ಪಾವಗಡ [ಜ.13]:  ಜಮೀನಿನಲ್ಲಿ ಅಪಾರ ಪ್ರಮಾಣದ ಅಡಿಕೆ ತೆಂಗು, ಮಾವು ಹಾಗೂ ಹುಣಿಸೇ ಬೆಳೆ ಇದ್ದರೂ ಜಮೀನಿನಲ್ಲಿ ಶೇಂಗಾ ಬೆಳೆ ಮಾತ್ರ ಇದೆ ಎಂದು ತಾಲೂಕು ಕಂದಾಯ ಇಲಾಖೆ ಅಧಿಕಾರಿಗಳು ನಮೂದಿಸಿ ವರದಿ ಸಲ್ಲಿಸಿದ್ದ ಕಾರಣ ಬರಬೇಕಿದ್ದ ಸುಮಾರು 18 ಎಕರೆಯ ಇನ್ಸೂರೆನ್ಸ್‌ ಹಣ ಹಾಗೂ ಹನಿ ನೀರಾವರಿ ಸೌಲಭ್ಯದಿಂದ ರೈತನೊಬ್ಬನಿಗೆ ವಂಚನೆ ಆಗಿದೆ ಎನ್ನಲಾಗಿರುವ ಪ್ರಕರಣ ತಾಲೂಕಿನ ಜಂಗಮರಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಗ್ರಾಮದ ವೀರನಾಗಪ್ಪ ಹಾಗೂ ಪತ್ನಿ ಪುಟ್ಟಮ್ಮ ಸುಮಾರು 5 ಎಕರೆ ಜಮೀನಿನಲ್ಲಿ 1700 ಅಡಿಕೆ ಹಾಗೂ 80 ತೆಂಗು ಬೆಳೆದಿದ್ದಾರೆ. ಎರಡು ಕೊಳವೆ ಬಾವಿಗಳ ಪೈಕಿ 1ರಲ್ಲಿ 2 ಇಂಚು ನೀರು ಲಭ್ಯವಿದ್ದು, ಇದರ ಜತೆಗೆ ರೈತ ವೀರನಾಗಪ್ಪ ಪತ್ನಿ ಪುಟ್ಟಮ್ಮ ಹೆಸರಿನಲ್ಲಿ ಪಕ್ಕದ ಮಂಗಳವಾಡದಲ್ಲಿ ರುವ 16 ಎಕರೆ ಖುಷಿ ಜಮೀನಿನಲ್ಲಿ 2 ಸಾವಿರಕ್ಕಿಂತ ಹೆಚ್ಚು 6 ವರ್ಷದ ಮಾವು ಮತ್ತು ಹುಣಿಸೇ ಸಸಿಗಳಿದ್ದು, ನೀರಿನ ಲಭ್ಯತೆ ಪರಿಣಾಮ ಬೆಳೆ ನಶಿಸುವ ಸ್ಥಿತಿಯಲ್ಲಿದೆ. ಇದರಿಂದ ಆತಂಕಗೊಂಡ ವೀರನಾಗಪ್ಪ 2018-19ನೇ ಸಾಲಿಗೆ ಎಕರೆಗೆ ಇಂತಿಷ್ಟರಂತೆ ಅಗತ್ಯ ದಾಖಲೆಗಳೊಂದಿಗೆ 18 ಎಕರೆ ಜಮೀನಿನ ಬೆಳೆ ಆಧಾರದ ಮೇಲೆ ಇನ್ಸೂರೆನ್ಸ್‌ ಕಂಪನಿಗೆ ಹಣ ಕಟ್ಟಿದ್ದು ಸಂಬಂಧಪಟ್ಟಗ್ರಾಮಲೆಕ್ಕಿಗ ಮಾಡಿದ ಎಡವಟ್ಟಿನಿಂದ ಬಿಡುಗಡೆಯಾಗಬೇಕಿದ್ದ ಲಕ್ಷಾಂತರ ರು. ವಿಮೆ ಹಣಕ್ಕೆ ಕತ್ತರಿಬಿದ್ದಾಂತಾಗಿದ್ದು ಇದರಿಂದ ದಿಕ್ಕು ಕಾಣದ ಬಡ ರೈತ ಕಣ್ಣು ಬಾಯಿ ಬಿಡುವ ಸ್ಥಿತಿ ನಿರ್ಮಾಣವಾಗಿದೆ.

KPCC ಅಧ್ಯಕ್ಷ ಕುರ್ಚಿಗೆ ಮತ್ತೊಂದು ಕರ್ಚಿಫ್ : ನಾನೂ ಆಕಾಂಕ್ಷಿ ಎಂದ ಮಾಜಿ ಶಾಸಕ...

ವಿಮೆ ಹಣ ತಪ್ಪಿಸಲು ವಂಚನೆ:

ಇದೇ ವಿಚಾರವಾಗಿ ವಂಚಿತ ರೈತನ ಜಮೀನಿಗೆ ಭೇಟಿ ಪರಿಶೀಲಿಸುವ ವೇಳೆ ಮಾಧ್ಯಮಗಳ ಜತೆ ಸಂತ್ರಸ್ತ ರೈತ ವೀರನಾಗಪ್ಪ ಮಾತನಾಡಿ, ಗ್ರಾಮದ 5 ಎಕರೆ ನೀರಾವರಿ ಜಮೀನಿನಲ್ಲಿ ಅಡಿಕೆ ತೆಂಗು ಬೆಳೆಯಲಾಗಿದೆ. ಮಳೆಯ ಅಭಾವದಿಂದ ಕೈಗೆ ಬಂದ ಬೆಳೆ ನಷ್ಟದ ಹಂತದಲ್ಲಿದ್ದು ಇದರಿಂದ ಆಂತಕಗೊಂಡು ಕಳೆದ ಸಾಲಿಗೆ ಅಗತ್ಯ ದಾಖಲೆಗಳೊಂದಿಗೆ ಅಡಿಕೆ, ತೆಂಗು, ಮಾವು ಸೇರಿದಂತೆ 16 ಎಕರೆಯ ಬೆಳೆಗೆ ಸಾವಿರಾರು ರು. ವಿಮೆ ಹಣ ಕಟ್ಟಲಾಗಿದೆ. ಈ ಸಂಬಂಧ ಕಂಪನಿ ರಸೀದಿಗಳಿವೆ. ವಿಮೆ ಹಣ ತಪ್ಪಿಸುವ ಸಲುವಾಗಿ ಜಮೀನು ಪೂರಾ ಬೆಳೆ ಇದ್ದರೂ ಬರೀ ಶೇಂಗಾ ಬೆಳೆ ಮಾತ್ರ ಜಮೀನಿನಲ್ಲಿದೆ ಎಂದು ಕಂದಾಯ ಇಲಾಖೆ ಕೆ.ಟಿ.ಹಳ್ಳಿ ಗ್ರಾಮ ಲೆಕ್ಕಿಗರೊಬ್ಬರು ನೀಡಿದ ವರದಿ ಪರಿಣಾಮ ಸದರಿ ಜಮೀನು ಫಹಣಿಯಲ್ಲಿ ಬರೀ ಶೇಂಗಾ ಬೆಳೆ ಎಂದು ನಮೂದಾಗಿದೆ. ಇದರಿಂದ ಬಿಡುಗಡೆಯಾಗಬೇಕಿದ್ದ ವಿಮೆ ಹಣಕ್ಕೆ ಕೊಳ್ಳಿ ಇಟ್ಟಾಂತಾಗಿದೆ ಎಂದು ಆರೋಪಿಸಿದ್ದಾರೆ.

5 ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟು ಎಚ್ಚರಿಕೆ ಸಂದೇಶ ರವಾನೆ...

ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಉಪವಿಭಾಗಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲಿಸಿ ನ್ಯಾಯ ಕಲ್ಪಿಸಬೇಕು. ಇಲ್ಲಾವಾದರೆ ನಾನು, ನನ್ನ ಕುಟುಂಬ ಆತ್ಮಹತ್ಯೆಗೆ ಶರಣಾಗಬೇಕಿದೆ ಎಂದು ಆಳಲು ತೋಡಿಕೊಂಡಿದ್ದಾರೆ.