ಹಗರಿಬೊಮ್ಮನಹಳ್ಳಿ(ಏ.17): ಕಲಬುರಗಿಯಿಂದ ಕಳೆದ ಏಳು ದಿನಗಳ ಹಿಂದೆ ಸ್ವಗ್ರಾಮ ಗಿರಿಗೊಂಡನಹಳ್ಳಿಗೆ ಆಗಮಿಸಿದ್ದ ಪೊಲೀಸ್‌ ಪೇದೆಯೊಬ್ಬರನ್ನು ಬಳ್ಳಾರಿಗೆ ರವಾನಿಸಿ ಹೋಂ ಕ್ವಾರಂಟೈನ್‌ ಮಾಡಲಾಗಿದೆ. 

ಗಿರಿಗೊಂಡನಹಳ್ಳಿಯ ನಿವಾಸಿ ಪೊಲೀಸ್‌ ಪೇದೆ ಕಲಬುರಗಿ ಜಿಲ್ಲೆಯ ಠಾಣೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಳೆದ ಏಳು ದಿನಗಳ ಹಿಂದೆ ಗ್ರಾಮಕ್ಕೆ ಆಗಮಿಸಿದ್ದರು. 

ಲಾಕ್‌ಡೌನ್‌: 'ಚೆಕ್‌ಪೋಸ್ಟ್‌ನಲ್ಲಿ ಮತ್ತಷ್ಟು ಬಿಗಿ, ಯಾರೂ ಒಳ ನುಸಳದಂತೆ ಕಟ್ಟೆಚ್ಚರ'

ಅವರಲ್ಲಿ ಕೆಮ್ಮು, ನೆಗಡಿ, ಜ್ವರ ಕಾಣಿಸಿಕೊಂಡಿದ್ದರಿಂದ ಖಾಸಗಿ ಆಸ್ಪತ್ರೆಗೆ ತೆರಳಿದ್ದು, ಅಲ್ಲಿನ ವೈದ್ಯರು ತಹಸೀಲ್ದಾರ್‌ ಗಮನಕ್ಕೆ ತಂದಿದ್ದಾರೆ. ಕೂಡಲೇ ಆಗಮಿಸಿದ ತಹಸೀಲ್ದಾರ್‌ ಮತ್ತು ವೈದ್ಯರ ತಂಡ ಪೊಲೀಸ್‌ ಪೇದೆಯ ಆರೋಗ್ಯ ಪರೀಕ್ಷಿಸಿ, ಬಳ್ಳಾರಿಗೆ ಕಳಿಸಿಕೊಟ್ಟಿದ್ದಾರೆ.