ಬೆಳಗಾವಿ: ಯುವತಿಗೆ ಚುಡಾಯಿಸಿದ ಬೀದಿ ಕಾಮಣ್ಣನಿಗೆ ಬಿತ್ತು ಧರ್ಮದೇಟು!
ಯುವತಿಗೆ ಚುಡಾಯಿಸುತ್ತಿದ್ದ ಯುವಕನಿಗೆ ಸಾರ್ವಜನಿಕರಿಂದ ಧರ್ಮದೇಟು| ಬೆಳಗಾವಿಯ ಶಿವಾಜಿನಗರದಲ್ಲಿ ನಡೆದ ಘಟನೆ| ದೆಹಲಿ ಮೂಲದ ಫಿರೋಜ್ ಎಂಬಾತನೇ ಯುವತಿಗೆ ಚುಡಾಯಿಸುತ್ತಿದ್ದ ಬೀದಿ ಕಾಮಣ್ಣ| ಯುವಕನನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು|
ಬೆಳಗಾವಿ(ಡಿ.13): ಯುವತಿಗೆ ಚುಡಾಯಿಸುತ್ತಿದ್ದ ಬೀದಿ ಕಾಮಣ್ಣನಿಗೆ ಸಾರ್ವಜನಿಕರೇ ಹಿಡಿದು ಧರ್ಮದೇಟು ನೀಡಿದ ಘಟನೆ ಶಿವಾಜಿ ನಗರದಲ್ಲಿ ಇಂದು(ಶುಕ್ರವಾರ) ನಡೆದಿದೆ. ದೆಹಲಿ ಮೂಲದ ಫಿರೋಜ್ ಎಂಬಾತನೇ ಯುವತಿಗೆ ಚುಡಾಯಿಸುತ್ತಿದ್ದ ಬೀದಿ ಕಾಮಣ್ಣನಾಗಿದ್ದಾನೆ.
"
ಇಂದು ಬೆಳಗ್ಗೆ ರಸ್ತೆಯಲ್ಲಿ ಓಡಾಡುವಾಗ ಫಿರೋಜ್ ಯುವತಿಗೆ ಚುಡಾಯಿಸುತ್ತಿದ್ದನು. ಈ ಬಗ್ಗೆ ಅಲ್ಲಿದ್ದ ಸ್ಥಳೀಯ ಯುವಕರು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಫಿರೋಜ್‌ನನ್ನು ಹಿಡಿದ ಸ್ಥಳೀಯರು ಯುವತಿಯ ಕಾಲಿಗೆ ಬೀಳಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹಿಗ್ಗಾ ಮಗ್ಗಾ ಥಳಿಸಿದ ನಂತರ ಬೀದಿ ಕಾಮಣ್ಣನನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.