Asianet Suvarna News Asianet Suvarna News

House Damage: ಅವೈಜ್ಞಾ​ನಿಕ ವರದಿ ಸಲ್ಲಿ​ಕೆ: ಗ್ರಾಮ​ಸ್ಥರ ಆಕ್ರೋ​ಶ

*  ಎ, ಬಿ ಶ್ರೇಣಿ ಬರುವ ಮನೆಗೂ ‘ಸಿ’ ಶ್ರೇಣಿಯೆಂದು ಉಲ್ಲೇ​ಖ
*  ಅಧಿ​ಕಾರಿ​ಗಳ ನಿರ್ಲ​ಕ್ಷ್ಯ​ಕ್ಕೆ ಗ್ರಾಮ​ಸ್ಥರ ಆಕ್ರೋ​ಶ
*  ಗ್ರಾಮ ಲೆಕ್ಕಾಧಿಕಾರಿ ಕೊಟ್ಟ ದಾಖಲೆ ಅನ್ವಯ ಗ್ರೇಡ್‌ ಕೊಡಬೇಕು
 

Villagers Outrage For Unscientific Report of House Damage in Gadag grg
Author
Bengaluru, First Published Dec 19, 2021, 11:08 AM IST

ಸಂಜೀವಕುಮಾರ ಹಿರೇಮಠ

ಹೊಳೆಆಲೂರ(ಡಿ.19):  ಕಳೆದ ತಿಂಗಳು ನಿರಂತ​ರ​ವಾಗಿ ಸುರಿದ ಅಕಾ​ಲಿಕ ಮಳೆಗೆ(Untimely Rain) ಮನೆ​ಗಳು ಧರೆ​ಗು​ರು​ಳಿ, ಅಪಾರ ಹಾನಿ ಸಂಭ​ವಿ​ಸಿತ್ತು. ಮಳೆ​ಯಿಂದ ಉಂಟಾದ ನಷ್ಟದ ಬಗ್ಗೆ ವರದಿ(Report) ನೀಡ​ಬೇ​ಕಾದ ಅಧಿ​ಕಾ​ರಿ​ಗಳು ಕಚೇ​ರಿ​ಯಲ್ಲಿ ಕುಳಿತು, ಅವೈ​ಜ್ಞಾ​ನಿಕ ವರದಿ ಸಲ್ಲಿಸುವ ಮೂಲಕ ಸಂತ್ರ​ಸ್ತ​ರಿಗೆ(Victims) ಅನ್ಯಾಯ ಮಾಡು​ತ್ತಿ​ದ್ದಾರೆ ಎನ್ನುವ ಆರೋಪ ಕೇಳಿ​ಬಂದಿ​ದೆ. ಮಳೆಗೆ ಸಂಪೂ​ರ್ಣ​ವಾಗಿ ನೆಲ​ಕ್ಕು​ರುಳಿದ ಮನೆಗೆ ರಾಜ್ಯ ಸರ್ಕಾ​ರವು(Government of Karnataka) 5 ಲಕ್ಷ, ಅರ್ಧ ಬಿದ್ದ ಮನೆಗೆ 2.50 ಲಕ್ಷ, ಅಲ್ಪಸ್ವಲ್ಪ ಬಿದ್ದ ಮನೆಗೆ 50 ಸಾವಿರ ಕೊಡುವಂತೆ ಅಧಿಕಾರಿಗಳಿಗೆ ಸೂಚನೆ ಬಂದಿತ್ತು. ಆದರೆ ಇಲ್ಲಿಯ ಅಧಿಕಾರಿಗಳು ವೈಜ್ಞಾ​ನಿ​ಕ​ವಾಗಿ ಪರಿಶೀಲಿಸದೇ ಎ, ಬಿ ಗ್ರೇಡ್‌ ಬರುವ ಮನೆಗಳಿಗೂ ಸಹಿತ ‘ಸಿ’ ಗ್ರೇಡ್‌ ಎಂದು ನಮೂ​ದಿ​ಸ​ಲಾ​ಗಿ​ದೆ. ಇದು ಗ್ರಾಮಸ್ಥರ(Villagers) ಆಕ್ರೋಶಕ್ಕೆ ಕಾರಣವಾಗಿದೆ.

ಅಸೂಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಅಸೂಟಿ, ಮೇಗೂರು, ಮೇಲ್ಮಠ, ಕರಮುಡಿ ಗ್ರಾಮಗಳಲ್ಲಿ ಕಳೆದ ತಿಂಗಳಲ್ಲಿ ಸತತ ಮಳೆಗೆ ಹಲವು ಮನೆ​ಗಳು ಧರಾ​ಶಾ​ಹಿ​ಯಾ​ಗಿ​ದ್ದವು. ಕೆಲವರ ಮನೆಗಳು ಅರೆಬರೆ ಬಿದ್ದು ಹೋಗಿದ್ದವು. ಇಲ್ಲಿಯ ಗ್ರಾಮ ಲೆಕ್ಕಾಧಿಕಾರಿ ಬಿದ್ದ ಮನೆಗಳನ್ನು ಸರ್ವೇ(Survey) ಮಾಡಿ ಮೇಲಧಿಕಾರಿಗಳಿಗೆ ಮನೆಯ ಭಾವಚಿತ್ರ, ಯಜಮಾನ, ಪಹಣಿ ಕೊಟ್ಟಿದ್ದರು. ಆದರೂ ರೋಣ ತಹಸೀಲ್ದಾರ್‌ ಪರಿಶೀಲಿಸಿ ಎ, ಬಿ, ಸಿ ಗ್ರೇಡ್‌ ನೀಡಿ ಸಂತ್ರ​ಸ್ತರ ಕಣ್ಣೊರೆ​ಸುವ ಕೆಲಸ ಮಾಡಬೇಕಿತ್ತು. ತಹ​ಸೀ​ಲ್ದಾ​ರರು ಇಲ್ಲಿಯ ಗ್ರಾಮ ಲೆಕ್ಕಾಧಿಕಾರಿ ಕೊಟ್ಟ ದಾಖಲೆ ಅನ್ವಯ ಗ್ರೇಡ್‌ ಕೊಡಬೇಕು. ಇಲ್ಲವೇ ಖುದ್ದು ಸ್ಥಳ ಪರಿಶೀಲನೆ ಮಾಡಿ ಗ್ರೇಡ್‌ ಕೊಡಬೇಕಿತ್ತು. ಆದರೆ ಇವೆರಡನ್ನೂ ಮಾಡದೇ ಕಚೇರಿಯಲ್ಲೇ ಕುಳಿತು ಅವೈ​ಜ್ಞಾ​ನಿ​ಕ​ವಾಗಿ ಗ್ರೇಡ್‌ ನೀಡಿರುವುದು ಚರ್ಚೆಗೆ ಗ್ರಾಸ​ವಾ​ಗಿ​ದೆ.

Untimely Rain Effect: ಬೆಳೆ ಹಾನಿ ಹೆಚ್ಚಿನ ಪರಿಹಾರ ಶೀಘ್ರ ಕೊಡುವಂತೆ ರೈತರ ಪಟ್ಟು

ಮನೆ ನೆಲ​ಕ್ಕು​ರು​ಳಿ​ದ್ದ​ರಿಂದ ಕೆಲವು ಸಂತ್ರ​ಸ್ತರು ಬಾಡಿಗೆ ಮನೆಯಲ್ಲಿ ವಾಸಿ​ಸು​ತ್ತಿ​ದ್ದಾರೆ. ಇನ್ನು ಕೆಲ​ವರು ತಗಡಿನ ಶೆಡ್‌ ಹಾಕಿಕೊಂಡಿದ್ದಾರೆ. ಬಿದ್ದ ಮನೆಗಳಿಗೆ ಸರ್ಕಾರ ಕೊಡುವ ಪರಿ​ಹಾ​ರ​ದಲ್ಲಿ(compensation) ಮನೆ ನಿರ್ಮಿ​ಸ​ಬೇಕು ಎನ್ನುವ ಆಲೋ​ಚ​ನೆ​ಯಲ್ಲಿ ಸಂತ್ರ​ಸ್ತ​ರಿ​ದ್ದಾರೆ. ಇಂತಹ ಪರಿ​ಸ್ಥಿ​ತಿ​ಯಲ್ಲಿ ಅಧಿ​ಕಾ​ರಿ​ಗಳು ಸರಿ​ಯಾಗಿ ಕರ್ತವ್ಯ ನಿರ್ವ​ಹಿ​ಸದೇ ಲೋಪ ಎಸ​ಗಿ​ದ್ದಾರೆ. ಇದು ಸಂತ್ರ​ಸ್ತ​ರ ಕಣ್ಣಂಚಲ್ಲಿ ನೀರು ತರಿಸಿದೆ. ಮನೆ ಸಂಪೂರ್ಣ ಬಿದ್ದಿದೆ. ಹಾಗಾಗಿ ಪೂರ್ಣ ಪರಿ​ಹಾರ ದೊರೆ​ಯ​ಲಿದೆ ಎಂದು ಗ್ರಾಮಲೆಕ್ಕಾಧಿಕಾರಿ ಬಂದಾಗ ಭರ​ವಸೆ ನೀಡಿ​ದ್ದರು. ಆದರೆ ಗ್ರೇಡ್‌ ನೀಡು​ವಲ್ಲಿ ಹೆಚ್ಚು ಕಡಿಮೆ ಮಾಡಿ​ದ್ದಾರೆ ಎನ್ನು​ತ್ತಾರೆ ಸಂತ್ರ​ಸ್ತ​ರು.

ಅಧಿ​ಕಾ​ರಿ​ಗ​ಳಿಂದ ಅನ್ಯಾ​ಯ:

ಅಕಾ​ಲಿಕ ಮಳೆಗೆ ಮನೆ ಸಂಪೂರ್ಣವಾಗಿ ನೆಲ​ಕ​ಚ್ಚಿತ್ತು. ಇದ​ರಿಂದಾಗಿ ಬೇರೆ ಕಡೆ ತಗ​ಡಿನ ಶೆಡ್‌ ಹಾಕಿ​ಕೊಂಡಿದ್ದೇವೆ. ನಮಗೆ ಎ ಮತ್ತು ಬಿ ಗ್ರೇಡ್‌ ಕೊಡುತ್ತೇ​ವೆಂದು ಅಧಿ​ಕಾ​ರಿ​ಗಳು ಸಮಾ​ಧಾ​ನ​ಪ​ಡಿ​ಸಿ​ದ್ದರು. ಆದರೆ ಅಧಿ​ಕಾ​ರಿ​ಗಳು ‘ಸಿ’ ಗ್ರೇಡ್‌ ನೀಡಿ ಅನ್ಯಾಯ ಮಾಡಿ​ದ್ದಾರೆ ಎಂದು ಸಂತ್ರಸ್ತ ಸಿದ್ದಲಿಂಗಯ್ಯ ಅರಳಿಕಟ್ಟಿಮಠ ಅಳಲು ತೋಡಿ​ಕೊಂಡ​ರು.

ಅಸೂಟಿ ಗ್ರಾಪಂನ ಅಸೂಟಿ, ಮೇಗೂರು, ಮೇಲ್ಮಠ, ಕರಮುಡಿ ಗ್ರಾಮಗಳಲ್ಲಿ ಮಳೆಗೆ ಸಾಕಷ್ಟುಮನೆಗಳು ಬಿದ್ದಿವೆ. ಇನ್ನು ಹಲ​ವರ ಮನೆ​ಗಳ ಪರಿ​ಶೀ​ಲನೆ ನಡೆ​ದಿಲ್ಲ. ಅಧಿ​ಕಾ​ರಿ​ಗಳು ಗ್ರೇಡ್‌ ನೀಡು​ವಲ್ಲಿ ಅನ್ಯಾಯ ಮಾಡು​ತ್ತಿ​ದ್ದಾರೆ. ಈ ಬಗ್ಗೆ ಮೇಲ​ಧಿ​ಕಾ​ರಿ​ಗಳು ಗಮನ ಹರಿ​ಸ​ಬೇಕು. ಇಲ್ಲ​ದಿ​ದ್ದರೆ ರೋಣ ಕಚೇ​ರಿಗೆ ಮುತ್ತಿಗೆ ಹಾಕಿ ಬೃಹತ್‌ ಪ್ರತಿ​ಭ​ಟನೆ ನಡೆ​ಸು​ತ್ತೇ​ವೆ ಅಂತ ಅಸೂಟಿ ಗ್ರಾಪಂ ಅಧ್ಯಕ್ಷೆ ಪಾರವ್ವ ಕಮಲಕಟ್ಟಿ ತಿಳಿಸಿದ್ದಾರೆ. 

Karnataka Rains: ಅಕಾಲಿಕ ಮಳೆಗೆ ಹತ್ತಿ ಬೆಳೆಗಾರರ ಬದುಕು ಮೂರಾಬಟ್ಟೆ..!

ಫೋಟೋ ತೆಗೆದು, ಅಗತ್ಯ ದಾಖ​ಲಾ​ತಿ​ಗ​ಳನ್ನು(Records) ಮೇಲಧಿಕಾರಿಗಳಿಗೆ ಸಲ್ಲಿ​ಸ​ಲಾ​ಗಿದೆ. ಅಧಿ​ಕಾ​ರಿ​ಗಳು ಎಲ್ಲ ಮನೆಗಳಿಗೂ ‘ಸಿ’ ಗ್ರೇಡ್‌ ಕೊಟ್ಟಿದ್ದಾರೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ಮೇಲ​ಧಿ​ಕಾ​ರಿ​ಗ​ಳೊಂದಿಗೆ ಚರ್ಚಿಸಿ, ಕ್ರಮ ಕೈಗೊಳ್ಳುತ್ತೇವೆ ಅಂತ ಅಸೂಟಿ ಗ್ರಾಮ ಲೆಕ್ಕಾಧಿಕಾರಿ ಎಸ್‌.ಎಸ್‌. ಗಿರಿಯಪ್ಪಗೌಡ್ರ ಹೇಳಿದ್ದಾರೆ. 

ಮನೆ ಹಾನಿ​ಯಾದ ಬಗ್ಗೆ ಸರ್ಕಾರವು ಅಧಿಕಾರಿಗಳಿಗೆ ಸಮರ್ಪ​ಕ​ವಾಗಿ ಪರಿ​ಶೀ​ಲನೆ ನಡೆ​ಸಲು ಸೂಚಿ​ಸ​ಬೇಕು. ಸಂತ್ರ​ಸ್ತ​ರಿಗೆ ನ್ಯಾಯ ಒದ​ಗಿ​ಸಿ​ಕೊ​ಡ​ಬೇಕು. ಇಲ್ಲ​ದಿ​ದ್ದರೆ ರೋಣ ತಹ​ಸೀ​ಲ್ದಾರ್‌ ಕಚೇರಿಯ ಮುಂಭಾಗ ಧರಣಿ ನಡೆ​ಸ​ಲಿ​ದ್ದೇವೆ ಅಂತ ಸಂತ್ರಸ್ತ ಶಿವಕಾಂತಗೌಡ ರೊಟ್ಟಿ ತಿಳಿಸಿದ್ದಾರೆ. 
 

Follow Us:
Download App:
  • android
  • ios