Asianet Suvarna News Asianet Suvarna News

ಲಂಚ ಪಡೆದು ಸಿಕ್ಕಿಬಿದ್ದ ರಮ್ಯಾಗೆ ಅದ್ದೂರಿ ಸ್ವಾಗತ

ಲಂಚ ಪಡೆದು ಸಿಕ್ಕಿಬಿದ್ದ ಭ್ರಷ್ಟ ಅಧಿಕಾರಿಗೆ ಅದ್ದೂರಿ ಸ್ವಾಗತ ಕೋರಿರುವ ಘಟನೆಯೊಂದು ನಡೆದಿದೆ. ಗ್ರಾಮಸ್ಥರು ಜಾಮೀನು ಪಡೆದು ಬಂದ ಅಧಿಕಾರಿಗೆ ಅದ್ದೂರಿ ಸ್ವಾಗತ ಮಾಡಿದ್ದಾರೆ. 

Villagers Grand Welcome  To Currented PDO  in kanakaura snr
Author
Bengaluru, First Published Jan 21, 2021, 6:51 AM IST

ಕನಕಪುರ (ಜ.21):  ಲಂಚ ಸ್ವೀಕಾರ ಪ್ರಕರಣದಲ್ಲಿ ಎಸಿಬಿ ಬಲೆಗೆ ಸಿಕ್ಕಿಬಿದ್ದು ಜಾಮೀನು ಪಡೆದು ಹೊರ ಬಂದ ತೋ​ಕ​ಸಂದ್ರ ಗ್ರಾಮ ಪಂಚಾ​ಯಿ​ತಿಯ ಪಿಡಿಒಗೆ ಗ್ರಾಮಸ್ಥರ ಗುಂಪೊಂದು ಅದ್ಧೂರಿಯಾಗಿ ಸ್ವಾಗತ ಕೋರಿ ಸಂಭ್ರ​ಮಿ​ಸಿದೆ.

ಮರಳವಾಡಿ ಹೋಬಳಿಯ ತೋಕಸಂದ್ರ ಗ್ರಾಪಂ ಅಭಿವೃದ್ಧಿ ಅಧಿಕಾರಿ ರಮ್ಯಾ ಕಳೆದ ವಾರ ಪಂಚಾಯಿತಿ ಕಚೇರಿಯಲ್ಲಿ ನರೇಗಾ ಕಾಮಗಾರಿಯಲ್ಲಿ ಚೆಕ್‌ ಡ್ಯಾಂ ನಿರ್ಮಾಣ ಮಾಡಲು ಕಟ್ಟಡ ಸಾಮಗ್ರಿ ಸರ​ಬ​ರಾಜು ಮಾಡಿ​ದ್ದ​ವ​ರಿಂದ ಲಂಚದ ಹಣ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿ​ದ್ದರು. ದೂರು ದಾಖ​ಲಿ​ಸಿ​ಕೊಂಡಿದ್ದ ಎಸಿಬಿ ಅಧಿ​ಕಾ​ರಿ​ಗಳು ಪಿಡಿಒ ರಮ್ಯಾ ಅವ​ರನ್ನು ನ್ಯಾಯಾಲಯಕ್ಕೆ ಹಾಜರು ಪಡಿ​ಸಿ​ದ್ದರು. ಶನಿ​ವಾ​ರವೇ ನ್ಯಾಯಾ​ಲ​ಯ​ದಲ್ಲಿ ಜಾಮೀನು ಪಡೆ​ದು​ಕೊಂಡು ರಮ್ಯಾ ಸೋಮ​ವಾರ ಗ್ರಾಮಕ್ಕೆ ಆಗ​ಮಿ​ಸಿ​ದ್ದಾರೆ.

ಈ ವಿಚಾರ ತಿಳಿ​ದಿದ್ದ ಗ್ರಾಮ​ಸ್ಥರ ಗುಂಪೊಂದು ಗ್ರಾಮದ ದ್ವಾರ​ದ​ಲ್ಲಿಯೇ ಪಿಡಿಒ ಅವ​ರಿಗೆ ಹೂಗುಚ್ಛ ನೀಡಿ, ಹೂವಿನ ಹಾರ ಹಾಕಿದರ​ಲ್ಲದೆ ಪಟಾಕಿ ಸಿಡಿಸಿ ಅದ್ಧೂ​ರಿ​ಯಾಗಿ ಸ್ವಾಗತ ಕೋರಿ ಸಂಭ್ರ​ಮಿ​ಸಿ​ದರು. ಅಲ್ಲದೆ, ಕಚೇ​ರಿಗೂ ಬಾಳೆ ಕಂದು, ಹೂವಿ​ನಿಂದ ಅಂಲ​ಕಾರ ಮಾಡ​ಲಾ​ಗಿತ್ತು.

2 ಲಕ್ಷ ಲಂಚ ಬೇಡಿಕೆ ಇಟ್ಟ ಲೇಡಿ ಎಸ್‌ಐ, ಮುಖ್ಯಪೇದೆ ಅರೆಸ್ಟ್‌ ...

ಭ್ರಷ್ಟಅಧಿಕಾರಿಗಳನ್ನು ಬೆಂಬಲಿಸಿ ಗ್ರಾಮದ ಕೆಲ ಮುಖಂಡರು ಪಂಚಾಯಿತಿ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡು ಈ ರೀತಿ ಸಂಭ್ರಮಿಸುತ್ತಿರುವುದು ನೋವಿನ ಸಂಗತಿ. ಈ ಮೂಲಕ ಮುಂದಿನ ಪೀಳಿಗೆಗೆ ಯಾವ ಸಂದೇಶವನ್ನು ನಾವು ನೀಡುತ್ತಿದ್ದೇವೆ ಎಂಬು​ದನ್ನು ಮನವರಿಕೆ ಮಾಡಿಕೊಳ್ಳಬೇಕಾಗಿದೆ. ಇದು ಗ್ರಾಮದ ಪ್ರಜ್ಞಾವಂತ ನಾಗರಿಕರು ತಲೆತಗ್ಗಿಸುವ ವಿಚಾರ ಎಂದು ಕೆಲ ಗ್ರಾಮ​ಸ್ಥರು ಬೇಸರ ವ್ಯಕ್ತ​ಪ​ಡಿ​ಸಿ​ದ್ದಾರೆ.

ಪಂಚಾ​ಯಿತಿ ಅಭಿ​ವೃದ್ಧಿ ಅಧಿ​ಕಾರಿ ರಮ್ಯಾ ಗ್ರಾಮಸ್ಥರೊಂದಿಗೆ ಅನ್ಯೋನ್ಯ​ವಾ​ಗಿದ್ದು, ಬಡವರ ಕೆಲಸ ಕಾರ್ಯಗಳಿಗೆ ಸ್ಪಂದಿಸುತ್ತಿ​ದ್ದಾರೆ. ಗ್ರಾಮದ ಕೆಲವರು ರಾಜಕೀಯ ದುರುದ್ದೇಶದಿಂದ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿಸಿದ್ದಾರೆ.

ಶಿವ​ರುದ್ರ, ಗ್ರಾಪಂ ಸದ​ಸ್ಯರು, ತೋಕ​ಸಂದ್ರ

Follow Us:
Download App:
  • android
  • ios