ನನ್ನ ಬಳಿಯೂ ರೆಕಾರ್ಡಿಂಗ್‌ ಇದೆ, ಅದನ್ನು ತೆಗೆದರೆ ನಿಮ್ಮದೆಲ್ಲವೂ ಬಂದ್‌: ಯತ್ನಾಳ್‌ ಬಾಂಬ್‌..!

ನಾವು ಇಲ್ಲಿ ಟಿಕೆಟ್‌ ಹಂಚಲು ಬಂದಿಲ್ಲ. ನಮ್ಮ ಸಮಾಜದ 2 ಎ ಮೀಸಲಾತಿಗಾಗಿ ಬಂದಿದ್ದೇವೆ. ನಾನು ಕೋರ್‌ ಕಮೀಟಿ ಸದಸ್ಯನಾಗಿ ಇಲ್ಲಿ ಬಂದಿಲ್ಲ: ಯತ್ನಾಳ 

Vijayapura MLA Basanagouda Patil Yatnal Slams BJP MLA Arvind Bellad grg

ಬೆಳಗಾವಿ(ಅ.22): ನನ್ನ ಏನಾದರೂ ಮಾಡಿ ಎಂದು ಯಾರ ಕಾಲು ಬಿದ್ದಿಲ್ಲ, ನಾನು ಕಾಲು ಬಿದ್ದಿದ್ದು ಕೇವಲ ಮಾಜಿ ಪ್ರಧಾನಿ ದಿ.ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಮಾತ್ರ. ನಾವು ಗೂಟ ಇಟ್ಟರೆ ವಾಪಸ್‌ ಸುಧಾರಿಸಿಕೊಳ್ಳಲು ಆಗುವುದಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸ್ವಪಕ್ಷೀಯ ನಾಯಕರಿಗೆ ಎಚ್ಚರಿಕೆ ನೀಡಿದರು.

ಹುಕ್ಕೇರಿಯಲ್ಲಿ ಶುಕ್ರವಾರ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಅವರು ಮಾತನಾಡಿದರು. ನಾವು ಇಲ್ಲಿ ಟಿಕೆಟ್‌ ಹಂಚಲು ಬಂದಿಲ್ಲ. ನಮ್ಮ ಸಮಾಜದ 2 ಎ ಮೀಸಲಾತಿಗಾಗಿ ಬಂದಿದ್ದೇವೆ. ನಾನು ಕೋರ್‌ ಕಮೀಟಿ ಸದಸ್ಯನಾಗಿ ಇಲ್ಲಿ ಬಂದಿಲ್ಲ. ಯತ್ನಾಳ ನಾಯಕನಲ್ಲ ಎಂದು ಬೆಳಗಾವಿ, ವಿಜಯಪುರದ ನಾಯಕರಿಂದ ಹೇಳಿಸುವಂತೆ ಯತ್ನಾಳ ಅವರು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು. ನಾನು ನಾಯಕನಲ್ಲ ಎಂದು ಹೇಳಿದರೆ ಹೇಳಿದವರೇ ಆರಿಸಿ ಬರುವುದಿಲ್ಲ. ನಾನು ನಾಯಕನಲ್ಲ ಎಂದು ಉಳಿದ ನಾಯಕರ ಕಡೆಯಿಂದ ಹೇಳಿಸಿ ಎಂದರು.

ಮತ್ತೆ ಬೀದಿಗಳಿದ ಕಬ್ಬು ಬೆಳೆಗಾರರು: ಬೆಳಗಾವಿಯ ಸುವರ್ಣಸೌಧ ಮುತ್ತಿಗೆಗೆ ವಿಫಲ ಯತ್ನ..!

ಅರಬಾವಿ ಕಾರ್ಯಕ್ರಮ ಆಗುವ ಮೊದಲು ಹೇಗೆ ಬೇಕೋ ಹಾಗೆ ಮೊದಲು ನಮಸ್ಕಾರ ಮಾಡುತ್ತಿದ್ದರು. ಅರಭಾವಿ ಕಾರ್ಯಕ್ರಮ ಆದ ಮೇಲೆ ಎಲ್ಲರೂ ಸಹ ನೀಟಾಗಿ ನಮಸ್ಕಾರ ಮಾಡುತ್ತಾರೆ. ಎಂದು ವೇದಿಕೆಯ ಮೇಲೆಯೇ ನಮಸ್ಕಾರ ಮಾಡುವ ಭಂಗಿ ಪ್ರದರ್ಶಿಸಿದ ಯತ್ನಾಳ, ಈ ದೇಶದ ಪ್ರಧಾನಿಯೇ ಹೇಳುತ್ತಾರೆ ನಾನು ಒಬ್ಬ ಪ್ರಧಾನ ಸೇವಕ ಎಂದು. ನಾನೂ ಸಹ ಸೇವಕನೆ. ನಾನೊಬ್ಬ ಭೂತದ ರೀತಿಯಲ್ಲಿ ಅಪ್ಪ-ಮಗನನ್ನು ಕಾಡುತ್ತಿದ್ದೇನೆ ಎಂದು ಯಡಿಯೂರಪ್ಪ, ವಿಜಯೇಂದ್ರ ಹೆಸರು ಪ್ರಸ್ತಾಪಿಸದೇ ಟಾಂಗ್‌ ನೀಡಿದರು.

ನಿಮ್ಮ ಬಳಿ ಬಟ್ಟೆ ಹಾವಿದ್ದರೆ ನನ್ನ ಬಳಿ ನಿಜವಾದ ಹಾವಿದೆ, ನಮ್ಮ ತಂಟೆಗೆ ಬಂದರೆ ನಿಜವಾದ ಹಾವು ಬಿಡಬೇಕಾಗುತ್ತದೆ. ನಾ ಯಾರ ಬಳಿ ಹೋಗಿ ಕೋರ್‌ ಕಮೀಟಿ ಅಧ್ಯಕ್ಷನ ಮಾಡಿ, ಕೋರ್‌ ಕಮೀಟಿ ಸದಸ್ಯನ್ನಾಗಿ ಮಾಡಿ ಎಂದು ಹೋಗಿಲ್ಲ. ಬಸನಗೌಡನನ್ನ ಯಾವುದು ಸೀಚ್‌ ಬರಬಾರದು ಎಂದು ಹಣ ಹಂಚಲಾಗುತ್ತಿದೆ. ವಿಜಯಪುರದ ಮಹಾನಗರ ಪಾಲಿಕೆ ಚುನಾವಣೆಗೆ ಬೆಂಗಳೂರಿನಿಂದ ಹಣ ಬರುತ್ತಿದೆ. ಮುಧೋಳದ ಸಕ್ಕರೆ ಕಾರ್ಖಾನೆ ನಡೆಸುವವ ಒಬ್ಬ ಹಣ ಕಳುಹಿಸುತಿದ್ದಾನೆ ಎಂದರು.

ಉಮೇಶ ಕತ್ತಿ ಸ್ಮರಿಸಿದ ಯತ್ನಾಳ

ದಿ. ಉಮೇಶ ಕತ್ತಿ ಅವರನ್ನು ಸ್ಮರಿಸಿದ ಬನಸಗೌಡ ಪಾಟೀಲ ಯತ್ನಾಳ ಅವರು, ಕತ್ತಿಯವರು ನನಗೆ ನೀವೇ ಮುಖ್ಯಮಂತ್ರಿಯಾಗಿ, ನನಗೆ ಆ ಟೆನ್ಷನ್‌ ತಡೆದುಕೊಳ್ಳುವುದಕ್ಕೆ ಆಗುವುದಿಲ್ಲ. ನೀನೇ ಮುಖ್ಯಮಂತ್ರಿಯಾಗುವಂತೆ ಸಲಹೆ ನೀಡಿದ್ದರು ಎಂದು ಹೇಳಿದರು.

ಇಂದು ಎಸ್ಪಿಯಿಂದ ಮುಖ್ಯಮಂತ್ರಿಗೆ ಸಂದೇಶ ಹೋಗುತ್ತದೆ. ಎಷ್ಟುಜನ ಸೇರಿದ್ದರು. ಯತ್ನಾಳ ಏನು ಮಾತನಾಡಿದರು, ಅವನ ತೆಗೆಯಲಿಕ್ಕ ಏನು ಮಾಡಬೇಕು. ಈ ಎಲ್ಲ ಮಾಹಿತಿಗಳು ಸಿಎಂಗೆ ಹೋಗಿರುತ್ತವೆ. ಕೆಲ ಪತ್ರಕರ್ತರು, ಯೂಟ್ಯೂಬ್‌ ಚಾನಲ್‌ನವರೂ ಸಹ ನನ್ನ ಹಿಂದೆ ಬಿದ್ದಿದ್ದಾರೆ. ಚಾಲನ್‌ ಹೆಸರು ಪತ್ರಕರ್ತರ ಹೆಸರು ಹೇಳದೆ ಟಾಂಗ್‌ ನೀಡಿದ ಅವರು, ನಾನು ಮಂತ್ರಿ ಆಕಾಂಕ್ಷಿಯೆಂದು ಯಾರೂ ಬರೆಯಬೇಡಿ. ನನಗೆ ಮಂತ್ರಿ ಸ್ಥಾನ ಬೇಡ. ನಾನು 2 ಎ ಮೀಸಲಾತಿ ಕೊಡಿಸಿಯೇ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.

ಬೆಳಗಾವಿ: ಅ. 29ರಿಂದ ಯಡೂರನಿಂದ ಶ್ರೀಶೈಲವರೆಗೆ ಪಾದಯಾತ್ರೆ, ಶ್ರೀಶೈಲ ಜಗದ್ಗುರು ಶ್ರೀ

ಯಾರ ಕಾಲಿಗೂ ಬೀಳದವರು ಮೊನ್ನೆ ನಮ್ಮ ಸ್ವಾಮೀಜಿ ಕಾಲಿಗೆ ಬಿದ್ದಿದ್ದಾರೆ. ಯಾರ ಕಾಲಿಗೂ ಬೀಳದವರು ಮೊನ್ನೆ ನಮ್ಮ ಸ್ವಾಮೀಜಿ ಕಾಲಿಗೆ ಬಿದ್ದಿದ್ದಾರೆ. ಯಾರ ಕಾಲು ಬಿದ್ದಿಲ್ಲ ಸರ್‌ ಅವರು ಎಂದು ನಮಗೆ ಒಬ್ಬರು ಹೇಳಿದ್ದರು. ಅವರು ಈಗ ಬೀಳಲೇಬೇಕು. ನಾವು ಯಕಮನಮರಡಿಯಲ್ಲಿ 40 ಸಾವಿರ ದಷ್ಟು ಜನರಿದ್ದೇವೆ ಎಂದು ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಟಾಂಗ್‌ ನೀಡಿದರು.

ನನ್ನ ಬಳಿಯೂ ರೆಕಾರ್ಡಿಂಗ್‌ ಇದೆ

ನನ್ನ ಬಳಿಯೂ ರೆಕಾರ್ಡಿಂಗ್‌ ಇದೆ. ಅದನ್ನು ತೆಗೆದೆ ಎಂದರೆ ನಿಮ್ಮದೆಲ್ಲವೂ ಬಂದ್‌ ಆಗುತ್ತದೆ ಎಂದು ಅರವಿಂದ ಬೆಲ್ಲದಗೆ ತಿಳಿಸಿದ ಯತ್ನಾಳ ಅವರು, ಮೀಸಲಾತಿ ನೀಡಿದರೆ ಈ ಬಾರಿಯ ಚುನಾವಣೆಯಲ್ಲಿ ಓಕೆ, ಇಲ್ಲವಾದರೆ ಏನು ಮಾಡಬೇಕು ಎನ್ನುವುದು ನಮಗೂ ಗೊತ್ತಿದೆ ಎಂದು ಹೇಳಿದರು.
 

Latest Videos
Follow Us:
Download App:
  • android
  • ios