ರೈತರ ವಿದ್ಯುತ್ ಸಂಪರ್ಕಕ್ಕೆ ವಿಧಿಸಿರುವ ಶುಲ್ಕ ಕೈಬಿಡಿ : ಬಡಗಲಪುರ ನಾಗೇಂದ್ರ
ಕೃಷಿ ಪಂಪ್‌ಸೆಟ್ ಗಳ ಅಕ್ರಮ ಸಂಪರ್ಕ ಸಕ್ರಮಗೊಳಿಸಿಕೊಳ್ಳಲು ಮತ್ತು ಹೊಸ ವಿದ್ಯುತ್ ಸಂಪರ್ಕ ಪಡೆಯಲು ರಾಜ್ಯ ಸರ್ಕಾರ ಖರ್ಚು ವೆಚ್ಚವನ್ನು ರೈತರೇ ಭರಿಸಿಕೊಳ್ಳಬೇಕು ಎಂಬ ತೀರ್ಮಾನ ಹಿಂದಕ್ಕೆ ಪಡೆಯಬೇಕು ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದ್ದಾರೆ.
ಮೈಸೂರು:ಕೃಷಿ ಪಂಪ್‌ಸೆಟ್ ಗಳ ಅಕ್ರಮ ಸಂಪರ್ಕ ಸಕ್ರಮಗೊಳಿಸಿಕೊಳ್ಳಲು ಮತ್ತು ಹೊಸ ವಿದ್ಯುತ್ ಸಂಪರ್ಕ ಪಡೆಯಲು ರಾಜ್ಯ ಸರ್ಕಾರ ಖರ್ಚು ವೆಚ್ಚವನ್ನು ರೈತರೇ ಭರಿಸಿಕೊಳ್ಳಬೇಕು ಎಂಬ ತೀರ್ಮಾನ ಹಿಂದಕ್ಕೆ ಪಡೆಯಬೇಕು ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದ್ದಾರೆ.
ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಇಲ್ಲ, ಬರಗಾಲದಲ್ಲೂ ಕೊಳವೆಬಾವಿಗಳ ನೀರಾವರಿ ಮೂಲಕ ವ್ಯವಸಾಯ ಮಾಡಿ ಸಮಾಜಕ್ಕೆ ಹಣ್ಣು- ಹಂಪಲು ಇತರೆ ಆಹಾರ ಪದಾರ್ಥವನ್ನು ರೈತರು ಬೆಳೆದುಕೊಳ್ಳುತ್ತಿದ್ದಾರೆ. ಸರ್ಕಾರ ಅಕ್ರಮ ಸಂಪರ್ಕ ಸಕ್ರಮಗೊಳಿಸಲು ಮತ್ತು ಹೊಸ ವಿದ್ಯುತ್ ಸಂಪರ್ಕ ಪಡೆಯಲು ದುಬಾರಿ ಶುಲ್ಕವಿಧಿಸಿದ್ದು, ಇದು ರೈತರಿಗೆ ಹೊರೆಯಾಗಿದೆ. ಈ ನೀತಿಯನ್ನು ಕೈಬಿಡಬೇಕು ಎಂದು ರಾಜ್ಯ ಸರ್ಕಾರವನ್ನು ಸಂಘವು ಒತ್ತಾಯಿಸುತ್ತಲೇ ಬಂದಿದ್ದು, ಸರ್ಕಾರ ಈ ಬಗ್ಗೆ ಗಮನ ಹರಿಸದೇ ಇರುವುದು ಖಂಡನೀಯ ಎಂದು ಅವರು ಹೇಳಿದ್ದಾರೆ.
ಕೂಡಲೇ ಸರ್ಕಾರ ಈ ನೀತಿಯನ್ನು ಕೈಬಿಟ್ಟು ಹಿಂದೆ ಇದ್ದ ನೀತಿ ಮುಂದುವರೆಸಬೇಕು. ತಪ್ಪದರೆ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿದ್ದಾರೆ.
ಬರ ಪರಿಹಾರ ನೀಡಲು ಅನುಮತಿ ನೀಡಲಿ
ರಾಜ್ಯದಲ್ಲಿ ತೀವ್ರ ಬರಗಾಲ ಉಂಟಾಗಿರುವುದರಿಂದ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆಗೊಳಿಸಲು ಚುನಾವಣಾ ನೀತಿ ಸಂಹಿತೆ ನೆಪ ಹೇಳುತ್ತಿದೆ. ಕೂಡಲೇ ಆಯೋಗವು ಅನುದಾನ ಬಿಡುಗಡೆಗೆ ಅನುಮತಿ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.