ರಾಮಮಂದಿರಕ್ಕಾಗಿ ಪ್ರಧಾನಿ ಮೋದಿ ಸಂಕಲ್ಪ: ಪೇಜಾವರ ಶ್ರೀ
ದೆಹಲಿ ರೈತ ಹೋರಾಟ ಚಳವಳಿಯಂತೆ ಇಲ್ಲ| ಪ್ರಧಾನಿ ಮೋದಿ ಸಮಸ್ಯೆ ಪರಿಹಾರಕ್ಕೆ ಮಾತುಕತೆಗೆ ಕರೆದರೂ ಅವರು ಹೋಗುತ್ತಿಲ್ಲ. ಹೀಗಾಗಿ ಅದು ರೈತ ಚಳವಳಿಯಂತೆ ಕಾಣಿಸುವುದಿಲ್ಲ: ವಿಶ್ವಪ್ರಸನ್ನತೀರ್ಥ ಸ್ವಾಮೀಜಿ|
ಬಾಗಲಕೋಟೆ(ಡಿ.28): ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ಪೂರ್ಣವಾಗುವವರೆಗೆ ಕೇಶ ತೆಗೆಯುವುದಿಲ್ಲವೆಂದು ಸಂಕಲ್ಪ ಮಾಡಿರಬಹುದು ಎಂದು ನಮಗೆ ಕಾಣುತ್ತದೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ನರೇಂದ್ರ ಮೋದಿಯವರ ವೇಷಭೂಷಣ ಬದಲಾವಣೆ ಮತ್ತು ಅವರಲ್ಲಿನ ಆಧ್ಯಾತ್ಮಿದೆಡೆಗೆ ಒಲವು ಕುರಿತು ಕೆಳಲಾದ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಇದರಲ್ಲಿ ತಪ್ಪೇನಿಲ್ಲ. ನಮ್ಮಲ್ಲಿ ದೀಕ್ಷಾಬದ್ಧವಾಗುವುದು ಅಂತಿದೆ. ಹೀಗಾಗಿ ಪ್ರಧಾನಿಗಳು ಹಾಗೆ ಮಾಡಿರಬಹುದು ಅನ್ನುವ ಲೆಕ್ಕಾಚಾರ ನಮ್ಮದು ಎಂದು ಅಭಿಪ್ರಾಯಪಟ್ಟರು.
ಅಯೋಧ್ಯೆ ರಾಮಮಂದಿರ ಟ್ರಸ್ಟ್‌ಗೆ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ನೇಮಕ
ಇದೇ ವೇಳೆ, ದೆಹಲಿಯಲ್ಲಿ ನಡೆಯುತ್ತಿರುವ ರೈತರ ಬೃಹತ್ ಚಳುವಳಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ದೆಹಲಿಯಲ್ಲಿನ ಬೃಹತ್ ಚಳವಳಿ ರೈತರ ಚಳವಳಿಯಂತೆ ಕಾಣುತ್ತಿಲ್ಲ. ಪ್ರಧಾನಿ ಮೋದಿ ಅವರು ಸಮಸ್ಯೆ ಪರಿಹಾರಕ್ಕೆ ಮಾತುಕತೆಗೆ ಕರೆದರೂ ಅವರು ಹೋಗುತ್ತಿಲ್ಲ. ಹೀಗಾಗಿ ಅದು ರೈತ ಚಳವಳಿಯಂತೆ ಕಾಣಿಸುವುದಿಲ್ಲ ಎಂದರು. ಅಲ್ಲದೆ, ಅಯ್ಯೋಧ್ಯೆಯಲ್ಲಿ ರಾಮಮಂದಿರ ಪೂರ್ಣವಾಗಿ ನಿರ್ಮಾಣವಾಗಲು ಅಂದಾಜು 1500 ಕೋಟಿಗಳ ಬಜೆಟ್‌ನ್ನು ಮಾಡಲಾಗಿದೆ ಎಂದು ರಾಮಮಂದಿರ ಟ್ರಸ್ಟ್ ಸದಸ್ಯರೂ ಆಗಿರುವ ಪೇಜಾವರ ಶ್ರೀ ತಿಳಿಸಿದ್ದಾರೆ.