Asianet Suvarna News Asianet Suvarna News

BJP ಶಾಸಕರೋರ್ವರ ವಿರುದ್ಧ ಫೇಸ್‌ಬುಕ್‌ನಲ್ಲಿ ಕೊಳಕು ಕಾಮೆಂಟ್‌ : ದೂರು

ಬಿಜೆಪಿ ಮುಖಂಡರೋರ್ವರ ವಿರುದ್ಧ ಕೊಳಕು ಕಮೆಂಟ್ ಮಾಡಿದ್ದು ಈ ಸಂಬಂಧ ದೂರು ದಾಖಲು ಮಾಡಲಾಗಿದೆ. 

Vulgar Comment Posted  Against Sunil subramani in Facebook  snr
Author
Bengaluru, First Published Oct 28, 2020, 7:37 AM IST

ಮಡಿಕೇರಿ (ಅ.28): ಕೊಡಗು ಜಿಲ್ಲೆಯ ವಿಧಾನಪರಿಷತ್‌ ಸದಸ್ಯ ಎಂ.ಪಿ. ಸುನೀಲ್‌ ಸುಬ್ರಮಣಿ ಅವರು ಹೊಂದಿರುವ ಫೇಸ್‌ಬುಕ್‌ ಖಾತೆಗೆ ಕೆಲವು ಕಿಡಿಗೇಡಿಗಳು ಅವಾಚ್ಯ ಕಾಮೆಂಟ್‌ಗಳನ್ನು ಪೋಸ್ಟ್‌ ಮಾಡುತ್ತಿದ್ದು, ಸೈಬರ್‌ ಕ್ರೈಂಗೆ ದೂರು ನೀಡಲಾಗಿದೆ.

ಲೆಪರ್ಡ್‌ ಫಿಫ್ಟಿಎಯ್‌್ಟಹಿಲ್ಸ್‌, ಟಿಪ್ಪು ಸುಲ್ತಾನ್‌, ಅಮ್ಮ ಕೊಡಗು ಎಂಬ ಹೆಸರಿನಲ್ಲಿ ಅವಾಚ್ಯ ಶಬ್ದಗಳಿಂದ ಕಾಮೆಂಟ್‌ ಹಾಕುತ್ತಿದ್ದಾರೆ. ಇಂಥ ಕಾಮೆಂಟ್‌ ಮಾಡುತ್ತಿರುವವರನ್ನು ಪತ್ತೆ ಹಚ್ಚಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಶಾಸಕರ ಆಪ್ತ ಸಹಾಯಕ ಬಿ.ಎಸ್‌. ಪರಮೇಶ್‌, ಬೆಂಗಳೂರಿನ ಉಪ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದಾರೆ.

ಮಾಡೆಲ್‌ ಆಗಲು ಹೊರಟ ಹಳ್ಳಿ ಹುಡುಗಿ ಕಂಡಿದ್ದು ದುರಂತ ಅಂತ್ಯ; ಇದು ಅಂತಿಂಥ ಕಹಾನಿಯಲ್ಲ! .

ಕೊಡಗು ಜಿಲ್ಲೆಗೆ ಸಂಬಂಧಿ​ಸಿದ ಪೊಸ್ಟ್‌ ಗಳನ್ನು ಮತ್ತು ಕ್ಷೇತ್ರದ ಜನರ ಸಂಬಂಧಿ​ತ ಶುಭಾಶಯ ತಿಳಿಸುವ ಪೋಸ್ಟ್‌ಗಳಿಗೆ ಇತ್ತೀಚಿಗೆ ಅಪರಿಚಿತ ವ್ಯಕ್ತಿಗಳಿಂದ ಅವಾಚ್ಯ ಶಬ್ದಗಳಿಂದ ಕೂಡಿದ ಕಾಮೆಂಟ್‌ಗಳನ್ನು ಪೋಸ್ಟ್‌ ಮಾಡಲಾಗುತ್ತಿದೆ ಎಂದೂ ದೂರಿನಲ್ಲಿ ತಿಳಿಸಲಾಗಿದೆ.

Follow Us:
Download App:
  • android
  • ios