ವಿಜಯಪುರ, (ಜ.09): ಜಿಲ್ಲೆಯಲ್ಲಿ ಊಡೂ ಮಾದರಿಯ ವಾಮಾಚಾರ ಸದ್ದು ಮಾಡಿದೆ. ಗ್ರಾ.ಪಂ ಚುನಾವಣೆಯಲ್ಲಿ ಅಭ್ಯರ್ಥಿಯನ್ನ ಸೋಲಿಸಲು ಗೊಂಬೆಗೆ ಭಾವಚಿತ್ರ ಅಂಟಿಸಿ ಸಮಾಧಿಯೊಂದರ ಮೇಲೆ ಇಟ್ಟು ಊಡೂ ಮಾದರಿಯ ವಾಮಾಚಾರ ಮಾಡಲಾಗಿದೆ.

 ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಶಿವಪುರ ಗ್ರಾಮದಲ್ಲಿ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಸಲಿಂಗಪ್ಪ ಜೆಟ್ಟಪ್ಪ  ಮಕಾಳಿ ಊರ್ಫ್ ಬಸಲಿಂಗಪ್ಪ ಸಾಹುಕಾರ್ ಭಾವಚಿತ್ರಕ್ಕೆ ಮುಳ್ಳು ಚುಚ್ಚಿ ವಾಮಾಚಾರ ಮಾಡಿದ ಊಡೂ ಗೊಂಬೆ ಪತ್ತೆಯಾಗಿದೆ. 

ಗೊಂಬೆಗೆ ಬಸಲಿಂಗಪ್ಪ ಭಾವಚಿತ್ರವನ್ನ ಮುಳ್ಳಿನ ಮೂಲಕ ಚುಚ್ಚಿ ಅಂಟಿಸಿರುವ ದುಷ್ಕರ್ಮಿಗಳು ಊರ ಹೊರಗಿನ ಸಮಾಧಿ ಮೇಲೆ ಇಟ್ಟು ಕುಂಕುಮದಿಂದ ವಾಮಾಚಾರ ನಡೆಸಿದ್ದಾರೆ. 

ಮತಗಟ್ಟೆ ಗೇಟ್‌ಗೆ ಮಡಿಕೆ, ತಾಯತ.. ಮೈಸೂರಿನಲ್ಲಿ ಮಾಟಮಂತ್ರ!

ಇನ್ನು ಇದನ್ನು ಕಂಡ ಅಭ್ಯರ್ಥಿ ಬಸಲಿಂಗಪ್ಪ ಶಾಕ್ ಆಗಿದ್ರೆ, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಇನ್ನು ಕಾಕತಾಳೀಯವೋ ಅಥವಾ ವಾಮಾಚಾರದ ಎಫೆಕ್ಟೋ ಗೊತ್ತಿಲ್ಲ ಚುನಾವಣೆಯಲ್ಲಿ ಬಸಲಿಂಗಪ್ಪ ಮಕಾಳಿ ಸೋತಿದ್ದಾರೆ.

 ಸೋತ ಅಭ್ಯರ್ಥಿ ಬಸಲಿಂಗಪ್ಪ ಗ್ರಾಪಂ ಚುನಾವಣಾ ನಾಮನೇಶನ ನೀಡುವ ಮುನ್ನ ಗ್ರಾಮದಲ್ಲಿ ಉತ್ತರ ಪ್ರದೇಶ ಮೂಲದ ತಾಂತ್ರಿಕರು ಬಂದಿದ್ದರು ಎನ್ನಲಾಗಿದೆ.

 ಇನ್ನು ಬಸಲಿಂಗಪ್ಪ ಮಕಾಳಿ ಈ ಚುನಾವಣೆಯಲ್ಲಿ 395 ಮತಪಡೆದು ಸೋತಿದ್ದು, ಗ್ರಾಮದಲ್ಲಿ ವಾಮಾಚಾರದಿಂದಲೇ ಸೋತಿರಬೇಕು ಅಂತಾ ಜನರು ಬೆಚ್ಚಿಬಿದ್ದಿದ್ದಾರೆ. ತಾಲೂಕಾಡಳಿತ ಮೂಕಿಹಾಳ ಪಂಚಾಯ್ತಿಯ ಶಿವಪುರ ಗ್ರಾಮಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.