ಚಿಕ್ಕಮಗಳೂರು(ಏ.19): ಮೂಡಿಗೆರೆ ತಾಲೂಕಿನ ಹಂತೂರು ಗ್ರಾ.ಪಂ. ವ್ಯಾಪ್ತಿಯ ಹಾರ್ಮಕ್ಕಿ ಗ್ರಾಮದಲ್ಲಿ ಕಳ್ಳಬಟ್ಟಿಸಹಿತ ಇತರೇ ಮದ್ಯ ಮಾರಾಟ ಅಥವಾ ಮದ್ಯಪಾನ ಗ್ರಾಮಸ್ಥೆರೇ ಸೇರಿ ನಿಷೇಧಿಸಿರುವುದಾಗಿ ಗ್ರಾಮ ಮುಖಂಡ ಚಿರಾಗ್‌ ಗೌಡ ಹೇಳಿದರು.

ಹಾರ್ಮಕ್ಕಿ ಗ್ರಾಮದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲಾಕ್‌ಡೌನ್‌ ಬಳಿಕ ಗ್ರಾಮದಲ್ಲಿ ಮದ್ಯಪಾನ ಮತ್ತು ಮಾರಾಟ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಕಳ್ಳಬಟ್ಟಿತಯಾರಿಕೆ, ಬಗನೇ ಸೇಂದಿ ಮಾರಾಟ ಮಾಡದಂತೆ ಗ್ರಾಮಸ್ಥರೇ ಕಟ್ಟೆಚ್ಚರ ವಹಿಸಿದ್ದಾರೆ.

ಶ್ರೀರಾಮುಲು, ಡಾ.ಸುಧಾಕರ್‌ ಮಧ್ಯೆ ಸಾಮರಸ್ಯ ಕೊರತೆ: ರೇವಣ್ಣ

ಗ್ರಾಮಸ್ಥರು ಮನೆ ಬಿಟ್ಟು ಹೊರ ಬಾರದಂತೆ ತಡೆಯಲಾಗುತ್ತದೆ. ಅಗತ್ಯ ವಸ್ತುಗಳಾದ ದಿನಸಿ, ತರಕಾರಿಯನ್ನು ಮನೆ ಮನೆಗೆ ಮಾರಾಟ ಮಾಡಿಕೊಂಡು ಬರುವ ವಾಹನದಲ್ಲಿ ಖರೀದಿಸಲು ಗ್ರಾಮಸ್ಥರಿಗೆ ಅರಿವು ಮೂಡಿಸಲಾಗಿದೆ ಎಂದು ತಿಳಿಸಿದರು.

ಹೊರಗಿನಿಂದ ಗ್ರಾಮಕ್ಕೆ ಯಾರೊಬ್ಬರೂ ಪ್ರವೇಶಿಸದಂತೆ ನೋಡಿಕೊಳ್ಳಲಾಗುತ್ತಿದೆ. ಲಾಕ್‌ಡೌನ್‌ ನಿಯಮವನ್ನು ಪೊಲೀಸರೆ ಕಾಪಾಡಬೇಕು ಎಂದೇನಿಲ್ಲ. ಪಟ್ಟಣದ ಪ್ರದೇಶದಲ್ಲಿ ಪೊಲೀಸರು ಗಸ್ತು ತಿರುಗಾಡುವುದರಿಂದ ಜನರನ್ನು ನಿಯಂತ್ರಿಸುತ್ತಾರೆ. ಆದರೆ ಗ್ರಾಮೀಣ ಭಾಗದಲ್ಲಿ ಗ್ರಾಮಸ್ಥರೇ ಜನರನ್ನು ನಿಯಂತ್ರಿಸಬೇಕು.

ದಾವಣಗೆರೆಯ ವಿವಿಧೆಡೆ ಆಲಿಕಲ್ಲು ಸಮೇತ ಗಾಳಿ-ಮಳೆ

ಲಾಕ್‌ಡೌನ್‌ ನಿಯಮ ಪಾಲಿಸಲು ಗ್ರಾಮಸ್ಥರೇ ಮುಂದಾದರೆ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಸಹಿತಿ ಗ್ರಾ.ಪಂ. ಟಾಸ್ಕ್‌ಫೋರ್ಸ್‌ಗಳಿಗೂ ಅನುಕೂಲ. ಲಾಕ್‌ಡೌನ್‌ ಎಲ್ಲಿಯವರೆಗೂ ಚಾಲ್ತಿಯಲ್ಲಿರುತ್ತದೆಯೋ ಅಲ್ಲಿಯವರೆಗೆ ಗ್ರಾಮದಲ್ಲಿ ನಿಯಮ ಕಟ್ಟುನಿಟ್ಟಾಗಿ ಗ್ರಾಮಸ್ಥರೇ ಪಾಲಿಸಲಿದ್ದಾರೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಗ್ರಾಮದ ಮುಖಂಡರಾದ, ಅಮಿತ್‌, ಜೀವನ್‌, ಚೇತನ್‌ ಇದ್ದರು.