ಬೆಳಗಾವಿ (ಡಿ.03): ಧಾರವಾಡ ಜಿಪಂ ಸದಸ್ಯ ಯೋಗೀಶಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರಿಗೆ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಜೈಲಿನ ಹಿರಿಯ ಅಧಿಕಾರಿಗಳ ಕೃಪಾಕಟಾಕ್ಷದ ಪರಿಣಾಮ ಕುಲಕರ್ಣಿ ಅವರಿಗೆ ವಿಐಪಿ ಸೌಲಭ್ಯ ಕಲ್ಪಿಸಲಾಗುತ್ತಿದೆ ಎನ್ನಲಾಗಿದೆ. ಕೋವಿಡ್‌ ನಿಯಮಾವಳಿ ಅನ್ವಯ ಜೈಲಿನಲ್ಲಿ ಹೊರಗಿನಿಂದ ಯಾವುದೇ ಆಹಾರ ತರುವಂತಿಲ್ಲ. 

ಆದರೆ, ಇಲ್ಲಿ ಈ ನಿಯಮಾವಳಿ ಉಲ್ಲಂಘಿಸಿ ಹೊರಗಿನ ಆಹಾರವನ್ನು ಕುಲಕರ್ಣಿಗೆ ಪೂರೈಕೆ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಮಾತ್ರವಲ್ಲ, ಧಾರವಾಡದ ರೊಟ್ಟಿಊಟ ಸೇರಿದಂತೆ ವಿವಿಧ ಆಹಾರ, ಮದ್ಯ ಹೀಗೆ ಎಲ್ಲವೂ ಇಲ್ಲಿ ಸಿಗುತ್ತಿದೆ. ಈ ಹಿನ್ನೆಲೆಯಲ್ಲಿ ಹಿಂಡಲಗಾ ಜೈಲಿಗೆ ಕಾರಾಗೃಹ ಇಲಾಖೆ ಉತ್ತರ ವಲಯ ಡಿಐಜಿ ಸೋಮಶೇಖರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜೈಲಿನಲ್ಲೇ ಆ ರಾಜಕಾರಣಿಯ ದರ್ಬಾರ್.. ಸ್ಮಾರ್ಟ್‌ ಫೋನು ಮತ್ತೊಂದು! .

ವಿನಯ್‌ ಅವರ ಬೆಂಬಲಿಗರು ಕಾರಿನಲ್ಲಿ ಹಿಂಡಲಗಾ ಜೈಲಿನ ಬಳಿ ಆಗಮಿಸಿ, ಕಾರಾಗೃಹದ ಗದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಕೈದಿಗಳ ಮೂಲಕ ತಾವು ತಂದಿರುವ ಆಹಾರದ ಪಾರ್ಸಲ್‌ಗಳನ್ನು ಪೂರೈಕೆ ಮಾಡುತ್ತಿದ್ದಾರೆ.

ಇದಕ್ಕೆ ಕರ್ತವ್ಯನಿರತ ಜೈಲಧಿಕಾರಿಗಳು ಸಹಾಯ ಮಾಡುತ್ತಿದ್ದಾರೆ ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ಹಿಂಡಲಗಾ ಜೈಲಿಗೆ ಕಾರಾಗೃಹ ಇಲಾಖೆ ಉತ್ತರ ವಲಯ ಡಿಐಜಿ ಸೋಮಶೇಖರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ