ತೃತೀಯ ಲಿಂಗಿ ಮತದಾರರಿಗೆ ಮತದಾರರ ಚೀಟಿ

ಹೆಣ್ಣು ಮತ್ತು ಗಂಡು ಅಲ್ಲದೆ ತೃತೀಯ ಲಿಂಗಿಗಳಾಗಿಯೇ ಗುರುತಿಸಿಕೊಳ್ಳಲು ಇಚ್ಛಿಸುವವರಿಗೆ ಗುರುತಿನ ಚೀಟಿಯನ್ನು ಒದಗಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದರು.

Voter card for third gender voters snr

 ಮೈಸೂರು :  ಹೆಣ್ಣು ಮತ್ತು ಗಂಡು ಅಲ್ಲದೆ ತೃತೀಯ ಲಿಂಗಿಗಳಾಗಿಯೇ ಗುರುತಿಸಿಕೊಳ್ಳಲು ಇಚ್ಛಿಸುವವರಿಗೆ ಗುರುತಿನ ಚೀಟಿಯನ್ನು ಒದಗಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದರು.

ಜಿಲ್ಲಾ ಸ್ವೀಪ್‌ ಸಮಿತಿಯ ವತಿಯಿಂದ ಜಿಪಂನ ಡಿ. ದೇವರಾಜ ಅರಸು ಸುಭಾಂಗಣದಲ್ಲಿ ಗುರುವಾರ ನಡೆದ ತೃತೀಯ ಲಿಂಗಿ ಮತದಾರರೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ 500 ತೃತೀಯ ಲಿಂಗಿಗಳಿಗೂ ಮತದಾರರ ಚೀಟಿ ದೊರೆಯಬೇಕು. ಎಲ್ಲರೂ ತಪ್ಪದೇ ಮತದಾನ ಮಾಡಬೇಕು ಎಂದು ಹೇಳಿದರು.

ತೃತೀಯಲಿಂಗಿಗಳಾಗಿದ್ದೂ ಗುರುತಿನ ಚೀಟಿಯಲ್ಲಿ ಗಂಡು ಅಥವಾ ಹೆಣ್ಣು ಎಂದಿದ್ದು, ಅದನ್ನು ತಿದ್ದುಪಡಿ ಮಾಡಿಸಿಕೊಂಡು ತೃತೀಯ ಲಿಂಗಿಗಳಾಗಿಯೇ ಗುರುತಿಸಿಕೊಳ್ಳಲು ಇಚ್ಚಿಸುವವರಿಗೆ ಜಿಲ್ಲಾಡಳಿತ ತೃತೀಯ ಲಿಂಗಿಗಳು ಎಂದೇ ಗುರುತಿಸಿ ಗುರುತಿನ ಚೀಟಿ ನೀಡುವ ಅವಕಾಶವಿದೆ. ಈ ಕುರಿತು ಚುನಾವಣೆಗೆ ಸಂಬಂಧಪಟ್ಟಅಧಿಕಾರಿಗಳು ಸ್ಪಂದಿಸದಿದ್ದಲ್ಲಿ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಅಥವಾ ಡೆವಲಪ್ಮೆಂಟ್‌ ಆಫೀಸರಿಗೆ ಮನವಿ ನೀಡಬಹುದು ಎಂದರು.

ಜಿಪಂ ಸಿಇಒ ಕೆ.ಎಂ. ಗಾಯತ್ರಿ ಮಾತನಾಡಿ, ನಿಮ್ಮ ಸಮುದಾಯದಲ್ಲಿ ಎಷ್ಟೇ ವಿಧಗಳಿದ್ದರೂ ಸರ್ಕಾರದಿಂದ ಸೌಲಭ್ಯ ಪಡೆಯುವಾಗ ಎಲ್ಲರೂ ಒಟ್ಟಾಗಿ ಬರಬೇಕು. ಮತದಾರರ ಚೀಟಿ ಪಡೆಯುವಲ್ಲಿ ಏನಾದರೂ ಸಮಸ್ಯೆಗಳಾದಲ್ಲಿ ಸಂಬಂಧಪಟ್ಟಅಧಿಕಾರಿಗಳನ್ನು ಸಂಪರ್ಕಿಸಿ ಗುರುತಿನ ಚೀಟಿ ಪಡೆದುಕೊಳ್ಳಿ ಎಂದು ಸೂಚಿಸಿದರು.

ಈಗಾಗಲೇ ಮತದಾರರ ಪಟ್ಟಿಯಲ್ಲಿ 210 ತೃತೀಯ ಲಿಂಗಿಗಳು ನೋಂದಣಿಯಾಗಿದ್ದು, ಉಳಿದವರೂ ಆದಷ್ಟುಬೇಗ ಮತದಾರರ ಚೀಟಿಯನ್ನು ಪಡೆದುಕೊಳ್ಳಬೇಕು ಎಂದರು.

ನಗರ ಪಾಲಿಕೆಯ ಹೆಚ್ಚುವರಿ ಆಯುಕ್ತೆ ರೂಪ, ಜಿಪಂನ ಉಪ ಕಾರ್ಯದರ್ಶಿ ಕೃಷ್ಣಂರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಸವರಾಜು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಟಿ.ಕೆ ಹರೀಶ್‌, ಆಶೋದಯ ಆಶ್ರಯ ಹಾಗೂ ಸೆವೆನ್‌ ರೈನ್‌ಬೋ ತೃತೀಯ ಲಿಂಗಿಗಳು ಇದ್ದರು.

ಮೊದಲ ತೃತೀಯ ಲಿಂಗಿ ವೈದ್ಯೆ

ಹೈದರಾಬಾದ್‌  ತೆಲಂಗಾಣ ಸರ್ಕಾರ ಗುರುವಾರ ಇಬ್ಬರು ತೃತೀಯಲಿಂಗಿಗಳನ್ನು ಸರ್ಕಾರಿ ಆಸ್ಪತ್ರೆಯ ವೈದ್ಯರನ್ನಾಗಿ ನೇಮಿಸಿದೆ. ಸರ್ಕಾರಿ ಆಸ್ಪತ್ರೆಗೆ ತೃತೀಯ ಲಿಂಗಿಗಳನ್ನು ಅಧಿಕೃತವಾಗಿ ವೈದ್ಯರನ್ನಾಗಿ ನೇಮಕ ಮಾಡಿದ ದೇಶದ ಮೊದಲ ದೃಷ್ಟಾಂತ ಇದಾಗಿದೆ. ಪ್ರಾಚಿ ರಾಥೋಡ್‌ ಹಾಗೂ ರುತ್‌ ಜಾನ್‌ ಪೌಲ್‌ ಹೆಸರಿನ ವೈದ್ಯರನ್ನು ಹೈದರಾಬಾದ್‌ನ ಆಸ್ಪತ್ರೆಗೆ ವೈದ್ಯರನ್ನಾಗಿ ಸರ್ಕಾರ ನೇಮಕ ಮಾಡಿದೆ. ತೆಲಂಗಾಣದ ಸರ್ಕಾರಿ ಒಸ್ಮಾನಿಯಾ ಜನರಲ್‌ ಆಸ್ಪತ್ರೆಯ (ಒಜಿಎಚ್‌) ವೈದ್ಯಕೀಯ ಅಧಿಕಾರಿಗಳಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ತೃತೀಯಲಿಂಗಿ ಆಗಿದ್ದ ಕಾರಣಕ್ಕಾಗಿಯೇ ಪ್ರಾಚಿ ರಾಥೋಡ್‌ಅವರನ್ನು ಖಾಸಗಿ ಆಸ್ಪತ್ರೆಯ ಕೆಲಸದಿಂದ ವಜಾ ಮಾಡಲಾಗಿತ್ತು. ಹೈದರಾಬಾದ್‌ನ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪ್ರಾಚಿ ರಾಥೋಡ್‌ ಅಂದಾಜು ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದರು. ಆದರೆ, ಅವರು ಅವೃತೀಯ ಲಿಂಗಿ ಎನ್ನುವುದು ಗೊತ್ತಾಗುತ್ತಿದ್ದಂತೆ ಅವರನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಬಾಲ್ಯದಿಂದಲೂ ತಾವು ಸಾಮಾಜಿಕ ಕಳಂಕ ಹಾಗೂ ತಾರತಮ್ಯವನ್ನು ಅನುಭವಿಸಿದ್ದೇನೆ ಎಂದು ಪ್ರಾಚಿ ರಾಥೋಡ್‌ ಪಿಟಿಐಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದಿಲಾಬಾದ್‌ನ ವೈದ್ಯಕೀಯ ಕಾಲೇಜಿನಿಂದ 2015ರಲ್ಲಿ ಪ್ರಾಚಿ ರಾಥೋಡ್‌ ಎಂಬಿಬಿಎಸ್‌ ಪದವಿ ಪಡೆದಿದ್ದರು.

ಎಂಬಿಬಿಎಸ್‌ ಪದವಿ ಪಡೆದ ಬಳಿಕ ಉನ್ನತ ವ್ಯಾಸಂಗಕ್ಕಾಗಿ ಪ್ರಾಚಿ ರಾಥೋಡ್‌ ದೆಹಲಿಗೆ ತೆರಳಿದ್ದರು. ಆದರೆ, ಅಲ್ಲಿ ಕಲಿಯುವ ಸೂಕ್ತ ವಾತಾವರಣವಿರಲಿಲ್ಲ. ಪ್ರತಿ ದಿನವೂ ಹಿಂಜರಿಕೆಯಲ್ಲಿ ದಿನ ದೂಡಬೇಕಾಗಿತ್ತು. ಆ ಕಾರಣದಿಂದಾಗಿ ನಾನು ಹೈದರಾಬಾದ್‌ಗೆ ಮರಳಿದೆ. ಬಳಿಕ ಹೈದರಾಬಾದ್‌ನಲ್ಲಿಯೇ ಎಮರ್ಜೆನ್ಸಿ ಮೆಡಿಸಿನ್‌ ವಿಭಾಗದಲ್ಲಿ ಡಿಪ್ಲೊಮಾ ಮಾಡಿದ್ದಾಗಿ ತಿಳಿಸಿದ್ದಾರೆ.
ಆಸ್ಪತ್ರೆಗೆ ಬರುವ ರೋಗಿಗಳಿಗೆ ಅವರು ತೊಂದರೆ ಉಂಟು ಮಾಡಬಹುದು ಎನ್ನುವ ಕಾರಣ ನೀಡಿ ಪ್ರಾಚಿ ದೇಸಾಯಿ ಅವರನ್ನು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಕೆಲಸದಿಂದ ವಜಾ ಮಾಡಿತ್ತು. ಅದಾದ ಬಳಿಕ, ಪ್ರಾಚಿ ರಾಥೋಡ್‌ ಅವರ ಸಹಾಯಕ್ಕೆ ಎನ್‌ಜಿಓ ಆಗಮಿಸಿತ್ತು. ಆ ಎನ್‌ಜಿಓ ತಮ್ಮದೇ ಒಂದು ಕ್ಲಿನಿಕ್‌ನಲ್ಲಿ ಕೆಲಸ ನೀಡಿತ್ತು. ಅದಾದ ಬಳಿಕ ನಾನು ಒಸ್ಮಾನಿಯಾ ಜನರಲ್‌ ಹಾಸ್ಪಿಟಲ್‌ನಲ್ಲಿ ಕೆಲಸದ ಅವಕಾಶ ಪಡೆದುಕೊಂಡಿದ್ದಾಗಿ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios