ಕಣ್ವನದಿಯಲ್ಲಿ ತೇಲಿ ಬರುತ್ತಿರುವ ಶವ : ಆತಂಕದಲ್ಲಿ ಜನ
- ಬುಧವಾರ ತಾಲೂಕಿನ ಹುಣಸನಹಳ್ಳಿ- ಕೊಂಡಾಪುರ ಗ್ರಾಮದ ನಡುವೆ ಕಣ್ವ ನದಿಯಲ್ಲಿ ಕಂಡ ವ್ಯಕ್ತಿಯೊಬ್ಬರ ಶವ
- ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಣ್ವ ನದಿಯಲ್ಲಿ ನೀರಿನ ಹರಿವು ಹೆಚ್ಚಳ
ಚನ್ನಪಟ್ಟಣ (ನ.18): ಬುಧವಾರ ತಾಲೂಕಿನ ಹುಣಸನಹಳ್ಳಿ- ಕೊಂಡಾಪುರ ಗ್ರಾಮದ (Village) ನಡುವೆ ಕಣ್ವ ನದಿಯಲ್ಲಿ ವ್ಯಕ್ತಿಯೊಬ್ಬರ ಶವ ತೇಲುತ್ತಿದ್ದು, ಇದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ (rain) ಯಿಂದಾಗಿ ಕಣ್ವ ನದಿಯಲ್ಲಿ (Kanva river) ನೀರಿನ ಹರಿವು ಹೆಚ್ಚಾಗಿದ್ದು, ಹರಿಯುತ್ತಿರುವ ನೀರಿನಲ್ಲಿ ಶವ (Dead Body) ಪತ್ತೆಯಾಗಿದೆ. ಕೆಲವರು ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವ ಕಾರಣಕ್ಕೆ ನದಿ ಪಾತ್ರದಲ್ಲಿ ಹೂತಿದ್ದ ಶವ ಮೇಲೆ ಬಂದು ತೇಲುತ್ತಿದೆ ಎಂದು ಶಂಕಿಸಿದ್ದರೆ, ಮತ್ತೆ ಕೆಲವರು ಯಾರೋ ವ್ಯಕ್ತಿ ಕಾಲು ಜಾರಿ ಬಿದ್ದಿರಬಹುದು ಎಂದು ಶಂಕಿಸಿದ್ದಾರೆ.
ಶವ ಸಂಸ್ಕಾರಕ್ಕೆ ಜಾಗವಿಲ್ಲದೆ ಇರುವ ಗ್ರಾಮಗಳಲ್ಲಿ ಕಣ್ವ ನದಿ ಪಾತ್ರಗಳನ್ನು ಹೆಣಗಳನ್ನು ಹೂಳಲಾಗುತಿತ್ತು. ತಾಲೂಕಿನ ಹುಣಸನಹಳ್ಳಿ ಸೇರಿದಂತೆ ನದಿ ಅಂಚಿನ ಗ್ರಾಮಗಳಲ್ಲಿ ಈ ರೀತಿ ನದಿ ಅಂಚಿನಲ್ಲಿ ಶವ ಸಂಸ್ಕಾರ ಮಾಡುವ ರೂಡಿ ಇದೆ. ಹತ್ತಾರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ನದಿಯಲ್ಲಿ (River) ಬಿರುಸಾಗಿ ನೀರು ಹರಿಯುತ್ತಿರುವ ಕಾರಣ ಮಣ್ಣು ಕೊಚ್ಚಿ ಹೋಗಿ ಹೆಣಗಳು ಮೇಲೆ ಬಂದಿವೆ ಎಂದು ಕೆಲವರು ವಾದಿಸುತ್ತಿದ್ದಾರೆ.
ಆದರೆ, ಶವದ ಮೇಲೆ ಬಟ್ಟೆಗಳು ಇದ್ದು, ಯಾರೂ ಶವ ಸಂಸ್ಕಾರ ಮಾಡುವಾಗ ಬಟ್ಟೆಯನ್ನು ಹಾಕಿರುವುದಿಲ್ಲ. ಈ ಕಾರಣದಿಂದಾಗಿ ಯಾರೋ ಕಾಲುಜಾರಿ ಬಿದ್ದಿರ ಬಹುದೆಂದು ಮತ್ತೆ ಕೆಲವರು ಅಭಿಪ್ರಾಯ ಪಡುತ್ತಿದ್ದು, ನೀರಿನ ಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪೊಲೀಸರು (Police) ನದಿಯಿಂದ ಆಚೆಗೆ ಶವ ಹೊರತೆಗೆಯಲು ಪ್ರಯತ್ನಿಸುತ್ತಿದ್ದಾರೆ. ಶವ ಹೊರ ತೆಗೆದ ಬಳಿಕ ಈ ಸತ್ಯಾ ಸತ್ಯತೆ ತಿಳಿದು ಬರಲಿದೆ.
ಈ ಸಂಬಂಧ ಅಕ್ಕೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಅಕ್ಕೂರು ಪೊಲೀಸರು (akkur Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನದಿಯಲ್ಲಿ ತೇಲಿ ಬಂದ ತೆಂಗಿನಕಾಯಿ: ಕಣ್ವ ನದಿಗೆ ವಿವಿಧ ಹಳ್ಳ ಕೊಳ್ಳಗಳಿಂದ ಹರಿದು ಬರುತ್ತಿರುವ ನೀರಿನ ಜೊತೆಗೆ ರೈತರ ತೆಂಗಿನಕಾಯಿ, ಭತ್ತ, ರಾಗಿಯ ಪೈರುಗಳು ಸೇರಿದಂತೆ ವಿವಿಧ ಬೆಳೆಗಳು ತೇಲಿ ಬರುತ್ತಿವೆ. ಹಲವು ಗ್ರಾಮಗಳ ಕೆರೆ ಕೋಡಿ ಬಿದಿದ್ದು, ಕೋಡಿಹಳ್ಳದ ಮೂಲಕ ಹೊರ ಬಂದ ನೀರು ರೈತರ ಜಮೀನುಗಳಿಗೆ ನುಗ್ಗಿಸಾಕಷ್ಟುಹಾನಿ ಮಾಡಿದೆ. ಜಮೀನಿನಲ್ಲಿ ಇದ್ದ ಬೆಳೆಗಳು ಮಳೆಯ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದು, ಹೀಗೆ ನೀರಿನಲ್ಲಿ ಕೊಚ್ಚಿ ಹೋದ ಬೆಳೆಗಳು ಕಣ್ವ ನದಿಯಲ್ಲಿ ತೇಲುತ್ತಿವೆ.
ಜಲಾಶಯ ತುಂಬದಿದ್ದರೂ ನದಿಯಲ್ಲಿ ನೀರು: ಕಣ್ವ ಜಲಾಶಯ ಸದ್ಯ 28 ಅಡಿಗಳಾಗಿದ್ದು, ಜಲಾಶಯದ ನೀರಿನ ಮಟ್ಟ33.5 ಅಡಿ. ಜಲಾಶಯ ತುಂಬದಿದ್ದರೂ ಹತ್ತಾರು ಕೆರೆ ತುಂಬಿ ಕೊಡಿ ಬಿದ್ದಿದ್ದರಿಂದ ವಿರುಪಾಕ್ಷಿಪುರ ಹೋಬಳಿ ಭಾಗದ ಸಾದಾರಹಳ್ಳಿ, ಹುಣಸನಗಳ್ಳಿ, ಕೊಂಡಾಪುರ, ಮಾದಾಪುರ, ಬಾಣಗಹಳ್ಳಿ, ಅಂಬಾಡಹಳ್ಳಿ, ನೆಲಮಾಕನಹಳ್ಳಿ ಸಾಮಂದಿಪುರ ಸರಹದ್ದಿನಲ್ಲಿ ಮೈದುಂಬಿ ಹರಿಯುತ್ತಿದೆ.ನದಿ ನೀರು ಶಿಂಷಾನದಿಯಲ್ಲಿ ಸಂಗಮಗೊಂಡು ಮುತ್ತತ್ತಿ ಬಳಿ ಕಾವೇರಿ ನದಿಗೆ ಸೇರುತ್ತಿದೆ.
- ಬುಧವಾರ ತಾಲೂಕಿನ ಹುಣಸನಹಳ್ಳಿ- ಕೊಂಡಾಪುರ ಗ್ರಾಮದ ನಡುವೆ ಕಣ್ವ ನದಿ
- ಕಣ್ವ ನದಿಯಲ್ಲಿ ವ್ಯಕ್ತಿಯೊಬ್ಬರ ಶವ ತೇಲುತ್ತಿದ್ದು, ಇದು ಸಾಕಷ್ಟು ಕುತೂಹಲಕ್ಕೆ ಕಾರಣ
- ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಣ್ವ ನದಿಯಲ್ಲಿ ನೀರಿನ ಹರಿವು ಹೆಚ್ಚಳ
- ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವ ಕಾರಣಕ್ಕೆ ನದಿ ಪಾತ್ರದಲ್ಲಿ ಹೂತಿದ್ದ ಶವ ಮೇಲೆ ಬಂದು ತೇಲುತ್ತಿದೆ ಎಂದು ಶಂಕೆ
- ಶವಸಂಸ್ಕಾರಕ್ಕೆ ಜಾಗವಿಲ್ಲದೆ ಇರುವ ಗ್ರಾಮಗಳಲ್ಲಿ ಕಣ್ವನದಿ ಪಾತ್ರಗಳನ್ನು ಹೆಣಗಳನ್ನು ಹೂಳಲಾಗುತ್ತದೆ
- ಹತ್ತಾರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ನದಿಯಲ್ಲಿ ಬಿರುಸಾಗಿ ನೀರು