ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಜಗಜೀವನರಾಮ್‌ ನಗರ ವಾರ್ಡ್‌ನಲ್ಲಿ ಹಿಂದು ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಿದ್ದ 2500ಕ್ಕೂ ಅಧಿಕ ಮೃತದೇಹಗಳ ಅವಶೇಷಗಳನ್ನು ಹೊರತೆಗೆದು ಬೇರೆಡೆ ನಾಶಪಡಿಸಿ, ರುದ್ರಭೂಮಿಯಲ್ಲಿ ಅನಧಿಕೃತವಾಗಿ ಪಾಲಿಕೆ ಸೌಧ ನಿರ್ಮಿಸಲಾಗಿದೆ. ಇದಕ್ಕೆ  ಕಾರಣವಾದ ಅಧಿಕಾರಿಗಳ ಈ ಬಗ್ಗೆ ವಿಶ್ವ ಸನಾತನ ಪರಿಷತ್‌ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ದೂರು ನೀಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು: ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಜಗಜೀವನರಾಮ್‌ ನಗರ ವಾರ್ಡ್‌ನಲ್ಲಿ ಹಿಂದು ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಿದ್ದ 2500ಕ್ಕೂ ಅಧಿಕ ಮೃತದೇಹಗಳ ಅವಶೇಷಗಳನ್ನು ಹೊರತೆಗೆದು ಬೇರೆಡೆ ನಾಶಪಡಿಸಿ, ರುದ್ರಭೂಮಿಯಲ್ಲಿ ಅನಧಿಕೃತವಾಗಿ ಪಾಲಿಕೆ ಸೌಧ ನಿರ್ಮಿಸಲು ಕಾರಣವಾದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ವಿಶ್ವ ಸನಾತನ ಪರಿಷತ್‌ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ದೂರು ನೀಡಿದೆ.

ಜಗಜೀವನರಾಮ್‌ ನಗರ ವಾರ್ಡ್‌ನಲ್ಲಿ ಒಟ್ಟು 4 ರುದ್ರಭೂಮಿ (ಹಿಂದು, ಕನ್ನಡ ಹಿಂದು, ತಮಿಳು ಹಿಂದು ಮತ್ತು ಕನ್ನಡಿಗ ಹಿಂದು) ಇದೆ. ಅವುಗಳಲ್ಲಿ ಕನ್ನಡ ಹಿಂದು ಮತ್ತು ತಮಿಳು ಹಿಂದು ರುದ್ರಭೂಮಿಯ ಪ್ರದೇಶವನ್ನು 2018ರಿಂದ ಈಚೆಗೆ 8 ಅಡಿಗಳಷ್ಟುರಾತ್ರೋ-ರಾತ್ರಿ ಅಗೆದು ಶವಗಳನ್ನು ಹೊರತೆಗೆದು ಬೇರೆಡೆ ನಾಶಪಡಿಸಲಾಗಿದೆ. ಇದರ ಮೇಲೆ ಬೇರೆಡೆಯಿಂದ ಮಣ್ಣು ತುಂಬಿ ಮೈದಾನವಾಗಿ ಪರಿವರ್ತಿಸಲಾಗಿದೆ. ಒಂದು ಭಾಗದಲ್ಲಿ ವಾಹನಗಳ ನಿಲುಗಡೆ ತಾಣವನ್ನಾಗಿ ಪರಿವರ್ತಿಸಲಾಗಿದೆ. ಮತ್ತೊಂದು ಭಾಗದಲ್ಲಿ ಅನಧಿಕೃತವಾಗಿ ಪಾಲಿಕೆ ಸೌಧವನ್ನು ನಿರ್ಮಿಸಲಾಗಿದೆ. ರುದ್ರಭೂಮಿಯಲ್ಲಿ ಪಾಲಿಕೆ ಸೌಧ ನಿರ್ಮಾಣಕ್ಕೆ ಕಾರಣವಾದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.

ಬಾಳೆಹೊನ್ನೂರು: ಹಿಂದೂ ರುದ್ರಭೂಮಿ ಅಭಿವೃದ್ಧಿಗೆ ನಿರ್ಧಾರ

ಕನ್ನಡ ಮತ್ತು ಹಿಂದು ರುದ್ರಭೂಮಿಯಲ್ಲಿ ಜನರು ಶವಗಳನ್ನು ಹೂಳಲು ಬಂದರೆ, ಅವುಗಳನ್ನು ವಿದ್ಯುತ್‌ ಚಿತಾಗಾರದಲ್ಲಿ ಸುಡುವಂತೆ ಪಾಲಿಕೆ ಸಿಬ್ಬಂದಿ ಬಲವಂತ ಮಾಡುತ್ತಾರೆ. ಇವರ ಮಾತನ್ನು ತಿರಸ್ಕರಿಸಿ ಭೂಮಿಯಲ್ಲಿ ಶವ ಸಂಸ್ಕಾರ ಮಾಡಿ ಹೋದರೆ ಒಂದು ವಾರದಲ್ಲಿ ಶವ ನಾಶಪಡಿಸುತ್ತಾರೆ. ಇಲ್ಲಿ ಮಹಮ್ಮದೀಯರ ಶವಗಳನ್ನು ಹೂಳಲು ಹುನ್ನಾರ ಮಾಡಲಾಗಿದೆ. ಜತೆಗೆ, ರುದ್ರಭೂಮಿ ತೆರವುಗೊಳಿಸಿದ ಅರ್ಧ ಎಕರೆ ಜಾಗವನ್ನು ಶಾಸಕ ಜಮೀರ್‌ ಅಹಮದ್‌ ಮತ್ತು ಮಾಜಿ ಪಾಲಿಕೆ ಸದಸ್ಯೆ ಸೀಮಾ ಅಲ್ತಾಫ್‌ ಖಾನ್‌ ಸೇರಿ ರಿಯಲ್‌ ಎಸ್ಟೇಟ್‌ ಉದ್ಯಮಿಗಳಿಗೆ ಮಾರಾಟ ಮಾಡಿದ್ದಾರೆ. ಇಲ್ಲಿ ಸಿಮೆಂಟ್‌ ಬ್ಲಾಕ್‌ಗಳನ್ನು ನಿರ್ಮಿಸುವ ಸಣ್ಣ ಉದ್ಯಮವನ್ನೂ ಆರಂಭಿಸಲಾಗಿದೆ. ಒಟ್ಟಾರೆ ಹಿಂದು ಧರ್ಮದವರ ಭಾವನೆಗಳಿಗೆ ಬೆಲೆ ನೀಡದೇ ಕಾನೂನು ನಿಯಮ ಉಲ್ಲಂಘಿಸಿ ರುದ್ರಭೂಮಿ ನಾಶಪಡಿಸಿದ ಎಲ್ಲರ ಮೇಲೂ ಕ್ರಮ ಕೈಗೊಳ್ಳುವ ಜತೆಗೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಜೈಲಿಗೆ ಕಳಿಸುವಂತೆ ಪತ್ರದಲ್ಲಿ ಒತ್ತಾಯಿಸಲಾಗಿದೆ.

ಹಿಂದೂ ವಿಧಿವಿಧಾನಗಳಂತೆ ಮೃತ ಯುವಕನ ಅಂತ್ಯಕ್ರಿಯೆ ಮಾಡಿದ ಮುಸ್ಲಿಂ ಬಾಂಧವರು