Asianet Suvarna News

ಬಿಜೆಪಿ ವಕ್ತಾರನ ಮೊಬೈಲ್‌ನಿಂದ ಅಶ್ಲೀಲ ಫೋಟೋ ವೈರಲ್‌..!

* ವಿವಿಧ ವಾಟ್ಸಾಪ್‌ ಗ್ರೂಪ್‌ಗಳಿಗೆ ಹರಿಬಿಡಲಾಗಿದೆ ಅಶ್ಲೀಲ ಫೋಟೋ
* ಬಿಜೆಪಿ ಕಾರ್ಯಕರ್ತರಿಗೆ ತೀವ್ರ ಮುಜುಗರ
* ಬೆಳಗಾವಿ ನಗರದ ಖಡೆ ಬಜಾರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು
 

Vulgar Photo Viral from BJP Spokesperson Mobile in Belagavi grg
Author
Bengaluru, First Published Jun 30, 2021, 3:44 PM IST
  • Facebook
  • Twitter
  • Whatsapp

ಬೆಳಗಾವಿ(ಜೂ.30): ನಗರ ಬಿಜೆಪಿ ಮಾಧ್ಯಮ ವಕ್ತಾರನ ವಾಟ್ಸಾಪ್‌ನಿಂದ ಬೇರೆ ಬೇರೆ ವಾಟ್ಸಾಪ್‌ ಗ್ರೂಪ್‌ಗಳಿಗೆ ಅಶ್ಲೀಲ ಫೋಟೋ ಹರಿಬಿಟ್ಟಿರುವುದರಿಂದ ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. 

ಮಾಧ್ಯಮ ವಕ್ತಾರ ಶರದ್ ಪಾಟೀಲ್‌ ಎಂಬುವವರ ನಂಬರ್‌ನಿಂದ ವಾಟ್ಸಾಪ್‌ ಗ್ರೂಪ್‌ಗೆ ವಯಸ್ಸನ್ನು ಸೋಲಿಸಬೇಕಾದಲ್ಲಿ ಹವ್ಯಾಸಗಳು ಜೀವಂತವಾಗಿರಬೇಕು ಎಂದು ಹಿಂದಿಯಲ್ಲಿ ಬರೆದ ಮಹಿಳೆಯೋರ್ವಳು ಬೆತ್ತಲೆಯಾಗಿರುವ ಚಿತ್ರವನ್ನು ವಿವಿಧ ವಾಟ್ಸಾಪ್‌ ಗ್ರೂಪ್‌ಗಳಿಗೆ ಹರಿಬಿಡಲಾಗಿದೆ. ಇದರಿಂದಾಗಿ ಬಿಜೆಪಿ ನಾಯಕರು ಅಷ್ಟೆ ಅಲ್ಲ, ಕಾರ್ಯಕರ್ತರು ತೀವ್ರ ಮುಜುಗರಗೊಳ್ಳುವಂತೆ ಮಾಡಿದೆ.

ಇನ್‌ಸ್ಟ್ರಾಗ್ರಾಂನಲ್ಲಿ ಅಪ್ರಾಪ್ತೆಯರ ಅಶ್ಲೀಲ ಫೋಟೋ ಶೇರ್‌ ಮಾಡಿದ ವಿದ್ಯಾರ್ಥಿ

ವಾಟ್ಸ್‌ಆಪ್‌ ಗ್ರೂಪ್‌ಗಳಲ್ಲಿ ಯುವತಿಯ ಬೆತ್ತಲೇ ಫೋಟೋ ವೈರಲ್‌ ಆಗುತ್ತಿದ್ದಂತೆಯೇ ಬಿಜೆಪಿ ಮಾಧ್ಯಮ ವಕ್ತಾರ ಶರದ್ ಪಾಟೀಲ್‌, ಸೋಮವಾರ ರಾತ್ರಿ ತಮ್ಮ ಮೊಬೈಲ್‌ ಕಳೆದು ಹೋಗಿದೆ ಎಂದು ನಗರದ ಖಡೆ ಬಜಾರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
 

Follow Us:
Download App:
  • android
  • ios