ಬೆಳಗಾವಿ ಅಧಿವೇಶನ ಸಮಯದಲ್ಲೇ ಪ್ರತ್ಯೇಕ ಇಂಡಿ ಜಿಲ್ಲೆಯ ಕೂಗು..!
ಹಲವು ವರ್ಷಗಳಿಂದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ಪ್ರತ್ಯೇಕ ಜಿಲ್ಲೆಯಾಗಬೇಕು ಎನ್ನುವ ಕೂಗು ಕೇಳಿ ಬರುತ್ತಲೆ ಇದೆ. ಈ ನಡುವೆ ಬೆಳಗಾವಿ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುವ ಸಂದರ್ಭದಲ್ಲೇ ಇಂಡಿ ಪ್ರತ್ಯೇಕ ಜಿಲ್ಲೆಯ ಕೂಗು ಶುರುವಾಗಿದೆ. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರೇ ಇಂಡಿ ಜಿಲ್ಲೆಯಾಗಬೇಕು ಎನ್ನುವ ಮಾತು ಎತ್ತಿದ್ದಾರೆ.
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ(ಡಿ.12): ಅಧಿವೇಶನ ಹೊತ್ತಲ್ಲೇ ಮತ್ತೊಂದು ಇಂಡಿ ಪ್ರತ್ಯೇಕ ಜಿಲ್ಲೆಯ ಕೂಗು ಎದ್ದಿದೆ. ಎಂದಿನಂತೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಇಂಡಿ ಪ್ರತ್ಯೇಕ ಜಿಲ್ಲೆಯಾಗಬೇಕು ಎಂದಿದ್ದಾರೆ. ಇಂಡಿ ಅಭಿವೃದ್ಧಿಯೇ ಆಗಿಲ್ಲ ಎನ್ನುವ ಅಸಮಧಾನಗಳ ನಡುವೆ ಇಂಡಿ ಪ್ರತ್ಯೇಕ ಜಿಲ್ಲೆಯ ಕೂಗು ಮತ್ತೆ ಸದ್ದು ಮೂಡಿಸಿದೆ.
ಮತ್ತೆ ಇಂಡಿ ಪ್ರತ್ಯೇಕ ಜಿಲ್ಲೆ ಕೂಗು..!
ಹಲವು ವರ್ಷಗಳಿಂದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ಪ್ರತ್ಯೇಕ ಜಿಲ್ಲೆಯಾಗಬೇಕು ಎನ್ನುವ ಕೂಗು ಕೇಳಿ ಬರುತ್ತಲೆ ಇದೆ. ಈ ನಡುವೆ ಬೆಳಗಾವಿ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುವ ಸಂದರ್ಭದಲ್ಲೇ ಇಂಡಿ ಪ್ರತ್ಯೇಕ ಜಿಲ್ಲೆಯ ಕೂಗು ಶುರುವಾಗಿದೆ. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರೇ ಇಂಡಿ ಜಿಲ್ಲೆಯಾಗಬೇಕು ಎನ್ನುವ ಮಾತು ಎತ್ತಿದ್ದಾರೆ.
ಕನ್ಯಾ ನೋಡಲು ಹೋದವರು ಕೈಲಾಸ ಸೇರಿದರು: ತೊಗರಿ ಕಟಾವು ಯಂತ್ರಕ್ಕೆ ಕಾರು ಗುದ್ದಿ ಐವರ ಸಾವು!
ಅಭಿವೃದ್ಧಿಗಾಗಿ ಇಂಡಿ ಜಿಲ್ಲೆ ಆಗಬೇಕು..!
ವಿಜಯಪುರ ಜಿಲ್ಲೆಯ ಗಡಿ ಭಾಗದಲ್ಲಿರುವ ಇಂಡಿ ಜಿಲ್ಲೆಯಾಗಬೇಕು ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಆಗ್ರಹಿಸಿದ್ದಾರೆ. ಅಭಿವೃದ್ಧಿಯ ದೃಷ್ಟಿಯಿಂದ ಹೆಚ್ಚೆಚ್ಚು ಜಿಲ್ಲೆಗಳು ಆಗಬೇಕು. ಇದರಿಂದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದಿದ್ದಾರೆ. ಎಂದಿನಂತೆ ಯಶವಂತರಾಯಗೌಡ ಪಾಟೀಲ್ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರು ಇಂಡಿ ಜಿಲ್ಲೆ ಕನಸು ಏನಾಯ್ತು ಎಂದು ಕೇಳಿದಾಗ, ಖಂಡಿತ ಇಂಡಿ ಜಿಲ್ಲೆಯಾಗಬೇಕು. ಜಿಲ್ಲೆಯಾದ್ರೆ ಮಹಾರಾಷ್ಟ್ರ ಗಡಿಯಲ್ಲಿರುವ ಈ ಪ್ರದೇಶಗಳು ಅಭಿವೃದ್ಧಿ ಹೊಂದಲು ಅನೂಕುಲ ಎಂದಿದ್ದಾರೆ. ಈ ನಿಟ್ಟಿನಲ್ಲಿ ನನ್ನ ಸತತ ಪ್ರಯತ್ನ ಇದೆ. ರಾಜ್ಯದಲ್ಲಿ ಜಿಲ್ಲೆಗಳ ವಿಂಗಡನೆಯಾಗುವ ಸಂದರ್ಭದಲ್ಲಿ ಮೊದಲು ಇಂಡಿ ಪರಿಗಣಿಸುವಂತೆ ಈಗಾಗಲೇ ಸರ್ಕಾರಕ್ಕೆ ಮನವಿಯನ್ನು ಮಾಡಿದ್ದೇನೆ ಎಂದಿದ್ದಾರೆ.
ಇಂಡಿ ಜಿಲ್ಲೆಯಾಗದೆ ಇದ್ರೆ 2028ಕ್ಕೆ ನಿವೃತ್ತಿ..!
ಹೌದು, ಕಳೆದ 2023ರಲ್ಲಿ ವಿಧಾನ ಸಭೆ ಚುನಾವಣೆಯಲ್ಲಿ ಗೆದ್ದಾಗ ಶಾಸಕ ಯಶವಂತರಾಯಗೌಡ ಇಂಡಿ ಪ್ರತ್ಯೇಕ ಜಿಲ್ಲೆಯಾಗಬೇಕು, ನಾನು ಮಾಡಿಯೇ ಮಾಡ್ತೇನೆ, ಇಂಡಿ ಜಿಲ್ಲೆ ಮಾಡದೆ ಇದ್ರೆ ಮುಂದಿನ ಅವಧಿಯ ರಾಜಕಾರಣದಿಂದ ನಿವತ್ತಿ ಪಡೆಯುತ್ತೇನೆ ಎಂದಿದ್ದರು. ಈಗ ಅಧಿವೇಶನ ನಡೆಯುವ ಸಂದರ್ಭದಲ್ಲಿಯೇ ಮತ್ತೆ ಇಂಡಿ ಕೂಗು ಶುರುವಾಗಿದೆ.
ಕಾಂಗ್ರೆಸ್ ಸರ್ಕಾರದ್ದು ಕಳಪೆ ಬೀಜ; ನಮ್ಮ ತೊಗರಿ ಬೆಳೆ ಕಾಯಿ ಬಿಡ್ತಿಲ್ಲ ಸ್ವಾಮೀ ಎಂದ ರೈತ!
ಇಂಡಿ ಜಿಲ್ಲೆಯಾದ್ರೆ ತಾಲೂಕು ಯಾವುವು..!?
ಕಳೆದ ಹಲವು ವರ್ಷಗಳಿಂದ ಇಂಡಿ ಜಿಲ್ಲೆ ಕೂಗು ಕೇಳುತ್ತಲೆ ಇದೆ. ಸೋಶಿಯಲ್ ಮಿಡಿಯಾದಲ್ಲಿ ಪ್ರತ್ಯೇಕ ಇಂಡಿ ಜಿಲ್ಲೆಯ ನಕ್ಷೆಗಳು ಕಾಣಿಸಿಕೊಂಡಿವೆ. ಇಂಡಿ, ಸಿಂದಗಿ, ದೇವರಹಿಪ್ಪರಗಿ, ಚಡಚಣ, ಆಲಮೇಲ ತಾಲೂಕು ಸೇರಿ ಇಂಡಿ ಜಿಲ್ಲೆಯಾಗಬೇಕು ಎನ್ನುವ ಬೇಡಿಕೆ ಇದೆ. ಆದ್ರೆ ರಾಜ್ಯದಲ್ಲಿ ಅತಿ ದೊಡ್ಡ ಜಿಲ್ಲೆಯಾಗಿರೋ ಬೆಳಗಾವಿ ಜಿಲ್ಲೆಯೇ ವಿಂಗಡಣೆ ಆಗದೆ ಇರೋವಾಗ ವಿಜಯಪುರ ಜಿಲ್ಲೆ ವಿಂಗಡಣೆಯಾಗಿ ಇಂಡಿ ಪ್ರತ್ಯೇಕ ಜಿಲ್ಲೆಯಾಗುತ್ತಾ ಎನ್ನುವ ಪ್ರಶ್ನೆಗಳಿವೆ..
ಇಂಡಿ ರಸ್ತೆಗಳ ಅಭಿವೃದ್ಧಿಯಾಗಲಿ, ಸಾರ್ವಜನಿಕರು..!
ಇಂಡಿ ಪ್ರತ್ಯೇಕ ಜಿಲ್ಲೆಯ ಕೂಗು ಶುರುವಾದಾಗಲೆಲ್ಲ, ಈ ಬಗ್ಗೆ ಇಂಡಿ ಜನರು ಏನ್ ಹೇಳ್ತಾರೆ ಎನ್ನುವ ಕುತೂಹಲ ಇದ್ದೆ ಇರುತ್ತೆ. ಹಾಗೆ ಇಂಡಿ ಪಟ್ಟಣ, ಇಂಡಿ ತಾಲೂಕಿನ ನಿವಾಸಿಗಳಿಗೆ ಇಂಡಿ ಜಿಲ್ಲೆಯ ಬಗ್ಗೆ ಪ್ರಶ್ನಿಸಿದಾಗ ಅಚ್ಚರಿಯ ವಿಚಾರಗಳು ಕೇಳಿ ಬಂದಿವೆ. ಇಂಡಿ ಜಿಲ್ಲೆಯಾಗಬೇಕು. ಇಂಡಿ ಜಿಲ್ಲೆಯಾದ್ರೆ ಸ್ವಾಗತ. ಅದಕ್ಕೂ ಮೊದಲು ಇಂಡಿಯ ರಸ್ತೆಗಳ ಅಭಿವೃದ್ಧಿ ಹೊಂದಬೇಕು ಎನ್ನುವ ಬೇಡಿಕೆ ಇಟ್ಟಿದ್ದಾರೆ. ವಿಜಯಪುರದಿಂದ ಇಂಡಿ ರಸ್ತೆ, ಇಂಡಿ - ಅಗರಖೇಡ, ರೂಗಿ ರಸ್ತೆಗಳು ಸುಧಾರಣೆಯಾಗಬೇಕು ಎಂದಿದ್ದಾರೆ.