ಪಿಎ​ಸ್‌ಐ ಹಗ​ರ​ಣ​ದಿಂದ ಪೊಲೀಸ್‌ ಹುದ್ದೆ​ಗಳು ಭರ್ತಿ​ಯಾ​ಗಿ​ಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

ಆನಂದಪುರ ಹಿಂದಿನ ಸರ್ಕಾರದ ಅವಧಿಯಲ್ಲಿ ಪೊಲೀಸ್‌ ಇಲಾಖೆಯನ್ನು ಸಂಪೂರ್ಣ ಕಡೆಗಣಿಸಿತ್ತು. ಆದರೆ, ನಮ್ಮ ಸರ್ಕಾರದ ಅವಧಿಯಲ್ಲಿ ಪೊಲೀಸ್‌ ಇಲಾಖೆಗೆ ಹೆಚ್ಚಿನ ಆದ್ಯತೆ ನೀಡಿ, ರಾಜ್ಯದಲ್ಲಿ 107 ಪೊಲೀಸ್‌ ಠಾಣೆಗಳನ್ನು ಒಂದೇ ವರ್ಷದಲ್ಲಿ ನಿರ್ಮಾಣ ಮಾಡಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

Police posts are not filled due to PSI Scam Says Home Minister Araga Jnanendra gvd

ಶಿವಮೊಗ್ಗ (ಮಾ.13): ಆನಂದಪುರ ಹಿಂದಿನ ಸರ್ಕಾರದ ಅವಧಿಯಲ್ಲಿ ಪೊಲೀಸ್‌ ಇಲಾಖೆಯನ್ನು ಸಂಪೂರ್ಣ ಕಡೆಗಣಿಸಿತ್ತು. ಆದರೆ, ನಮ್ಮ ಸರ್ಕಾರದ ಅವಧಿಯಲ್ಲಿ ಪೊಲೀಸ್‌ ಇಲಾಖೆಗೆ ಹೆಚ್ಚಿನ ಆದ್ಯತೆ ನೀಡಿ, ರಾಜ್ಯದಲ್ಲಿ 107 ಪೊಲೀಸ್‌ ಠಾಣೆಗಳನ್ನು ಒಂದೇ ವರ್ಷದಲ್ಲಿ ನಿರ್ಮಾಣ ಮಾಡಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಆನಂದಪುರದಲ್ಲಿ ಭಾನುವಾರ ಪೊಲೀಸ್‌ ಠಾಣೆ ಹಾಗೂ 12 ವಸತಿ ಗೃಹಗಳ ಭೂಮಿ ಪೂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಿಎಸ್‌ಐ ಹಗರಣದಲ್ಲಿ ಬೇಲಿಯೇ ಎದ್ದು ಹೊಲ ಮೈಯ್ದ ಪರಿಣಾಮ ಪಿಎಸ್‌ಐ ಹಗರಣ ನಡೆಯಿತು. ಈಗ ಅಧಿಕಾರಿಗಳು ಜೈಲುವಾಸ ಅನುಭವಿಸುತ್ತಿದ್ದಾರೆ.

ಆನಂದಪುರದಲ್ಲಿ ನೂತನ ಪೊಲೀಸ್‌ ಠಾಣೆ ಕಟ್ಟಡಕ್ಕೆ .1.80 ಕೋಟಿ ಹಾಗೂ 12 ವಸತಿ ಗೃಹಗಳನ್ನು .44 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಇನ್ನು ಆರು ತಿಂಗಳಲ್ಲಿ ಹೊಸ ಕಟ್ಟಡ ಕಾಮಗಾರಿ ಮುಗಿಯಲಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ 35,000 ಹುದ್ದೆಗಳು ಖಾಲಿ ಇದ್ದವು. 12 ಸಾವಿರ ಹುದ್ದೆಗಳು ಖಾಲಿ ಇವೆ. ನಾವು ನೇಮಕಕ್ಕೆ ಕ್ರಮ ಕೈಗೊಂಡ ಕಾರಣ ಈಗ 5000 ಹುದ್ದೆಗಳ ನೇಮಕಕ್ಕೆ ಆದೇಶ ಮಾಡಲಾಗಿದೆ ಎಂದರು.

ಜನರ ಜಮೀನಿನ ದರೋಡೆಕೋರನಂತೆ ಸರ್ಕಾರ ವರ್ತಿಸಬಾರದು: ಹೈಕೋರ್ಟ್‌

ಪಿಎಸ್‌ಐ ಹಗರಣ ನಡೆಯದೇ ಇದ್ದರೆ ಯಾವುದೇ ಪೊಲೀಸ್‌ ಹುದ್ದೆಗಳು ಖಾಲಿ ಇರುತ್ತಿರಲಿಲ್ಲ. ನನ್ನ ಅವಧಿಯಲ್ಲಿ ಹಿಜಾಬ್‌ ಸೇರಿದಂತೆ ಹಲವು ಪ್ರಕಾರಗಳನ್ನು ಸರಿಯಾಗಿ ನಿಭಾಯಿಸಿದ ತೃಪ್ತಿ ನನಗಿದೆ. ಇತ್ತೀಚಿನ ದಿನಗಳಲ್ಲಿ ಸೈಬರ್‌ ಕ್ರೈಂಗಳ ಸಂಖ್ಯೆ ಹೆಚ್ಚುತ್ತಿದೆ. ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಒಂದೊಂದು ಸೈಬರ್‌ ಕ್ರೈಂ ಸ್ಟೇಷನ್‌ ಪ್ರಾರಂಭ ಮಾಡಲಾ​ಗಿದೆ. ಕ್ರೈಂ ನಡೆದ ಎರಡು ಗಂಟೆಯೊಳಗೆ 112ಗೆ ಕರೆ ಮಾಡಿ ದೂರು ನೀಡಿದರೆ ಆಗುವಂಥ ಅನಾಹುತವನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಶಾಸಕ ಹರತಾಳು ಹಾಲಪ್ಪ ಮಾತನಾಡಿ, ದೇಶದಲ್ಲಿ ಗಡಿ ಕಾಯುವ ಯೋಧರಿಂದ ದೇಶದ ಎಲ್ಲ ಜನರು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿದೆ. ಹಾಗೆಯೇ, ರಾಜ್ಯದಲ್ಲೂ ಪೊಲೀಸ್‌ ಅಧಿಕಾರಿಗಳ ಉತ್ತಮ ಕಾರ್ಯದಿಂದ ರಾಜ್ಯದ ಜನತೆ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ. ಆದ್ದರಿಂದ ನಾವುಗಳು ಪೊಲೀಸರನ್ನು ಗೌರವಿಸುವಂತಾಗಬೇಕು ಎಂದರು. ಈ ಸಂದರ್ಭ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿತಿನ್‌ಕುಮಾರ್‌, ಸಾಗರ ವೃತ್ತದ ನಿರೀಕ್ಷಕರಾದ ರೋಹನ್‌ ಜಗದೀಶ್‌ ಹಾಗೂ ಆನಂದಪುರ ಗ್ರಾಪಂ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್‌, ಎಂಜಿನಿಯರ್‌ ಲೋಕೇಶ್‌ ಉಪಸ್ಥಿತರಿದ್ದರು.

Bengaluru: ಮೆಟ್ರೋ ಅವಘಡ, ಮಾಲಿನ್ಯ ತಡೆಗೆ ತಜ್ಞರ ನೇಮಕ

ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಿಂದ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾನಿಲಯ ಆರಂಭವಾಗಲಿದೆ. ಯುವಕರು ಪಿಯುಸಿ ಬದಲು ಈ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಪಡೆದರೆ ಪೊಲೀಸ್‌ ಇಲಾಖೆಗೆ ಬೇಕಾಗುವಂತಹ ಎಲ್ಲ ತರಬೇತಿ ನೀಡುವುದರೊಂದಿಗೆ ಡಿಗ್ರಿ ಹಾಗೂ ಪದವಿ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಯುವಜನಾಂಗ ಇದರ ಪ್ರಯೋಜನ ಪಡೆದುಕೊಳ್ಳಬೇಕು.
- ಆರಗ ಜ್ಞಾನೇಂದ್ರ, ಗೃಹ ಸಚಿವ

Latest Videos
Follow Us:
Download App:
  • android
  • ios