Vijayapura: ಕೊನೆಗೂ ತಗ್ಗಿದ ಡೋಣಿ ಪ್ರವಾಹ: ನಿಟ್ಟುಸಿರು ಬಿಟ್ಟ ಹರನಾಳ ಗ್ರಾಮಸ್ಥರು!
ಕೆಲ ದಿನಗಳ ಹಿಂದೆ ಸುರಿದ ಬಾರಿ ಮಳೆಯಿಂದ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಡೋಣಿ ನದಿ ಅಂಚಿನಲ್ಲಿ ಪ್ರವಾಹ ಉಂಟಾಗಿತ್ತು. ಮಳೆ ನಿಂತ ಬಳಿಕವು ಪ್ರವಾಹ ಹೆಚ್ಚುತ್ತಲೆ ಇತ್ತು.
ವಿಜಯಪುರ (ಮೇ.26): ಕೆಲ ದಿನಗಳ ಹಿಂದೆ ಸುರಿದ ಬಾರಿ ಮಳೆಯಿಂದ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಡೋಣಿ ನದಿ ಅಂಚಿನಲ್ಲಿ ಪ್ರವಾಹ ಉಂಟಾಗಿತ್ತು. ಮಳೆ ನಿಂತ ಬಳಿಕವು ಪ್ರವಾಹ ಹೆಚ್ಚುತ್ತಲೆ ಇತ್ತು. ಈಗ ಡೋಣಿ ನದಿ ಪ್ರವಾಹ ಕೊಂಚ-ಕೊಂಚವಾಗಿಯೇ ಇಳಿಕೆಯಾಗ್ತಿದೆ. ಆತಂಕದಲ್ಲಿದ್ದ ದೋಣಿ ನದಿ ತೀರದ ಜನ ನಿರಾತಂಕಗೊಂಡಿದ್ದಾರೆ..
ಕೊನೆಗೂ ತಗ್ಗಿದ ಡೋಣಿ ಪ್ರವಾಹ: ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನಲ್ಲಿ ಡೋಣಿ ನದಿಯಲ್ಲಿ ಪ್ರವಾಹ ಭೀತಿ ಉಂಟಾಗಿತ್ತು. ಕೆಲ ದಿನಗಳಿಂದ ಸುರಿದ ಮಳೆಯಿಂದ ಡೋಣಿ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿತ್ತು. ಪರಿಣಾಮ ಮಳೆ ನಿಂತರು ಡೋಣಿಗೆ ಪ್ರವಾಹ ಮಾತ್ರ ಇಳಿಕೆಯಾಗಿರಲಿಲ್ಲ. ಮಳೆ ನಿಂತ ನಾಲ್ಕು ದಿನಗಳ ಕಾಲವು ಡೋಣಿ ಉಕ್ಕಿ ಹರಿದಿತ್ತು.. ನೆಮ್ಮದಿಯ ವಿಚಾರ ಅಂದ್ರೆ ಈಗ ಡೋಣಿ ಪ್ರವಾಹದಲ್ಲಿ ಇಳಿಕೆ ಕಂಡಿದೆ. ಡೋಣಿ ನದಿಯಲ್ಲಿ ನೀರಿನ ಪ್ರಮಾಣ ಇಳಿಕೆಯಾಗ್ತಿದೆ.
Vijayapura: ಡೋಣಿ ನದಿಗೆ ಪ್ರವಾಹದ ಆತಂಕ, ಹೆದ್ದಾರಿ ಬಂದ್ ಆಗುವ ಭೀತಿ!
ಪ್ರವಾಹದಲ್ಲಿ ಸಿಲುಕಿದ್ದ ಕಾಮಗಾರಿಗೆ ಬಂದಿದ್ದ ಟ್ರಾಕ್ಟರ್: ತಾಳಿಕೋಟೆ ಹರನಾಳ ಗ್ರಾಮದ ಬಳಿ ಡೋಣಿ ನದಿಗೆ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಏಕಾಏಕಿ ಡೋಣಿ ನದಿಯಲ್ಲಿ ನೀರು ಹೆಚ್ಚಳ ಆಗಿರೋದ್ರಿಂದ ಗುತ್ತಿಗೆದಾರರು ಟ್ರ್ಯಾಕ್ಟರ್ ಹಾಗೂ ಕಾಮಗಾರಿಗೆ ತಂದಿದ್ದ ಸಾಮಾಗ್ರಿಗಳನ್ನು ನದಿ ಬಳಿಯೇ ಬಿಟ್ಟಿದ್ರು. ಟ್ರ್ಯಾಕ್ಟರ್ ಪ್ರವಾಹದಲ್ಲಿ ಸಂಪೂರ್ಣ ಮುಳುಗಿತ್ತು. ಇದೀಗ ಪ್ರವಾಹ ತಗ್ಗಿದ್ದರೂ ಟ್ರ್ಯಾಕ್ಟರ್ ಹೊರತೆಗೆಯಲು ಆಗುತ್ತಿಲ್ಲ. ನದಿಯಲ್ಲಿ ಇನ್ನಷ್ಟೂ ನೀರು ತಗ್ಗಿದ ಮೇಲೆ ಟ್ರ್ಯಾಕ್ಟರ್ ಹೊರತೆಗೆಯಲು ಸಾಧ್ಯವಿದೆ.
Vijayapura: ವಿಪತ್ತು ನಿರ್ವಹಣಾ ವಿಶೇಷ ಸಭೆ ನಡೆಸಿದ ಜಿಲ್ಲಾಧಿಕಾರಿ
ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧ: ಇನ್ನು ಮುಂಗಾರು ಮಳೆಯಿಂದಾಗಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ಈಗಿನಿಂದಲೇ ಜಿಲ್ಲಾಡಳಿತ ಸಜ್ಜಾಗಿದೆ. ಡೋಣಿ ನದಿ ವ್ಯಾಪ್ತಿಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಅಧಿಕಾರಿಗಳು ರಜೆಗೆಂದು ಕೇಂದ್ರ ಸ್ಥಾನ ಬಿಟ್ಟು ಹೋಗದಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದು, ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು. ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಎಲ್ಲರೀತಿ ವ್ಯವಸ್ಥೆ ಮಾಡಿಕೊಂಡಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ದಾನಮ್ಮನ್ನವರ ಮಾಹಿತಿ ನೀಡಿದ್ದಾರೆ.