ಅಥಣಿ: ಯುವತಿ ಚುಡಾಯಿಸಿದ ವ್ಯಕ್ತಿ ತಲೆ ಬೋಳಿಸಿದ ಗ್ರಾಮಸ್ಥರು

*  ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಹಿಷವಾಡಗಿಯಲ್ಲಿ ಘಟನೆ
*  ಜೀವಭಯದಿಂದ ಗ್ರಾಮ ತೊರೆದ ಯುವಕನ ಕುಟುಂಬಸ್ಥರು
*  ಪೊಲೀಸ್‌ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ
 

Villagers Beaten to Young Man For Ragging to Girl at Athani in Belagavi grg

ಅಥಣಿ(ಆ.24):  ಹುಡುಗಿಯರನ್ನು ಚುಡಾಯಿಸುತ್ತಿದ್ದ ಯುವಕನೊಬ್ಬನಿಗೆ ಗ್ರಾಮಸ್ಥರು ಹಿಡಿದು ಧರ್ಮದೇಟು ನೀಡಿದ್ದಲ್ಲದೆ, ಆತನ ತಲೆ ಬೋಳಿಸಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಹಿಷವಾಡಗಿ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಗ್ರಾಮಸ್ಥರಿಂದ ಧರ್ಮದೇಟು ತಿಂದು ತಲೆ ಬೋಳಿಸಿಕೊಂಡ ಯುವಕನನ್ನು ಸುಧಾಕರ ಡುಮ್ಮಗೋಳ ಎಂದು ಗುರುತಿಸಲಾಗಿದೆ. ಈ ಘಟನೆಯಿಂದ ಅವಮಾನಗೊಂಡಿರುವ ಯುವಕ ಸೇರಿದಂತೆ ಆತನ ಕುಟುಂಬದ ಸದಸ್ಯರೆಲ್ಲರೂ ಜೀವಭಯದಿಂದ ಗ್ರಾಮವನ್ನು ತೊರೆದಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಬೆಳಗಾವಿ: ಯುವತಿಗೆ ಚುಡಾಯಿಸಿದ ಬೀದಿ ಕಾಮಣ್ಣನಿಗೆ ಬಿತ್ತು ಧರ್ಮದೇಟು!

ಯುವಕ ಸುಧಾಕರ ತಲೆ ಬೋಳಿಸುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗಿದ್ದು, ಈ ಒಂದು ಅಮಾನವೀಯ ಘಟನೆ ನಡೆದಿದ್ದರೂ ಅಥಣಿ ಪೊಲೀಸ್‌ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.
 

Latest Videos
Follow Us:
Download App:
  • android
  • ios