ಡೆಂಗ್ಯೂ ಜ್ವರದಿಂದ ತತ್ತರಿಸಿರುವ ಚಿಕ್ಕಮಗಳೂರಿನಲ್ಲಿ ವೈರಲ್ ಫೀವರ್: ಇದು ಹೇಗೆ ಸಾಧ್ಯ ಅನ್ನೋದು ಯಕ್ಷಪ್ರಶ್ನೆ

ಕಾಫಿನಾಡು ಚಿಕ್ಕಮಗಳೂರು ತಾಲೂಕಿನ ಬಯಲು ಸೀಮೆಯ ದೇವಗೊಂಡನಹಳ್ಳಿ ಗ್ರಾಮದಲ್ಲಿ ಜನರು ಜ್ವರದಿಂದ ತತ್ತರಿಸಿ ಹೋಗಿದ್ದಾರೆ. 400 ಮನೆಗಳ ಗ್ರಾಮದಲ್ಲಿ 1500 ಜನರದ್ದು  800ಕ್ಕೂ ಅಧಿಕ ಜನರಿಗೆ ಒಂದೇ ಸಮನಾದ ಕಾಯಿಲೆ. 

Viral fever in Chikkamagaluru which is reeling from dengue fever gvd

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು (ಜು.12): ಕಾಫಿನಾಡು ಚಿಕ್ಕಮಗಳೂರು ತಾಲೂಕಿನ ಬಯಲು ಸೀಮೆಯ ದೇವಗೊಂಡನಹಳ್ಳಿ ಗ್ರಾಮದಲ್ಲಿ ಜನರು ಜ್ವರದಿಂದ ತತ್ತರಿಸಿ ಹೋಗಿದ್ದಾರೆ. 400 ಮನೆಗಳ ಗ್ರಾಮದಲ್ಲಿ 1500 ಜನರದ್ದು  800ಕ್ಕೂ ಅಧಿಕ ಜನರಿಗೆ ಒಂದೇ ಸಮನಾದ ಕಾಯಿಲೆ. ತಲೆನೋವು, ಶೀಥ, ಕೆಮ್ಮು, ಜ್ವರ, ಜಾಯಿಂಟ್ ಪೇನ್, ಮೈಉರಿ. ಮನೆಗಿಬ್ರು ರೋಗಿಗಳು ಫಿಕ್ಸ್. ದಿನಕ್ಕೆ ಮನೆಯಿಂದ ಒಬ್ರಾದ್ರು ಆಸ್ಪತ್ರೆಗೆ ಹೋಗೋದು ಗ್ಯಾರಂಟಿ. ಒಬ್ರೊಬ್ರು ಕೇವಲ ಜ್ವರಕ್ಕೆ ಹತ್ರತ್ರ 15 ಸಾವಿರ ಖರ್ಚು ಮಾಡಿದ್ದಾರೆ. ಊರಲ್ಲಿ ಯಾರನ್ನ ನೋಡುದ್ರು ಕಟ್ಟೆ ಮೇಲೆ ಕೂತಿರೋರೆ. ಕುಂಟೋರೆ. ಕಾಲು ಊದಿದೆ ನೋಡಿ ಅನ್ನೋರೆ. ಅಧಿಕಾರಿಗಳು ಇಂದು ಭೇಟಿ ನೀಡಿ ನೀರಲ್ಲಿ ಲಾರ್ವಾ ಮೊಟ್ಟೆಗಳನ್ನ ಪತ್ತೆ ಹಚ್ಚಿದ್ದಾರೆ. 

ಒಂದೇ ಒಂದು ಡೆಂಗ್ಯೂ, ಚಿಕನ್ ಗುನ್ಯ ಕೇಸ್ ಬಂದಿಲ್ಲ: ದೇವಗೊಂಡನಹಳ್ಳಿ ಗ್ರಾಮದಲ್ಲಿ ಮೌನದ ವಾತಾವರಣ ನಿರ್ಮಾಣವಾಗಿದೆ.  ದೇವಗೊಂಡನಹಳ್ಳಿಗೆ ಎರಡು ತಿಂಗಳಿನಿಂದ ಈ ಗ್ರಹಣವೇ ಅವರಿಸಿದೆ. ಅದು ವಯಸ್ಕರು, ಮಧ್ಯ ವಯಸ್ಕರು ಹಾಗೂ ಮಹಿಳೆಯರಲ್ಲಿ. ಮಕ್ಕಳಿಗೆ ಈ ಗ್ರಹಣ ತಾಕ್ಕಿಲ್ಲ ಅನ್ನೋದೊಂದೇ ಸ್ವಲ್ಪ ಸಮಾಧಾನದ ಸಂಗತಿ. ಎರಡು ತಿಂಗಳ ಹಿಂದೆ ಗ್ರಾಮದ ಕೆಲವರಲ್ಲಿ ಕಾಣಿಸಿಕೊಂಡ ಜ್ವರ, ಮೈ-ಕೈ ನೋವು, ಮಂಡಿನೋವು, ಮೈತುರಿಕೆ ಹಾಗೂ ಉರಿ ಇಂದು ಇಡೀ ಗ್ರಾಮಕ್ಕೆ ಗ್ರಾಮಕ್ಕೆ ಆವರಿಸಿದೆ. ಗ್ರಾಮದ ಮನೆಯಲ್ಲಿ ಇಬ್ಬರು ರೋಗಿಗಳು ಫಿಕ್ಸ್. ಮನೆಗೊಬ್ಬರಂತೆ ದಿನಕ್ಕೊಬ್ಬರು ಆಸ್ಪತ್ರೆಗೆ ಹೋಗೋದು ಫಿಕ್ಸ್. ಜ್ವರಕ್ಕೆ ಒಬ್ಬೊಬ್ಬರು 15 ಸಾವಿರ ಹಣ ಖರ್ಚು ಮಾಡಿದ್ದಾರೆ. ಆದ್ರೆ, ಖಾಯಿಲೆ ಯಾವ್ದು ಮಾತ್ರ ಗೊತ್ತಾಗ್ತಿಲ್ಲ. ಯಾಕಂದ್ರೆ, ಯಾರಿಗೂ ಡೆಂಗ್ಯೂ ಪಾಸಿಟಿವ್ ಬಂದಿಲ್ವಂತೆ.

Chikkamagaluru: ಜೇಡಿಕೊಂಡ ಗ್ರಾಮದ 4 ಕುಟುಂಬಕ್ಕೆ ಕಾತಾಳೆ ಮರದ ಎಲೆಯ ಗುಡಿಸಲೇ ಆಸರೆ: ಕಾರಣವೇನು?

ಇಷ್ಟು ದಿನ ಹೋಗದ ಆರೋಗ್ಯ ಸಿಬ್ಬಂದಿಗಳು ಇಂದು ಭೇಟಿ: ಈಗಾಗಲೇ ಖಾಸಗಿ ಹಾಗೂ ಸರ್ಕಾರಿ ಅಸ್ಪತ್ರೆಗೆ ಅಲೆದು-ಅಲೆದು ಸುಸ್ತಾಗಿರೋ ಗ್ರಾಮದ ಜನ ಮೊದಲು ಜ್ವರ ಕಾಣಿಸಿಕೊಳ್ಳುತ್ತೆ ಬಳಿಕ ಮಂಡಿನೋವು, ಮೈ-ಕೈ ನೋವು, ತುರಿಕೆ-ಉರಿ  ಶುರುವಾಗುತ್ತೆ ಅಂತಿದ್ದಾರೆ. ಆಸ್ಪತ್ರೆಗೆ ಹೋದ್ರೆ ಮಂಡಿನೋವು ಅಂದ ತಕ್ಷಣವೇ ಎಲ್ಲಾದ್ರು ಬಿದ್ರಾ ಅಂತಾರೆ. ಜ್ವರ ಅಂದ ತಕ್ಷಣ ಬ್ಲಡ್ ಟೆಸ್ಟ್ ಮಾಡಿ, ಮೆಡಿಸನ್-ಇಂಜೆಕ್ಷನ್ ನೀಡಿ ಕಳುಹಿಸುತ್ತಾರೆ. ಆದ್ರೆ, ಮೆಡಿಸನ್ ಪವರ್ ಇರೋವರೆಗೂ ರಿಲಿಫ್ ಅನ್ಸುತ್ತೆ. ಮತ್ತೆ ಅದೇ ರಾಗ ಅದೇ ಹಾಡು ಎಂದು ಸ್ಥಳಿಯರು ಈ ಸಾಂಕ್ರಾಂಮಿಕ ರೋಗದ ಬಗ್ಗೆ ನೋವನ್ನ ಹೊರಹಾಕಿದ್ದಾರೆ. ಇಷ್ಟು ದಿನ ಹೋಗದ ಆರೋಗ್ಯ ಸಿಬ್ಬಂದಿಗಳು ಇಂದು ಭೇಟಿ ನೀಡಿದ್ದಾರೆ. ಅವರು ಊರಿನ ಮನೆಯಲ್ಲಿ ಇದ್ದ ನೀರನ್ನ ಟೆಸ್ಟ್ ಮಾಡಿದ್ದಾರೆ. ಅದರಲ್ಲಿ ಡೆಂಗ್ಯೂ-ಚಿಕನ್ ಗುನ್ಯ ಬರುವಂತಹಾ ಸೊಳ್ಳೆಗಳ ಮಾದರಿ ಕೂಡ ಪತ್ತೆಯಾಗಿದೆ.

ಬಿಜೆಪಿಗರು ಸುಳ್ಳಿನ ಪಿತಾಮಹರು, ಅವರ ತಲೆಯಲ್ಲಿ ಮಿದುಳು ಇಲ್ಲ: ಸಚಿವ ರಾಮಲಿಂಗಾರೆಡ್ಡಿ

ಜಿಲ್ಲಾಡಳಿತದ ವಿರುದ್ದ ಆಕ್ರೋಶ: ಸ್ಥಳಕ್ಕೆ ಭೇಟಿ ನೀಡಿದ್ದ ಪರಿಷತ್ ಸದಸ್ಯ ಸಿ.ಟಿ.ರವಿ ಸರ್ಕಾರ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಬೇಕು. ಹೆಲ್ತ್ ಎಮರ್ಜೆನ್ಸಿ ಅನೌನ್ಸ್ ಮಾಡಬೇಕು. ಇಡೀ ಜಿಲ್ಲೆಯೇ ಡೆಂಗ್ಯೂವಿನಿಂದ ಬಳಲುತ್ತಿದೆ. ಜಿಲ್ಲಾಡಳಿತ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ. ಒಟ್ಟಾರೆ, ದೇವಗೊಂಡನಹಳ್ಳಿಯ ಜನರ ಜ್ವರ, ಮೈ-ಕೈನೋವು, ಮಂಡಿನೋವಿಗೆ ಕಾರಣವೇನು ಅಂತಾನೇ ಗೊತ್ತಾಗ್ತಿಲ್ಲ. ಯಾಕಂದ್ರೆ, ಊರಿಗೆ ಊರೇ ಮಲಗಿದ್ರು ಯಾರಿಗೂ ಡೆಂಗ್ಯೂ, ಚಿಕನ್ ಗುನ್ಯ ಪಾಸಿಟಿವ್ ಬಂದಿಲ್ಲ. ಇದು ಹಲವು ಅನುಮಾನಗಳಿಗೆ ಸಾಕ್ಷಿಯಾಗಿದೆ. ಇಡೀ ರಾಜ್ಯವೇ ಜ್ವರದಿಂದ ಬಳಲುತ್ತಿದೆ. ಈ ಗ್ರಾಮಕ್ಕೆ ಗ್ರಾಮವೇ ಮಲಗಿದೆ. ಆದ್ರೆ, ಯಾರಿಗೂ ಡೆಂಗ್ಯೂ-ಚಿಕನ್ ಗುನ್ಯ ಪಾಸಿಟಿವ್ ಬಂದಿಲ್ಲ. ವಿಷಯ ಗೊತ್ತಾಗುತ್ತಿದ್ದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಲಾರ್ವ ಕೊಂಡೊಯ್ದಿದ್ದಾರೆ. ಆದ್ರೆ, ಅದರ ವರದಿ ಏನು ಬರುತ್ತೋ ಎಂದು ಹಳ್ಳಿಗರು ಅತಂತ್ರಕ್ಕೀಡಾಗಿದ್ದಾರೆ.

Latest Videos
Follow Us:
Download App:
  • android
  • ios