂಗು..!

1990ರಲ್ಲೇ ಸ್ಮಾರಕಗಳಿಗೆ ನೋಟಿಸ್‌?:

ವಿಶ್ವವಿಖ್ಯಾತ ಗೋಳಗುಮ್ಮಟ, ಬಾರಾಕಮಾನ್, ಇಬ್ರಾಹಿಂ ರೋಜಾ ಸಹ ವಕ್ಫ್‌ ಪ್ರಾಪರ್ಟಿ ಎಂದು ತನ್ನ ದಾಖಲೆಯಲ್ಲಿ ವಕ್ಫ್‌ ನಮೂದಿಸಿಕೊಂಡಿದೆ. ಅಲ್ಲದೆ, ಇಲ್ಲಿನ 43 ಸ್ಮಾರಕಗಳಿಗೂ 34 ವರ್ಷಗಳ ಹಿಂದೆಯೇ ಅಂದರೆ, 1990ರಲ್ಲಿಯೇ ನೋಟಿಸ್ ನೀಡಿತ್ತು ಎನ್ನಲಾಗಿದೆ. ಜಿಲ್ಲಾ ವಕ್ಫ್‌ ಕಮಿಟಿಯಿಂದ ರಾಜ್ಯ ವಕ್ಫ್‌ ಕಮಿಟಿಗೆ 1974ರ ಗೆಜೆಟ್ ಪ್ರಕಾರ ಜಿಲ್ಲಾ ವಕ್ಫ್‌ ಸಲಹಾ ಮಂಡಳಿ ಐತಿಹಾಸಿಕ ತಾಣಗಳ ಪಟ್ಟಿಯನ್ನು ತಯಾರಿಸಿತ್ತು. ಅದನ್ನು 2009 ಜೂನ್ 10ರಂದು ಬೆಂಗಳೂರು ವಕ್ಫ್‌ ಬೋರ್ಡ್‌ನ ಕಾರ್ಯನಿರ್ವಾಹಕ ಅಧಿಕಾರಿ (ವಕ್ಫ್‌ ಸಿಇಒ)ಗೆ ಜಿಲ್ಲಾ ವಕ್ಫ್‌ ಬೋರ್ಡ್ ಸಲಹಾ ಸಮಿತಿ ರವಾನಿಸಿತ್ತು.

ಅದರಂತೆ ಆದಿಲ್ ಶಾಹಿ ಕಾಲದ ಗೋಳಗುಮ್ಮಟ, ಬಾರಾಕಮಾನ್, ಇಬ್ರಾಹಿಂ ರೋಜಾ, ಜೋಡಗುಮ್ಮಟ, ಆಸರ್ ಮಹಲ್, ಜಾಮಿಯಾ ಮಸೀದಿ, ಉಪಲಿ ಬುರುಜ್, ಅಲಿರೋಜಾ, ಭುಕಾರಿ ಮಸ್ಜೀದ್, ಮೆಹತರ್ ಮಹಲ್, ನೀರಿನ ಗಂಜ್ (ವಾಟರ್ ಟವರ್), ನಗರದ ಸುತ್ತ ಇರುವ ಕೋಟೆಗೋಡೆಗಳು ಸೇರಿದಂತೆ ಒಟ್ಟು 43 ಸ್ಮಾರಕಗಳನ್ನು ಜಿಲ್ಲಾ ವಕ್ಫ್‌ ಸಲಹಾ ಸಮಿತಿ ಅಂತಿಮಗೊಳಿಸಿದೆ. ಹಾಗಾದರೆ ಭಾರತೀಯ ಪ್ರಾಚ್ಯವಸ್ತು ಇಲಾಖೆ ಅಡಿಯಲ್ಲಿ ಬರುವ ಇವೆಲ್ಲ ಸ್ಮಾರಕಗಳು ವಕ್ಫ್‌ ಬೋರ್ಡ್‌ಗೆ ಹೋಗಿದ್ದು ಹೇಗೆ ಎಂಬ ಪ್ರಶ್ನೆ ಕೂಡ ಈಗ ಉದ್ಭವವಾಗಿದೆ.

ಕಾಂಗ್ರೆಸ್ ಸರ್ಕಾರದ್ದು ಕಳಪೆ ಬೀಜ; ನಮ್ಮ ತೊಗರಿ ಬೆಳೆ ಕಾಯಿ ಬಿಡ್ತಿಲ್ಲ ಸ್ವಾಮೀ ಎಂದ ರೈತ!

ವಕ್ಫ್‌ ಬೋರ್ಡ್‌ನಲ್ಲಿರುವ ವಕ್ಫ್‌ ಆಸ್ತಿಗಳ ಪಟ್ಟಿ ನೋಡಿದರೆ ವಿಜಯಪುರ ಜನತೆಯ ಆಸ್ತಿಯ ಮೇಲೆ ಕಣ್ಣು ಬಿದ್ದರೂ ತಪ್ಪಿಲ್ಲ. ಕಾರಣ ವಕ್ಫ್‌ ಬೋರ್ಡ್‌ ವಾದದಂತೆ ವಿಜಯಪುರದಲ್ಲಿರುವ 43 ಸ್ಮಾರಕಗಳು ತನ್ನದೆಂದು ಹೇಳಿಕೊಳ್ಳುತ್ತಿದೆ. ಅದರ ಆಸ್ತಿಯನ್ನು ಗಮನಿಸಿದರೆ ವಿಜಯಪುರ ನಗರವಾಸಿಗಳಲ್ಲಿಯೂ ಇದು ನಡುಕ ಹುಟ್ಟಿಸುವಂತಿದೆ. 1974ರಲ್ಲಿ ಮಾಡಿರುವ ಗೆಜೆಟ್ ನೋಟಿಫಿಕೇಷನ್‌ ಯಾವ ಆಧಾರದ ಮೇಲೆ ಮಾಡಲಾಗಿದೆ ಎಂಬ ದಾಖಲೆಗಳನ್ನು ವಕ್ಫ್‌ ಬಿಡುಗಡೆ ಮಾಡಬೇಕು. ಹೀಗಾದಾಗ ಮಾತ್ರ ಸತ್ಯಾಸತ್ಯತೆ ಹೊರಗೆ ಬರಲು ಸಾಧ್ಯವಾಗುತ್ತದೆ.

ಸ್ಮಾರಕ, ರೈತರ ಹೊಲ, ದೇವಸ್ಥಾನಗಳು, ಮಠಮಾನ್ಯಗಳು ಹೀಗೆ ಸಾಲು ಸಾಲು ಆಸ್ತಿಗಳು ತಮ್ಮವು ಎಂದು ಕುಳಿತಿದ್ದಾರೆ. ಇದರೊಟ್ಟಿಗೆ ಡಿಸಿ ಕಚೇರಿ, ಎಸ್ಪಿ ಕಚೇರಿ, ಐತಿಹಾಸಿಕ ತಾಣಗಳೆಲ್ಲವೂ ತಮ್ಮದು ಎನ್ನುತ್ತಾರೆ. ಹೀಗೆ ಮುಂದುವರೆದರೆ ನಾವು ವಾಸಿಸಲು ಮನೆಗಳು ಇಲ್ಲದಂತೆ ಮಾಡಿ, ಊರನ್ನೇ ಖಾಲಿ ಮಾಡಿಸುತ್ತಾರೆ. ಅದಕ್ಕೇ ಮೊದಲು ಈ ವಕ್ಫ್‌ ಕಾಯ್ದೆಯನ್ನೇ ರದ್ದು ಮಾಡಬೇಕು ಎಂದು ಹೋರಾಟ ನಡೆಸಿದ್ದೇವೆ. ಬೇಡಿಕೆಗಳು ಈಡೇರುವವರೆಗೂ ಹೋರಾಟ ಮುಂದುವರೆಲಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios