ವಿಜಯಪುರ(ಮಾ.13):ಕುಲಾಲಿ- ಸಾವಳಗಿ ವಿಭಾಗದಲ್ಲಿ ಡಬ್ಲಿಂಗ್‌ ಕಾಮಗಾರಿ ಹಿನ್ನೆಲೆಯಲ್ಲಿ ಎರಡು ರೈಲುಗಳ ಓಡಾಟವನ್ನು ಭಾಗಶಃ ರದ್ದುಪಡಿಸಲಾಗಿದೆ. 

ವಿಜಯಪುರ- ರಾಯಚೂರು ಪ್ಯಾಸಿಂಜರ್‌ (ಟ್ರೇನ್‌ ನಂ. 57133) ರೈಲನ್ನು 13-3-2020ರಿಂದ 30-3-2020ರವರೆಗೆ ಸೊಲ್ಲಾಪುರ- ರಾಯಚೂರ ಮಧ್ಯೆದಲ್ಲಿ ಭಾಗಶಃ ರದ್ದುಪಡಿಸಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾಯಚೂರು-ವಿಜಯಪುರ ಪ್ಯಾಸಿಂಜರ್‌ (ಟ್ರೇನ್‌ ನಂ.57134) ರೈಲನ್ನು 14-3-2020ರಿಂದ 31-3-2020ರವರೆಗೆ ರಾಯಚೂರು- ಸೊಲ್ಲಾಪುರ ಮಾರ್ಗದಲ್ಲಿ ಭಾಗಶಃ ರದ್ದುಪಡಿಸಲಾಗಿದೆ ಎಂದು ಹುಬ್ಬಳ್ಳಿ ನೈಋುತ್ಯ ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.