ಹುಬ್ಬಳ್ಳಿಯಲ್ಲಿ VoterGate Scam : ಡಿಸಿ ತನಿಖೆ ಚುರುಕು

ಬೆಂಗಳೂರು ಮಾದರಿಯಲ್ಲೇ ಜಿಲ್ಲೆಯಲ್ಲಿ ನಡೆಯುತ್ತಿದೆ ಎನ್ನಲಾದ ‘ವೋಟರ್‌ಗೇಟ್‌ ಹಗರಣ’ದ ತನಿಖೆ ಇದೀಗ ಚುರುಕುಗೊಂಡಿದೆ. ಎಎಸ್‌ಆರ್‌ ಕಂಪನಿ ವಿರುದ್ಧ ಕೇಳಿ ಬಂದಿರುವ ಆರೋಪದ ವಿಚಾರಣೆಯನ್ನು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರೇ ನಡೆಸಿದ್ದಾರೆ.

Votergate Scam in Hubli soon report to Election Commission rav

ಹುಬ್ಬಳ್ಳಿ (ಡಿ.3) : ಬೆಂಗಳೂರು ಮಾದರಿಯಲ್ಲೇ ಜಿಲ್ಲೆಯಲ್ಲಿ ನಡೆಯುತ್ತಿದೆ ಎನ್ನಲಾದ ‘ವೋಟರ್‌ಗೇಟ್‌ ಹಗರಣ’ದ ತನಿಖೆ ಇದೀಗ ಚುರುಕುಗೊಂಡಿದೆ. ಎಎಸ್‌ಆರ್‌ ಕಂಪನಿ ವಿರುದ್ಧ ಕೇಳಿ ಬಂದಿರುವ ಆರೋಪದ ವಿಚಾರಣೆಯನ್ನು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರೇ ನಡೆಸಿದ್ದಾರೆ. ದೂರುದಾರರಿಂದ ವಿವರಣೆ ಪಡೆದಿರುವ ಜಿಲ್ಲಾಧಿಕಾರಿ, ಶೀಘ್ರ ರಾಜ್ಯ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಈ ನಡುವೆ ಎಎಸ್‌ಆರ್‌ ಕಂಪನಿಯ ಹಿರಿಯ ಅಧಿಕಾರಿಗಳನ್ನು ಪೊಲೀಸರು ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಧಾರವಾಡ ಜಿಲ್ಲೆಯಲ್ಲಿ 1 ಲಕ್ಷಕ್ಕೂ ಅಧಿಕ ಮತದಾರರ ಹೆಸರು ಡಿಲಿಟ್‌!

ನವ ಆನಂದನಗರದಲ್ಲಿ ‘ಚುನಾವಣಾ ಪೂರ್ವ ಸಮೀಕ್ಷೆ’ ನೆಪದಲ್ಲಿ ಎಎಸ್‌ಆರ್‌ ಕಂಪನಿಯ ಪ್ರತಿನಿಧಿಗಳು, ಮತದಾರರ ಮಾಹಿತಿ ಕಳ್ಳತನ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಸಮೀಕ್ಷೆ ನಡೆಸುತ್ತಿದ್ದ ಮೂವರನ್ನು ಕಾಂಗ್ರೆಸ್‌ ಕಾರ್ಯಕರ್ತರು ಹಿಡಿದು ಠಾಣೆಗೆ ಒಪ್ಪಿಸಿದ್ದರು. ಕಾಂಗ್ರೆಸ್‌ ಮುಖಂಡ ರಜತ್‌ ಉಳ್ಳಾಗಡ್ಡಿಮಠ ನೀಡಿರುವ ದೂರಿನನ್ವಯ ಎಫ್‌ಐಆರ್‌ ಕೂಡ ದಾಖಲಾಗಿತ್ತು. ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ನಡುವೆ ಹರ್ಯಾಣ ಮೂಲದ ಎಎಸ್‌ಆರ್‌ ಕಂಪನಿಯ ಹಿರಿಯ ಅಧಿಕಾರಿಗಳಿಗೆ ಠಾಣೆಗೆ ಬರಲು ಸೂಚಿಸಲಾಗಿತ್ತು. ಅದರಂತೆ ಶುಕ್ರವಾರ ಇಬ್ಬರು ಅಧಿಕಾರಿಗಳು ಠಾಣೆಗೆ ವಿಚಾರಣೆಗೆ ಹಾಜರಾಗಿದ್ದರು. ಪೊಲೀಸರು ಇವರಿಂದ ಕೆಲವೊಂದಿಷ್ಟುಮಾಹಿತಿ ಕಲೆ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಪ್ರಕರಣವೂ ಜಿಲ್ಲೆಯಲ್ಲಿ ಸಂಚಲನವನ್ನುಂಟು ಮಾಡಿದೆ.

ಧಾರವಾಡದಲ್ಲಿ ಯುವ ಮತದಾರರ ಸೇರ್ಪಡೆ ಅಭಿಯಾನ, 18 ವರ್ಷ ತುಂಬಿದವರು ಮತದಾರರ ಪಟ್ಟಿಗೆ ಸೇರ್ಪಡೆ

ಜಿಲ್ಲಾಧಿಕಾರಿ ಭೇಟಿ: ಶುಕ್ರವಾರ ಮಧ್ಯಾಹ್ನ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹಳೇಹುಬ್ಬಳ್ಳಿ ಠಾಣೆಗೆ ಭೇಟಿ ನೀಡಿ ಪ್ರಕರಣದ ಮಾಹಿತಿ ಪಡೆದರು. ಜತೆಗೆ ದೂರು ಕೊಟ್ಟಿರುವ ರಜತ್‌ ಉಳ್ಳಾಗಡ್ಡಿಮಠ ಅವರಿಂದಲೂ ಮಾಹಿತಿ ಪಡೆದರು.

Latest Videos
Follow Us:
Download App:
  • android
  • ios