ಸಾತ್ವಿಕ್ ರಕ್ಷಣಾ ಕಾರ್ಯಾಚರಣೆಯ ಬಾಡಿಗೆಯನ್ನೆ ಪಾವತಿಸದ ಇಂಡಿ ಅಧಿಕಾರಿಗಳು: ಡಿಸಿ ಭೂಬಾಲನ್ ಹೇಳಿದ್ದೇನು?
ಸಾತ್ವಿಕ್ ಬದುಕಿಸಲು ಜಿಲ್ಲಾಡಳಿತ ಸೇರಿ ಸ್ಥಳೀಯರು, ಜೆಸಿಬಿ, ಹಿಟ್ಯಾಚಿ ಮಾಲಿಕರು ಪ್ರಯತ್ನ ಪಟ್ಟಿದ್ದರು. ಜೊತೆಗೆ ಸ್ಟೋನ್ ಕಟರ್, ಟ್ರಾಕ್ಟರ್ ಡ್ರಿಲರ್ ಗಳು ಸಾತ್ವಿಕ್ ಜೀವ ಉಳಿಸುವಲ್ಲಿ ಮಾಡಿದ್ದ ಪ್ರಯತ್ನ ಸಣ್ಣದಲ್ಲ. ಆದ್ರೆ ಅಂದು ಕೊಳವೆ ಬಾವಿ ಕಾರ್ಯಾಚರಣೆಯಲ್ಲಿ ಭಾಗಿಯಾದ ವಾಹನ, ಜೆಸಿಬಿ-ಹಿಟ್ಯಾಚಿಗಳ ಬಿಲ್ ನೀಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ.
- ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಆ.26) : ಕಳೆದ ಏಪ್ರೀಲ್ ತಿಂಗಳಲ್ಲಿ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಸಾತ್ವಿಕ್ ಎನ್ನುವ ಬಾಲಕ ಕೊಳವೆ ಬಾವಿಗೆ ಬಿದ್ದು, ಅದೃಷ್ಟವಶಾತ್ ಬಚಾವ್ ಆಗಿದ್ದ. ಸಾತ್ವಿಕ್ ಬದುಕಿಸಲು ಜಿಲ್ಲಾಡಳಿತ ಸೇರಿ ಸ್ಥಳೀಯರು, ಜೆಸಿಬಿ, ಹಿಟ್ಯಾಚಿ ಮಾಲಿಕರು ಪ್ರಯತ್ನ ಪಟ್ಟಿದ್ದರು. ಜೊತೆಗೆ ಸ್ಟೋನ್ ಕಟರ್, ಟ್ರಾಕ್ಟರ್ ಡ್ರಿಲರ್ ಗಳು ಸಾತ್ವಿಕ್ ಜೀವ ಉಳಿಸುವಲ್ಲಿ ಮಾಡಿದ್ದ ಪ್ರಯತ್ನ ಸಣ್ಣದಲ್ಲ. ಆದ್ರೆ ಅಂದು ಕೊಳವೆ ಬಾವಿ ಕಾರ್ಯಾಚರಣೆಯಲ್ಲಿ ಭಾಗಿಯಾದ ವಾಹನ, ಜೆಸಿಬಿ-ಹಿಟ್ಯಾಚಿಗಳ ಬಿಲ್ ನೀಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ.
ಜೀವ ಉಳಿಸಿದವರ ಬಾಡಿಗೆ ಪಾವತಿಸಲು ಮೀನಾಮೇಷ: ಹೌದು, ಅಂದು ಸಾತ್ವಿಕ್ ಮುಜಗೊಂಡ ಎನ್ನುವ ಬಾಲಕ ಅಚಾನಕ್ಕಾಗಿ ಕೊಳವೆ ಬಾವಿಗೆ ಬಿದ್ದು 22 ಗಂಟೆಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ಕೊನೆಗೆ ವಿಧಿಯನ್ನೆ ಎದ್ದು ಬದುಕಿ ಬಂದಿದ್ದ. ಅಂದು ಸಾತ್ವಿಕ್ ನ ಅದೃಷ್ಟಕ್ಕೆ ಸಾತ್ ಕೊಟ್ಟಿದ್ದು, ಜಿಲ್ಲಾಡಳಿತ ನಡೆಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಜೆಸಿಬಿ, ಹಿಟ್ಯಾಚಿ, ಸ್ಟೋನ್ ಕಟರ್ ಮಶೀನ್ ಗಳ ಮಾಲಿಕರು ಅನ್ನೋದ್ರಲ್ಲಿ ಎರೆಡು ಮಾತಿಲ್ಲ. ಆದ್ರೆ ಘಟನೆ ನಡೆದು 4 ತಿಂಗಳು ಕಳೆಯುತ್ತಾ ಬಂದರು ರಕ್ಷಣಾ ಕಾರ್ಯಾಚರಣೆಗೆ ಬಳಸಿದ ವಾಹನ, ಮಶೀನ್ ಗಳ ಬಾಡಿಗೆ ನೀಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ.
ನಾನು ಏಕಲವ್ಯ, ರಜನಿಕಾಂತ್ ದ್ರೋಣಾಚಾರ್ಯ: ಯೋಗಿಯಂತಹ ವ್ಯಕ್ತಿ ಜತೆ ನಟಿಸೋ ಭಾಗ್ಯ ಸಿಕ್ಕಿದೆ ಎಂದ ಉಪೇಂದ್ರ
ಪಾವತಿಯಾಗಿಲ್ಲ ಹಿಟ್ಯಾಚಿ, ಜೆಸಿಬಿ ಬಾಡಿಗೆ: ಸಾತ್ವಿಕ್ ರಕ್ಷಣೆಗೆ ಏಪ್ರೀಲ್ 3ರ ಸಂಜೆ ಶುರುವಾದ ಕಾರ್ಯಾಚರಣೆ ಮರುದಿನ ದಿನಾಂಕ 4 ರಂದು ಮಧ್ಯಾಹ್ನ ಮುಗಿದಿತ್ತು. ಸತತ 22 ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಹಿಟ್ಯಾಚಿ, ಜೆಸಿಬಿ, ಸ್ಟೋನ್ ಬ್ರೇಕರ್, ಸ್ಟೋನ್ ಕಟರ್ ಗಳ ಪಾತ್ರ ಯಾರು ಮರೆಯುವಂತಿಲ್ಲ. ಅದ್ರಲ್ಲು ಮಗು ಕೊಳವೆ ಬಾವಿಗೆ ಬಿದ್ದ ತಕ್ಷಣವೆ ಸ್ಥಳಕ್ಕಾಗಮಿಸಿದ ಜೆಸಿಬಿ ತಂಡ ರಕ್ಷಣಾ ಕಾರ್ಯಾಚರಣೆ ಶುರು ಮಾಡಿತ್ತು, ಬಳಿಕ ಹಿಟ್ಯಾಚಿಗಳು ಸೇರಿದಂತೆ ಸ್ಟೋನ್ ಬ್ರೇಕರ್, ಸ್ಟೋನ್ ಕಟರ್ ಮಶೀನ್ ಗಳು ಕಾರ್ಯಾಚರಣೆಯನ್ನ ಸುಲಭಗೊಳಿಸುವ ಮೂಲಕ ಸಾತ್ ಕೊಟ್ಟಿದ್ದು. ಈ ಎಲ್ಲ ಮಶೀನ್‌ಗಳು ಇಂಡಿ ತಾಲೂಕಿನ ರೈತರು, ಸ್ಥಳೀಯರಿಗೆ ಸೇರಿದ್ದು. ಈ ಮಶೀನರಿಗಳನ್ನ 22 ಗಂಟೆಗಳ ಕಾಲ ದುಡಿಸಿಕೊಂಡ ಅಧಿಕಾರಿಗಳು ಈಗ ಬಾಡಿಗೆ ನೀಡದೆ ಕಚೇರಿಗೆ ಅಲೆದಾಡುವಂತೆ ಮಾಡಿದ್ದಾರೆ.
3.70 ಲಕ್ಷ ಭಾಕಿ ಪಾವತಿ ಮಾಡದ ಅಧಿಕಾರಿಗಳು: ಅಂದಹಾಗೆ ಹಿಟ್ಯಾಚಿ, ಜೆಸಿಬಿ, ನೀರಿನ ಟ್ಯಾಂಕರ್, ಸ್ಟೋನ್ ಕಟರ್, ಸ್ಟೋನ್ ಬ್ರೇಕ್ ಸೇರಿದಂತೆ ಹಲವು ವಾಹನ, ಮಶೀನರಿಗಳ ಕೇವಲ 3.70 ಲಕ್ಷ ರೂಪಾಯಿಯನ್ನ ಜಿಲ್ಲಾಡಳಿತ ಭಾಕಿ ಉಳಿಸಿಕೊಂಡಿದೆ. ಗ್ರಾಮ ಪಂಚಾಯತ್ ಲಚ್ಯಾಣದ ಅಧಿಕಾರಿಗಳು ಒಟ್ಟು ಆದ ವ್ಯಚ್ಛವನ್ನ ಇಂಡಿ ಉಪವಿಭಾಗಾಧಿಕಾರಿಗೆ ರವಾನಿಸಿದ್ದಾರೆ. ಬಳಿಕ ಅಲ್ಲಿಂದ ಜಿಲ್ಲಾಡಳಿತಕ್ಕೆ ಈ ಬಿಲ್ ಸೇರಿದೆ. ಆದ್ರೆ ಈ ಬಿಲ್ ಗಳನ್ನ ಡಿಸಿ ಟೇಬಲ್ ಗೆ ತರೋದಕ್ಕೆ ಇಂಡಿ ಎ.ಸಿ ಹಬೀದ್ ಗದ್ಯಾಳ್ ತೆಗೆದುಕೊಂಡಿದ್ದು ಬರೊಬ್ಬರಿ ೪ ತಿಂಗಳು ಅಂದ್ರೆ ನೀವು ನಂಬಲೇ ಬೇಕು..
ಯಾರ್ಯಾರ ಬಾಡಿಗೆ ಎಷ್ಟೇಷ್ಟು ಭಾಕಿ..?
# 2 ಹಿಟ್ಯಾಚಿ - 1,84800 ರೂಪಾಯಿ ಭಾಕಿ
# 4 ಟ್ರಾಕ್ಟರ್ ಬ್ರೇಕರ್ಸ್ - 52,800 ರೂಪಾಯಿ ಭಾಕಿ
# 3 ಜೆಸಿಬಿ - 89,100 ರೂಪಾಯಿ ಭಾಕಿ
# 3 ಟ್ರಾಕ್ಟರ್ - 16,500 ರೂಪಾಯಿ ಭಾಕಿ
# 1 ವಾಟರ್ ಟ್ಯಾಂಕರ್ - 15,950 ರೂಪಾಯಿ ಭಾಕಿ
# 1 ಹ್ಯಾಂಡ್ ಡ್ರಿಲ್ಲಿಂಗ್ ಮಶೀನ್ - 6600 ರೂಪಾಯಿ ಭಾಕಿ
# 1 ಸ್ಟೋನ್ ಕಟ್ಟಿಂಗ್ ಮಶೀನ್ - 4268 ರೂಪಾಯಿ ಭಾಕಿ
ಒಟ್ಟು 3 ಲಕ್ಷ 70 ಸಾವಿರ ಭಾಕಿ ಉಳಿಸಿಕೊಂಡ ಜಿಲ್ಲಾಡಳಿತ..
ಜೀವನದಲ್ಲಿ ನೆಮ್ಮದಿಯಾಗಿರಲು ಸರಳವಾಗಿ ಬದುಕಬೇಕು: ಸಿ.ಟಿ.ರವಿ
ವಾರದಲ್ಲೆ ಬಾಡಿಗೆ ಜಮೆ ಮಾಡ್ತೇವೆ ; ಡಿಸಿ ಟಿ ಭೂಬಾಲನ್: ಇನ್ನೂ ಏಷ್ಯಾನೆಟ್ ಸುವರ್ಣ ನ್ಯೂಸ್ ಈ ವಿಚಾರವನ್ನ ಜಿಲ್ಲಾಧಿಕಾರಿ ಟಿ ಭೂಬಾಲನ್ ಅವರ ಗಮನಕ್ಕೆ ತಂದಾಗ ಅಸಲಿ ವಿಚಾರ ಹೊರಗೆ ಬಿದ್ದಿತ್ತು. ಅಸಲಿಗೆ ರಕ್ಷಣಾ ಕಾರ್ಯಾಚರಣೆ ಮುಗಿದ ಬಳಿಕ ಜಿಲ್ಲಾಡಳಿತಕ್ಕೆ ತಕ್ಷಣವೇ ಬಿಲ್ ನೀಡಬೇಕಿದ್ದ ಇಂಡಿ ತಾಲೂಕಾಡಳಿತ, ಇಂಡಿ ಉಪವಿಭಾಗದ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿಗೆ ಬಾಡಿಗೆ ಬಿಲ್ ಗಳನ್ನ ಕಳುಹಿಸೋದ್ರಲ್ಲಿ ಭಾರೀ ನಿರ್ಲಕ್ಷ್ಯ ಮಾಡಿರೋದು ಕಂಡು ಬಂದಿದೆ. ಕಳೆದ ಆಗಷ್ಟ ೧೫ರ ಹೊತ್ತಿಗಷ್ಟೆ ಬಿಲ್ ಗಳು ಜಿಲ್ಲಾಧಿಕಾರಿಗಳ ಟೇಬಲ್ ಬಂದಿದೆಯಂತೆ. ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿಗಳು ಕೇವಲ ವಾರದಲ್ಲೆ ನಾನು ಬಿಲ್ ಸಂದಾಯ ಮಾಡೋದಾಗಿ ಹೇಳಿದ್ದಾರೆ. ಅಲ್ಲದೆ ಬಿಲ್ ನನಗೆ ಬಂದು ತಲುಪಿದ್ದೆ ಕಳೆದ ವಾರ ಹೀಗಾಗಿ ತಡವಾಗಿದೆ. ಅಲ್ಲಿಂದ ಬಿಲ್ ಗಳು ಬೇಗ ಬಂದಿದ್ದರೆ ನಾನು ಆಗಲೇ ಬಾಡಿಗೆಯನ್ನ ರವಾನಿಸುತ್ತಿದ್ದೇವು ಎಂದಿದ್ದಾರೆ.