ಮೈಸೂರು(ಡಿ. 20)  ಮೈಸೂರು ಜಿಲ್ಲೆ ಕರ್ಪೂರವಳ್ಳಿ ಗ್ರಾ.ಪಂ.ವ್ಯಾಪ್ತಿಯ ರಾಂಪುರ ಗ್ರಾಮದ ಮತಗಟ್ಟೆಯಲ್ಲಿ ವಾಮಾಚಾರ ಶಂಕೆ ವ್ಯಕ್ತವಾಗಿದೆ.

ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನ ಗ್ರಾಮದ ಮತಗಟ್ಟೆ ಸಂಖ್ಯೆ 19ರಲ್ಲಿ ವಾಮಾಚಾರ ಮಾಡಿದ್ದಾರೆ ಎನ್ನಲಾಗಿದೆ. 7 ಮಂದಿ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದು  ಇದರಲ್ಲಿ ಒಬ್ಬರು ವಾಮಾಚಾರ ಮಾಡಿರುವ ಆರೋಪ ಕೇಳಿಬಂದಿದೆ. 

ಮತಕೇಂದ್ರದ ಮುಂದೆ ಮಡಿಕೆ ಗೇಟ್‌ಗೆ ತಾಯತ ಕಟ್ಟಲಾಗಿದೆ. 7 ಅಭ್ಯರ್ಥಿಗಳು ಈ ಬಗ್ಗೆ ಪ್ರಮಾಣ ಮಾಡಲು  ಜನರು ಒತ್ತಾಯ ಮಾಡಿದ್ದಾರೆ. ಇಲ್ಲವಾದರೆ ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.