Asianet Suvarna News Asianet Suvarna News

4 ಗ್ರಾಮಗಳಿಗೂ ಇದೊಂದೇ ಬಸ್, ಏಣಿ ಹಾಕಿ ಏರಿದ ವಿದ್ಯಾರ್ಥಿಗಳು..!

•ವಿಜಯಪುರದ ಗುಂಡಕರ್ಜಗಿಯಲ್ಲಿ ಡೆಂಜರಸ್‌ ಸಂಚಾರ..!
•ಏಣಿ ಹಾಕಿ ಬಸ್‌ ಏರ್ತಾರೆ ವಿದ್ಯಾರ್ಥಿಗಳು..!
•100ಕ್ಕು ಅಧಿಕ ಜನರಿಂದ ಏಕಕಾಲಕ್ಕೆ ಬಸ್‌ ಪ್ರಯಾಣ..!
•ಕೊಂಚ ಯಡವಟ್ಟಾದ್ರು ಜೀವಕ್ಕೆ ಅಪಾಯ ಗ್ಯಾರಂಟಿ..!

Vijayapura District Village Students Faces Bus Problems rbj
Author
Bengaluru, First Published Jun 28, 2022, 4:02 PM IST | Last Updated Jun 28, 2022, 4:02 PM IST

ವರದಿ: ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್

ವಿಜಯಪುರ (ಜೂನ್‌ 28
) : ಉತ್ತರ ಕರ್ನಾಟಕ ಭಾಗದಲ್ಲಿ ಒಂದು ಸಣ್ಣ ಸೌಲಭ್ಯವನ್ನು ಪಡೆದುಕೊಳ್ಳುವುದಕ್ಕೂ ಹೋರಾಟ ಮಾಡಬೇಕಾದ ಸ್ಥಿತಿ ಬಂದೊದಗಿದೆ. ಇಂದಿಗೂ ಉತ್ತರ ಕರ್ನಾಟಕದ ಜಿಲ್ಲೆಗಳು ಕೆಲ ಹಳ್ಳಿಗಳು ರಿಮೋಟ್‌ ಏರಿಯಾದಂತೆ ಇವೆ. ಕನಿಷ್ಠ ಸಾರಿಗೆ ಸಂಪರ್ಕವು ಸಮರ್ಪಕವಾಗಿ ಸಿಗದೆ ಜನರು, ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಪರದಾಡಬೇಕಾದ ಸ್ಥಿತಿ ಇದೆ. ಗುಮ್ಮಟನಗರಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ಇಂಥದ್ದೆ ಪರಿಸ್ಥಿತಿಯೊಂದು ಕಂಡು ಬಂದಿದೆ..

ಏಣಿ ಹಾಕಿ ಏರಬೇಕು ಸರ್ಕಾರಿ ಬಸ್..!
ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗುಂಡಕರ್ಜಗಿ ಗ್ರಾಮದಲ್ಲಿ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹೋಗೋದಕ್ಕೆ ಸರ್ಕಸ್‌ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಗುಂಡಕರ್ಜರಗಿ ಗ್ರಾಮಸ್ಥರು ಸಂತೆ, ಇತರೆ ಕೆಲಸಗಳಿಗೆ ಪಟ್ಟಣಕ್ಕೆ ಹೋಗಬೇಕಾದ್ರೆ ಬಸ್‌ ಮೇಲೆ ಏಣಿ ಇಟ್ಟು ಏರಬೇಕಾದ ಪರಿಸ್ಥಿತಿ ಇದೆ. ವಿದ್ಯಾರ್ಥಿಗಳು ಏಣಿ ಹಾಕಿಕೊಂಡೆ ಇಲ್ಲಿ ಬಸ್‌ ಹತ್ತುತ್ತಾರೆ. ಬಸ್‌ ಒಳಗೆ ಪುಲ್‌ ಆದಮೇಲೆ ಬಸ್‌ ಮೇಲೆ ಏರೋದಕ್ಕೆ ಇಲ್ಲಿ ಪ್ರಯಾಣಿಕರು, ವಿದ್ಯಾರ್ಥಿಗಳು ಏಣಿ ಹಾಕಿಕೊಂಡು ಬಸ್‌ ಹತ್ತುತ್ತಿದ್ದಾರೆ. ಈ ದೃಶ್ಯಾವಳಿಗಳು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಗೆ ಲಭ್ಯವಾಗಿವೆ.

ವಿಜಯಪುರದಲ್ಲಿ ಮತ್ತೆ ಭೂಕಂಪನ: ಬೆಚ್ಚಿಬಿದ್ದ ಜನತೆ

ಡೇಂರಸ್‌ ಬಸ್‌ ಟಾಪ್‌ ಸವಾರಿ..!
ನಿತ್ಯ ಇದೆ ಗುಂಡಕರ್ಜಗಿ ಗ್ರಾಮದಿದ ನೂರಕ್ಕು ಅಧಿಕ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಬಸ್‌ ಮೂಲಕವೇ ಪ್ರಯಾಣ ಮಾಡ್ತಾರೆ, ಮುದ್ದೇಬಿಹಾಳ ಪಟ್ಟಣ, ತಾಳಿಕೋಟೆ, ವಿಜಯಪುರ ನಗರಕ್ಕೆ ತರಳ ಬೇಕಾದ್ರೆ ಒಂದೇ ಬಸ್‌ ಇರೋದು. ಹೀಗಾಗಿ ಖಾಸಗಿ ಟೆಂಪೋ, ಕ್ರೂಜರ ಗಳ ಮೇಲೆ ಜನರನ್ನ ಹೇರಿಕೊಂಡು ಹೋಗುವಂತೆ ಇಲ್ಲಿ ಸರ್ಕಾರಿ ಬಸ್‌ ಮೇಲೆ ಜನರನ್ನ ಹೇರಿಕೊಂಡು ಹೋಗಲಾಗ್ತಿದೆ. ಸರ್ಕಾರಿ ಬಸ್‌ ಮೇಲೆಯೇ ಡೆಂಜುರಸ್‌ ಟಾಪ್‌ ಸವಾರಿ ಮಾಡಲಾಗ್ತಿದೆ. ಇದರಿಂದ ಯಾವಾಗ ಏನಾಗುತ್ತೋ ಎನ್ನುವ ಆತಂಕ ಗ್ರಾಮಸ್ಥರಲ್ಲಿ ಮನೆ ಮಾಡಿದೆ.

ಆಯಾ ತಪ್ಪಿದರೇ ಅಪಾಯ..!
ಸರ್ಕಾರಿ ಬಸ್ ಮೇಲೆಯೇ ಹುಡುಗರು, ವಿದ್ಯಾರ್ಥಿಗಳು ಏಣಿ ಮೂಲಕ ಹತ್ತಿ ಡೆಂಜುರಸ್‌ ಟಾಪ್‌ ಸವಾರಿ ಮಾಡ್ತಿರೋದ್ರಿಂದ ಗ್ರಾಮಸ್ಥರೇ ಭಯ ಬೀಳ್ತಿದ್ದಾರೆ. ಯಾವಾಗ ಏನು ಅನಾಹುತ ನಡೆಯುತ್ತೊ ಅನ್ನೋ ಆತಂಕದಲ್ಲಿರ್ತಾರೆ. ಅದ್ರಲ್ಲು ಶಾಲೆ-ಕಾಲೇಜು ಅಂತಾ ತೆರಳುವ ವಿದ್ಯಾರ್ಥಿಗಳೇ ಟಾಪ್‌ ಸವಾರಿ ಮಾಡಿಕೊಂಡು ಹೋಗಬೇಕಿರೋದ್ರಿಂದ ಪೋಷಕರಲ್ಲು ಮಕ್ಕಳು ವಾಪಾಸ್‌ ಮನೆಗೆ ಸೇಫ್‌ ಆಗಿ ಬರೋವರೆಗು ಎದೆಯಲ್ಲಿ ಢವಢವ ಶುರುವಿರುತ್ತೆ.. ಇನ್ನು ಇಷ್ಟೊಂದೊ ರಶ್‌ ಆಗಿ ಬಸ್‌ ಸಂಚಾರ ಮಾಡೋದ್ರಿಂದ ಕೊಂಚ ಯಡವಟ್ಟಾದ್ರು ನೂರು ಜನರ ಜೀವಕ್ಕೆ ಅಪಾಯ ಉಂಟಾಗೋ ಸಾಧ್ಯತೆಗಳಿವೆ..

ನಾಲ್ಕು ಗ್ರಾಮಗಳಿಗೂ ಒಂದೇ ಬಸ್..!
ಗುಂಡಕರ್ಜಗಿ ಗ್ರಾಮದಲ್ಲಿ ಜನರು ಏಣಿ ಹಾಕಿ ಬಸ್‌ ಏರಿ ಟಾಪ್‌ ಸಂಚಾರ ಯಾಕೆ ಮಾಡ್ತಾರೆ ಅನ್ನೋದಕ್ಕು ರಿಜನ್‌ ಇದೆ. ಬಸರಖೋಡ-ರೂಡಗಿ-ಗುಂಡಕರ್ಜಗಿ-ಗುಡದಿನ್ನಿ ಗ್ರಾಮಕ್ಕೆ ಒಂದೇ ಬಸ್‌ ಇದೆ. ಮುದ್ದೇಬಿಹಾಳ-ಬಸರಖೋಡ-ಆರ್ಯಶಂಕರ ಬಸ್‌ ಎಲ್ಲ ಊರುಗಳಲ್ಲಿ ಹಾದು ಹೋಗುತ್ತೆ. ಇಷ್ಟು ಗ್ರಾಮಗಳಿಗೆ ಒಂದೆ ಬಸ್‌ ಇರೋದ್ರಿಂದ ಕಾಮನ್‌ ಆಗಿ ಬಸ್‌ ಒಳಗೆ ಪುಲ್‌ ಆಗಿ ಬಿಡುತ್ತೆ. ಇದೆ ಬಸ್‌ ಗುಂಡಕರ್ಜಗಿಗೆ ಬರೋ ವೇಳೆಗೆ ಬಸ್‌ ರಶ್‌ ಆಗಿ ಬಿಟ್ಟಿರುತ್ತೆ. ಇನ್ನು ಶಾಲೆ-ಕಾಲೇಜು ಅಂತಾ ಹೋಗಲೇಬೇಕಾದ ಅನಿವಾರ್ಯ ವಿರೋ ಹುಡುಗರು ಏಣಿ ಇಟ್ಟುಕೊಂಡು ಬಸ್‌ ಏರಿ ಹೋಗಬೇಕಾದ ಸಂದಿಗ್ದತೆ ಎದುರಾಗಿದೆ.

ಇನ್ನೆರಡು ಬಸ್‌ ಬೇಕೇ ಬೇಕೆಂದು ಗ್ರಾಮಸ್ಥರ ಒತ್ತಾಯ..!
ಗುಂಡಕರ್ಜರಿ ಸೇರಿದಂತೆ ಬಸರಖೋಡ, ರೂಡಗಿ, ಗುಡದಿನ್ನಿ ಆರ್ಯಶಂಕರ್‌ ಗ್ರಾಮಗಳಿಗೆ ಇಬ್ಬೆರಡು ಬಸ್‌ ಗಳ ಸಂಚಾರದ ಅವಶ್ಯಕತೆ ಇದೆ. ಇದನ್ನ ಈ ಹಿಂದೆ ಗ್ರಾಮಗಳ ಜನರು ಸಾರಿಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದ್ರೆ ಈ ಸಮಸ್ಯೆ ಬಗೆ ಹರಿಸಬೇಕಿರೋ ಅಧಿಕಾರಿಗಳು ಗಪ್‌ ಚುಪ್‌ ಅನ್ನೋ ಹಾಗಿದ್ದಾರೆ. ಇನ್ನಾದ್ರು ಈ ಸಮಸ್ಯೆಯನ್ನ ಬಗೆ ಹರಿಸಿ ಮುಂದಾಗೋ ಅನಾಹುತಗಳನ್ನ ತಡೆಯಬೇಕು ಅನ್ನೋದೆ ಸುವರ್ಣ ನ್ಯೂಸ್‌ ನ ಆಶಯವಾಗಿದೆ..

Latest Videos
Follow Us:
Download App:
  • android
  • ios