Asianet Suvarna News Asianet Suvarna News

ವಿಜಯೇಂದ್ರ ಹೊಗಳಿದ ಸಚಿವ ಜಿ ಪರಮೇಶ್ವರ್

ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ ಅವರು ಉತ್ಸಾಹಿ ತರುಣರಾಗಿದ್ದು, ವಿರೋಧ ಪಕ್ಷದಲ್ಲಿ ಇದ್ದುಕೊಂಡು ರಚನಾತ್ಮಕವಾದ ಟೀಕೆ ಮಾಡಿ ನಮ್ಮನ್ನು ಎಚ್ಚರಿಸಲಿ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸಲಹೆ ನೀಡಿದ್ದಾರೆ.

Vijayendra praised Minister G Parameshwar snr
Author
First Published Nov 12, 2023, 8:57 AM IST

 ತುಮಕೂರು :  ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ ಅವರು ಉತ್ಸಾಹಿ ತರುಣರಾಗಿದ್ದು, ವಿರೋಧ ಪಕ್ಷದಲ್ಲಿ ಇದ್ದುಕೊಂಡು ರಚನಾತ್ಮಕವಾದ ಟೀಕೆ ಮಾಡಿ ನಮ್ಮನ್ನು ಎಚ್ಚರಿಸಲಿ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸಲಹೆ ನೀಡಿದ್ದಾರೆ.

ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರ ಪಕ್ಷದವರು ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಮಾಡಿದ್ದಾರೆ. ರಾಜಕೀಯ ಉದ್ದೇಶವಿಟ್ಟುಕೊಂಡು ಅನಾವಶ್ಯಕವಾಗಿ ಟೀಕೆ ಟಿಪ್ಪಣಿ ಮಾಡುವುದು ಆರೋಗ್ಯಕರವಲ್ಲ. ಇದನ್ನು ಗಮನದಲ್ಲಿಟ್ಟುಕೊಳ್ಳಲಿ ಎಂದು ಸಲಹೆ ನೀಡಿದರು.

ಜಾತಿ ಆಧಾರದ ಮೇಲೆ ಪಕ್ಷಗಳು ಈ ರೀತಿಯ ಹುದ್ದೆ ಕೊಡುವುದಿಲ್ಲ. ಆದರೆ, ಅದು ಚರ್ಚೆಯಾಗಬಹುದು ಎಂದ ಅವರು ಜಾತಿಯನ್ನೇ ಆಧಾರವಾಗಿಟ್ಟುಕೊಂಡು ಅಧಿಕಾರ ಕೊಡುವುದಿಲ್ಲ. ಅವರ ಪಕ್ಷದ ನಡವಳಿ ಬಗ್ಗೆ ಕಾಮೆಂಟ್ ಮಾಡುವುದಕ್ಕಾಗುವುದಿಲ್ಲ ಎಂದರು.

ಬಿಡದಿ ಹಾಗೂ ತುಮಕೂರು ಎರಡು ಕಡೆನೂ ಮೆಟ್ರೋ ಆಗುವ ವಿಚಾರದಲ್ಲಿ ಜಟಾಪಟಿ ಇಲ್ಲ. ಇದು ಫಸ್ಟ್, ಸೆಕೆಂಡ್ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದ ಪರಮೇಶ್ವರ್ ಬಿಡದಿವರೆಗೂ ಮೆಟ್ರೋ ವಿಸ್ತರಣೆ ಮಾಡಿದರೆ ಬೆಂಗಳೂರು ಬೆಳೆಯುತ್ತದೆ. ಹಾಗೆಯೇ ತುಮಕೂರು ಬೆಳೆದರು ಒಳ್ಳೆಯದು ಎಂದರು.

ಯಾರೋ ಮಚ್ಚು ಹಿಡಿದುಕೊಂಡು ಓಡಾಡಿದರೆ ಪೊಲೀಸರು ಸುಮ್ಮನೆ ಬಿಡುವುದಿಲ್ಲ. ಅಂತಹವರನ್ನು ಹಿಡಿದು ಒಳಗೆ ಹಾಕುತ್ತೇವೆ. ಬೆಂಗಳೂರಲ್ಲಿ ಪೊಲೀಸ್ ಕಮಿಷನರ್ ಎಲ್ಲಾ ರೌಡಿಗಳನ್ನು ಮಾನಿಟರ್ ಮಾಡುತ್ತಿದ್ದಾರೆ. ಅದೇ ರೀತಿ ತುಮಕೂರಿನಲ್ಲಿ ಮಾಡುತ್ತೇವೆ ಎಂದರು.

 ಸಂಭ್ರಮಾಚರಣೆ ಬಳಿಕ ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್ ಹೇಳಿಕೆ

 ಹೊನ್ನಾಳಿ :  ಬಿಜೆಪಿ ವರಿಷ್ಠರು ಬಿ.ವೈ.ವಿಜಯೇಂದ್ರರ ಮೇಲೆ ಅಚಲ ವಿಶ್ವಾಸವಿಟ್ಟು ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ನೀಡಿರುವುದು ನಮಗೆಲ್ಲ ಆನೆ ಬಲ ಬಂದಂತಾಗಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್ ಹೇಳಿದರು.

ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ ಹಿನ್ನೆಲೆಯಲ್ಲಿ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಶನಿವಾರ ತಾಲೂಕು ಬಿಜೆಪಿ ಘಟಕದಿಂದ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಾಚರಿಸಿದ ನಂತರ ಮಾತನಾಡಿ ರಾಜ್ಯಾಧ್ಯಕ್ಷ ಸ್ಥಾನ ಆಯ್ಕೆ ಸ್ವಲ್ಪ ತಡವಾದರೂ ಉತ್ಸಾಹಿ ತರುಣ, ಶಾಸಕ ವಿಜಯೇಂದ್ರರ ಆಯ್ಕೆಯಿಂದ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 26 ರಿಂದ 27 ಸ್ಥಾನಗಳ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಬಿಜೆಪಿಯ ತಳಮಟ್ಟದಿಂದ ಸಂಘಟಿಸಿ ಅಧಿಕಾರಕ್ಕೆ ತಂದ ಬಿ.ಎಸ್.ಯಡಿಯೂರಪ್ಪ, ಈಶ್ವರಪ್ಪ, ಸದಾನಂದಗೌಡ ಸೇರಿ ಅನೇಕ ಹಿರಿಯರ ಮಾರ್ಗದರ್ಶನ ಪಡೆದು ರಾಜ್ಯದಲ್ಲಿ ಪಕ್ಷವನ್ನು ಉನ್ನತ ಮಟ್ಟಕ್ಕೆ ಕೊಂಡಯ್ಯಲಿದ್ದಾರೆ ಎಂದರು. ನಾವು ಅವರ ಜೊತೆಗೆ ಕೈ ಜೋಡಿಸಿ ಪಕ್ಷ ಸಂಘಟಿಸುತ್ತೇವೆ ಎಂದು ತಿಳಿಸಿದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ನೆಲಹೊನ್ನೆ ಮಂಜುನಾಥ್ ಮಾತನಾಡಿ, ಬಿಜೆಪಿ ನಾಯಕರು ಅಳೆದು ತೂಗಿ ಸಕಾಲಕ್ಕೆ ಸರಿಯಾಗಿ ಸಮರ್ಪಕ ನಾಯಕನ ಆಯ್ಕೆ ಮಾಡಿದ್ದಾರೆ ಎಂದರು.

ಪುರಸಭೆ ಸದಸ್ಯ ಹಾಗೂ ಬಿಜೆಪಿ ಮುಖಂಡ ಧರ್ಮಪ್ಪ, ದಿಡಗೂರು ಪಾಲಕ್ಷಪ್ಪ ಮಾತನಾಡಿದರು. ಮುಖಂಡರಾದ ಕುಬೇರಪ್ಪ, ಎಂ.ಎಸ್.ಪಾಲಕ್ಷಪ್ಪ, ಮಂಜುನಾಥ್ ಇಂಚರ, ಮಹೇಶ್ ಹುಡೇದ್, ಪೇಟೆ ಪ್ರಶಾಂತ್, ಗಿರೀಶ್, ನಾಗರಾಜ್ ಮಾದೇನಹಳ್ಳಿ, ಬೀರಪ್ಪ, ಪುರಸಭೆ ಮಾಜಿ ಅಧ್ಯಕ್ಷ ರಂಗನಾಥ್ ಇತರರಿದ್ದರು.

Follow Us:
Download App:
  • android
  • ios