ಉಡುಪಿ (ನ.29): ‘ಪಂಚಾಯಿತಿಗಳಲ್ಲಿ ಜನಬೆಂಬಲ ಇರುವ, ಗೆಲ್ಲುವವವರು ಬೇರೆ ಪಕ್ಷಗಳಲ್ಲಿದ್ದರೆ ಅವರನ್ನು ಮನವೊಲಿಸಿ ಬಿಜೆಪಿಗೆ ಕರೆದುಕೊಂಡು ಬನ್ನಿ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ಹೇಳಿರುವುದು, ಬಿಜೆಪಿಯ ಮನೋವೃತ್ತಿಯನ್ನು ಬಿಂಬಿಸುತ್ತದೆ ಎಂದು ಕಾಂಗ್ರೆಸ್‌ನ ಮಾಜಿ ಸಚಿವ ವಿನಯಕುಮಾರ್‌ ಸೊರಕೆ ಟೀಕಿಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಪಂಚಾಯಿತಿ ಸದಸ್ಯರೆಲ್ಲರೂ ಹಿಂದೆ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರೇ ಆಗಿದ್ದವರು. ರಾಜ್ಯದಲ್ಲಿಯೂ ಕಾಂಗ್ರೆಸ್‌- ಜೆಡಿಎಸ್‌ ಶಾಸಕರನ್ನು ಖರೀದಿಸಿಯೇ ಬಿಜೆಪಿ ಸರ್ಕಾರ ರಚಿಸಿದೆ. ಬಿಜೆಪಿಗೆ ಅಧಿಕಾರ ಹೇಗೆ ಪಡೆಯಬೇಕು, ಹೇಗೆ ಉಳಿಸಬೇಕು ಎನ್ನುವುದೇ ಚಿಂತೆ ಹೊರತು ಜನರ ಚಿಂತೆ ಇಲ್ಲ. ಅದನ್ನೇ ಶೋಭಾ ಹೇಳಿದ್ದಾರೆ ಎಂದು ಆರೋಪಿಸಿದರು.

ಈಗಲೂ ಬಿಜೆಪಿ ಸರ್ಕಾರ ಹೊಸ ನಿಗಮಗಳ ಸ್ಥಾಪನೆ, ಮಂಡಳಿಗಳಿಗೆ ಅಧ್ಯಕ್ಷರ ನೇಮಕ, ಸಂಪುಟ ವಿಸ್ತರಣೆಯ ಜಂಜಾಟದಲ್ಲಿ ಮುಳುಗಿರುವುದು ಬಿಟ್ಟರೆ, ಭೀಕರ ಕೊರೋನಾ ನಿಯಂತ್ರಣದಲ್ಲಿ ವಿಫಲವಾಗಿದೆ, ಕಾಂಗ್ರೆಸ್‌ ಸರ್ಕಾರದ ಯೋಜನೆಗಳನ್ನು ರದ್ದು ಮಾಡಿದೆ, ಹೊಸ ಯೋಜನೆಗಳನ್ನು ಜಾರಿಗೊಳಿಸುತಿಲ್ಲ ಎಂದು ಸೊರಕೆ ಹೇಳಿದರು.

ಬಿಜೆಪಿ ರಾಷ್ಟ್ರೀಯ ನಾಯಕಿಯರಿಗೆ ಉಡುಪಿ ಸೀರೆ ಉಡುಗೊರೆ ನೀಡಿದ ಕರಂದ್ಲಾಜೆ

ಸಂಸದೆಯಾಗಿ ಒಂದು ದಿನವೂ ಕಾಪು ಪುರಸಭೆಗೆ ಭೇಟಿ ನೀಡದ ಸಂಸದೆ ಶೋಭಾ ಕರಂದ್ಲಾಜೆ, ಪುರಸಭೆಯ ಅಧ್ಯಕ್ಷರ ಚುನಾವಣೆಯಲ್ಲಿ ಬಹುಮತ ಹೊಂದಿದ್ದ ಕಾಂಗ್ರೆಸ್‌ ಪಕ್ಷವನ್ನು ಸೋಲಿಸುವುದಕ್ಕೆ ಡೆಲ್ಲಿಯಿಂದ ಬಂದು ಮತದಾನ ಮಾಡಿದ್ದಾರೆ ಎಂದರು.

ಸರ್ಕಾರ ಏನ್‌ ಕತ್ತೆ ಕಾಯ್ತಿದೆಯಾ?

ಡ್ರಗ್ಸ್ ಹಣದಿಂದ ಕಾಂಗ್ರೆಸ್‌ ಸರ್ಕಾರ ನಡೆಯುತಿತ್ತು’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳುತ್ತಿದ್ದಾರೆ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿ​ಕ ಏನು ಕತ್ತೆ ಕಾಯುತ್ತಿದೆಯಾ ಯಾಕೆ ಡ್ರW್ಸ… ನಿಲ್ಲಿಸಲಿಕ್ಕಾಗಿಲ್ಲ ಎಂದು ಖಾರವಾಗಿ ಪ್ರಶ್ನಿಸಿದ ಸೊರಕೆ, ಈಗ ಗ್ರಾಪಂ ಚುನಾವಣೆ ಬಂದಾಗ ಎಲ್ಲ ಕೆಟ್ಟದನ್ನು ಕಾಂಗ್ರೆಸ್‌ ತಲೆಗೆ ಕಟ್ಟುತಿದ್ದಾರೆ ಎಂದರು.

ಸಂಸದೆ ಶೋಭಾ ಹೇಳಿದ್ದೇನು ?

ಮುಂಬರುವ ಗ್ರಾಪಂ ಚುನಾವಣೆಯಲ್ಲಿ ಒಳ್ಳೆಯ, ಗೆಲ್ಲುವ, ಜನ ಬೆಂಬಲ ಇರುವ ಅಭ್ಯರ್ಥಿಯನ್ನು, ಅವರು ಯಾವ ಪಕ್ಷದಲ್ಲಿಯೇ ಇರಲಿ ಅವರನ್ನು ಮನವೊಲಿಸಿ ಬಿಜೆಪಿಗೆ ಕರೆ ತನ್ನಿ. ಕೇಂದ್ರದಲ್ಲಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಆದ್ದರಿಂದ ಗ್ರಾಪಂನಲ್ಲಿಯೂ ಬಿಜೆಪಿಯೇ ಬಂದರೆ ಆ ಪಂಚಾಯಿತಿಯನ್ನುಹೆಚ್ಚು ಅಭಿವೃದ್ಧಿಗೊಳಿಸಲು ಸಾಧ್ಯವಾಗುತ್ತದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಶುಕ್ರವಾರ ಗ್ರಾಮಸ್ವರಾಜ್‌ ಸಮವೇಶದಲ್ಲಿ ಕರೆ ನೀಡಿದ್ದರು.