20 ಸಾವಿರ ನಾಟಕಗಳ ಒಡತಿ ಇಂಡಿಯ ಪ್ರತಿಭೆಗೆ ಒಲಿದು ಬಂದ ರಾಜ್ಯೋತ್ಸವ ಪ್ರಶಸ್ತಿ

ರಾಜ್ಯ ಸರ್ಕಾರ ಅಪರೂಪದಲ್ಲೆ ಅಪರೂಪದ ಕಲಾವಿದೆಯನ್ನ ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನ ನೀಡಿದೆ. ಇಂಡಿಯ ಬಡ ಕಲಾವಿದೆ ಲಲಿತಾ ಚೆನ್ನದಾಸರ್‌ಗೆ ಈ ಬಾರಿಯ ಸರ್ಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

Vijayapura Indi artist drama Queen Lalitha chennadasar got Karnataka Rajyotsava Award akb

ಷಡಕ್ಷರಿ ಸುವರ್ಣನ್ಯೂಸ್
ವಿಜಯಪುರ (ನ.1) : ಸಾಧನೆ ಮಾಡಿದ ಕಲಾವಿದರಿಗೆ ಪ್ರತಿ ವರ್ಷ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನ ನೀಡಿ ಗೌರವಿಸುತ್ತೆ. ಅದ್ರಲ್ಲೂ ಈ ಬಾರಿ ಅಪರೂಪದಲ್ಲೆ ಅಪರೂಪದ ಸಾಧಕಿಯನ್ನ ಗುರುತಿಸಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನ ನೀಡಿ ಗೌರವಿಸಿದೆ. ಆ ಸಾಧಕಿಯ ಬದುಕಿನ ಕಥೆ ಕೇಳಿದ್ರೆ ಎಂಥವ್ರ ಕಣ್ಣಲ್ಲು ನೀರು ಜಿನುಗುತ್ತೆ. ಬಡತನದಲ್ಲೆ ಬೆಂದು ಅರಳಿದ ಪ್ರತಿಭೆ ಲಲಿತಾ ಚೆನ್ನದಾಸರ್‌ ಸಾಹಸಗಾಥೆಯೇ ಈ ಸ್ಟೋರಿ..!

ಇಂಡಿಯ ಬಡ ಕಲಾವಿದೆ ಲಲಿತಾ ಚೆನ್ನದಾಸರ್..!

ರಾಜ್ಯ ಸರ್ಕಾರ ಅಪರೂಪದಲ್ಲೆ ಅಪರೂಪದ ಕಲಾವಿದೆಯನ್ನ ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನ ನೀಡಿದೆ. ಇಂಡಿಯ ಬಡ ಕಲಾವಿದೆ ಲಲಿತಾ ಚೆನ್ನದಾಸರ್‌ಗೆ ಈ ಬಾರಿಯ ಸರ್ಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಇಂಡಿ (Indi) ತಾಲೂಕಿನ ಚೌಡಿಹಾಳ (Choudihaal) ಗ್ರಾಮ ಬುಡಕಟ್ಟು ಅಲೆಮಾರಿ (nomadic tribe comunity) ಜನಾಂಗದಲ್ಲಿ ಜನಿಸಿದ ಲಲಿತಾ ಚೆನ್ನದಾಸರ್‌ (Lalita Chennadaasar) ಹುಟ್ಟು ಕಲಾವಿದೆ. ಕಲಾಸರಸ್ವತಿಯ ಆಶೀರ್ವಾದಿಂದ ಸಾವಿರಾರು ನಾಟಕಗಳಲ್ಲಿ ಪ್ರದರ್ಶನ ನೀಡಿದ್ದಾರೆ. 9ನೇ ವರ್ಷದಲ್ಲೆ ಬಣ್ಣ ಹಚ್ಚಿ ಸತತ 50 ವರ್ಷಗಳ ಕಾಲ ಕಲೆಯನ್ನೆ ಆರಾಧಿಸುತ್ತ ಬದುಕು ನಡೆಸುತ್ತಿದ್ದಾಳೆ.

ಬಡವರ ಪಾಲಿನ ವೈದ್ಯ ದೇವತೆ, ದಾವಣಗೆರೆ ವೈದ್ಯ‌ನಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ

20 ಸಾವಿರ ನಾಟಕಗಳ ಒಡತಿ.!

ಲಲಿತಾ  ಸಾಮಾನ್ಯ ಕಲಾವಿದೆಯಲ್ಲ. ಬಡತನದಲ್ಲಿ ಬೆಂದು ಅಗ್ನಿಕುಂಡದಿಂದ ಹುಟ್ಟಿದ ಅಪರೂಪದ ಕಲಾರತ್ನ. ನಾಟಕದ ವೇದಿಕೆ ಹತ್ತಿದರೆ ಲಲಿತಾ ಸಾಕ್ಷಾತ್‌ ಸರಸ್ವತಿಯ ಮಗಳೆ. ಅಷ್ಟೊಂದು ತೂಕದ ಪ್ರದರ್ಶನ ನೀಡುವ ಕಲಾವಿದೆ. ಈ ವರೆಗೆ 20 ಸಾವಿರ ನಾಟಕಗಳಲ್ಲಿ ಅಭಿನಯಿಸಿ, ಹಳ್ಳಿ-ಹಳ್ಳಿಗಳಲ್ಲಿ ಬಣ್ಣ ಹಚ್ಚಿದ್ದಾಳೆ. ಬಾಲ್ಯದಲ್ಲಿ ತನ್ನ ಮೊದಲ ಬಾರಿಗೆ ಉತ್ತರ ಕರ್ನಾಟಕದ ಜನಪ್ರಿಯ ಬೈಲಾಟ ಪಾರಿಜಾತ ನಾಟಕದಲ್ಲಿ ಬಣ್ಣ ಹಚ್ಚಿದ್ರು. ಹೀಗೆ ದಿನ ಕಳೆದಂತೆ ನಾಟಕ (Drama), ರಂಗ ಕಲೆ (theatre), ಬಣ್ಣವನ್ನೆ ಬದುಕಾಗಿಸಿಕೊಂಡು ನೂರಾರು ನಾಟಕಗಳಲ್ಲಿ 20 ಸಾವಿರಕ್ಕೂ ಅಧಿಕ ಪ್ರದರ್ಶನ ನೀಡಿದ ಹಿರಿಮೆ ಈ ಬಡ ಕಲಾವಿದೆಯದ್ದು.

ಅನಕ್ಷರಸ್ಥೆಯಾದ್ರು ಶ್ರೇಷ್ಠ ಕಲಾವಿದೆ ಲಲಿತಾ..!

ಇನ್ನೊಂದು ವಿಚಿತ್ರ ಸಂಗತಿ ಅಂದ್ರೆ 20 ಸಾವಿರ ನಾಟಕ ಪ್ರದರ್ಶನ ನೀಡಿದ ಶ್ರೇಷ್ಠ ಕಲಾವಿದೆ ಲಲಿತಾ ಅನಕ್ಷರಸ್ಥೆ ಅನ್ನೋದು. ಜೀವಮಾನದಲ್ಲೆ ಲಲಿತಾ ಶಾಲೆಯ ಮುಖ ನೋಡಿಲ್ಲ. ಹೀಗಿದ್ರು 300ಕ್ಕೂ ಅಧಿಕ ನಾಟಕಗಳ ಸಂಭಾಷಣೆ, ಕಥೆ, ಡೈಲಾಗ್‌ಗಳು (Dailouge) ಕರಗತ. ಬೇರೆಯವರ ಬಾಯಲ್ಲಿ ನಾಟಕದ ಡೈಲಾಗ್‌ಗಳನ್ನ ಹೇಳಿಸಿ ಅದನ್ನ ನೆನಪಿಟ್ಟುಕೊಂಡು ಅದನ್ನ ವೇದಿಕೆಗಳ ಮೇಲೆ ಪ್ರದರ್ಶಿಸಿದ್ದಾರೆ ಈ‌ ಕಲಾವಿದೆ ಲಲಿತಾ ಚೆನ್ನದಾರ್.

ರಾಯಚೂರಿನ ಇಬ್ಬರು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ, ವಿಶೇಷ ಕ್ಷೇತ್ರದಲ್ಲಿ ಸಾಧನೆ

ಮಹಾರಾಷ್ಟ್ರದಲ್ಲು ಕನ್ನಡವ ಹೊತ್ತು ಮೆರೆಸಿದ ಕಲಾವಿದೆ..!

ಮಹಾರಾಷ್ಟ್ರದಲ್ಲು ಕನ್ನಡ ನಾಟಕಗಳನ್ನ ಪ್ರದರ್ಶನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಸಾಂಗಲಿ, ಸೊಲ್ಲಾಪುರ, ಕೊಲ್ಲಾಪೂರ, ಪುಣೆ, ಜತ್ತ್‌, ಸಾಂಗೋಲಾ ಸೇರಿದಂತೆ ಮಹಾರಾಷ್ಟ್ರದ ಅನೇಕ ಕಡೆಗಳಲ್ಲಿ ಕನ್ನಡ ನಾಟಕಗಳನ್ನ ಪ್ರದರ್ಶಿಸಿ ಕನ್ನಡದ ಸೇವೆಯನ್ನ ಮಾಡಿದ್ದಾರೆ.. ಲಲಿತಾ ಅಭಿನಯದ ಕನ್ನಡದ ನಾಟಕಗಳನ್ನ ನೋಡಿ ಮರಾಠಿಗರು ಮೆಚ್ಚಿಕೊಂಡು ಕೊಂಡಾಡಿದ್ದಾರೆ ಅನ್ನೋದೆ ವಿಶೇಷ. ಈ ಮೂಲಕ ಲಲಿತಾ ಕನ್ನಡದ ಸೇವೆಯನ್ನ ಅಚ್ಚುಕಟ್ಟಾಗಿ ಮಾಡಿರೋದು ಮತ್ತೊಂದು ವಿಶೇಷ..

ಸೋದರ ಮಾವನೆ ಕಲಾಗುರು..!

ಲಲಿತಾ ಸೋದರ ಮಾವ ದೇವಪ್ಪ ದಾಸರ್‌ (Devappa dasar) ಅಪ್ಪಟ ಕಲಾವಿದರು. ಅದ್ರಲ್ಲೂ ಪಾರಿಜಾತದ ಕಲಾವಿದರು. ಲಲಿತಾ ಕಲಾರಂಗಕ್ಕೆ ಕಾಲಿಡೋದಕ್ಕೆ ಸೋದರ ಮಾವ ದೇವಪ್ಪರೇ ಕಾರಣರಂತೆ. ಲಲಿತಾ 9 ವರ್ಷ ವಯಸ್ಸಿನವಳಿದ್ದಾಗ ಮಾವ ದೇವಪ್ಪ, ಶ್ರೀಕೃಷ್ಣ ಪಾರಿಜಾತದಲ್ಲಿ ಅಭಿನಯ ಮಾಡ್ತಿದ್ರು. ಆಗ ತಮ್ಮ ಜೊತೆಗೆ ಲಲಿತಾಳಿಗು ಬಣ್ಣ ಹಚ್ಚಿ ಪಾರಿಜಾತದಲ್ಲಿ ಪಾತ್ರವನ್ನ ನೀಡಿದ್ದರು. ಅಷ್ಟು ಸಣ್ಣ ವಯಸ್ಸಿನಲ್ಲಿ ಬಣ್ಣ ಹಚ್ಚಿದ ಲಲಿತಾಳಿಗೆ ಇಂದಿಗೂ ಬಣ್ಣವೇ ಸರ್ವಸ್ವ, ಬಣ್ಣವೇ ಬದುಕಾಗಿದೆ.

ಇಂಡಿ ಶಾಸಕರಿಂದ ಲಲಿತಾಗೆ ಅಭಿನಂದನೆ..!

ರಾಜ್ಯೋತ್ಸವ ಪ್ರಶಸ್ತಿಗೆ ಭಾಜನಳಾದ ಲಲಿತಾರಿಗೆ ಇಂಡಿ ಶಾಸಕರಾದ ಯಶವಂತರಾಯಗೌಡ ಪಾಟೀಲ (Yasavanta rayagowda Patil) ಅಭಿನಂದಿಸಿದ್ದಾರೆ. ಅಪ್ಪಟ ಕಲಾವಿದೆ, ಬಡತನದಲ್ಲಿ ಬೆಂದ ತಮ್ಮ ಕ್ಷೇತ್ರದ ಕಲಾಕುಸುಮಕ್ಕೆ ರಾಜ್ಯೋತ್ಸವದ ಗರಿ ಸಿಗ್ತಿರೋದಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲ್‌ ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ಇಂಡಿ ಕ್ಷೇತ್ರದ ಅಪರೂಪದ ಕಲಾವಿದೆಯನ್ನ ಗುರುತಿಸಿದ ಸರ್ಕಾರಕ್ಕೂ ಧನ್ಯವಾದ ತಿಳಿಸಿದ್ದಾರೆ..
 

Latest Videos
Follow Us:
Download App:
  • android
  • ios