ನಮ್ಮನೇಲಿ ಚಾಕು ಇರುವುದು ಈರುಳ್ಳಿ ಕತ್ತರಿಸೋಕಲ್ಲಾ: ಯತ್ನಾಳ್
ನಮ್ಮ ಮನೆಯಲ್ಲಿರುವ ಚಾಕುಗಳು ಈರುಳ್ಳಿ ಕಟ್ ಮಾಡಲಿಕ್ಕೆ ಇಟ್ಟಿಲ್ಲ. ಎಲ್ಲದಕ್ಕೂ ನಾವು ರೆಡಿಯಾಗಿದ್ದೇವೆ. ಶಿವಾಜಿ, ಮಹಾರಾಣಾ ಪ್ರತಾಪ್, ಚನ್ನಮ್ಮರ ಖಡ್ಗ ಕೂಡ ನಮ್ಮ ಹತ್ರ ಇದೆ. ಎಲ್ಲರೂ ತಮ್ಮ ಮನೆಯಲ್ಲಿ ತಯಾರಾಗಿ ಇಟ್ಟುಕೊಳ್ಳಿ. ನಮ್ಮ ಆತ್ಮರಕ್ಷಣೆಗಾಗಿ ನಾವು ಸನ್ನದ್ದರಾಗಬೇಕು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ವಿಜಯಪುರ(ಸೆ.15): ಗಣೇಶ ಚತುರ್ಥಿಯ ಮೆರವಣಿಗೆಯನ್ನು ಸಹಿಸುವ ಶಕ್ತಿ ಇಲ್ಲಿ ಕೆಲವರಿಗೆ ಇಲ್ಲ. ಆದರೆ, ಮೋದಿ ಮತ್ತು ಯೋಗಿ ಇರುವವರೆಗೂ ನೀವು ಇಲ್ಲಿ ಬಾಲ ಬಿಚ್ಚಕ್ಕಾಗಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಖಡಕ್ ಎಚ್ಚರಿಕೆ ನೀಡಿದರು.
ನಗರದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗಣಪತಿ ಪ್ರತಿಷ್ಠಾಪನೆಗೆ ಪರವಾನಗಿ ಇಲ್ಲದೆ ಇಡುವ ಹಾಗೂ ಗಣಪತಿ ಮೇಲೆ ಕಲ್ಲು ಹಾಕಿದರೆ ಅವರ ಮೇಲೆ ಬುಲ್ಲೋಜರ್ ಹರಿಸೋ ಮುಖ್ಯಮಂತ್ರಿ ಬೇಕು. ಇದು ಶಿವಾಜಿ ಮಹಾರಾಜರ ನೆಲ, ಯಾರಿಗೂ ಹೆದರುವ ಅವಶ್ಯಕತೆಯಿಲ್ಲ ಎಂದರು.
ನಾಗಮಂಗಲ ಗಲಭೆ: ಗೃಹ ಸಚಿವ ಪರಮೇಶ್ವರ್ ಆಕಸ್ಮಿಕವಾಗೇ ಹುದ್ದೆ ಬಿಡಲಿ, ಯತ್ನಾಳ್
ನಮ್ಮ ಮನೆಯಲ್ಲಿರುವ ಚಾಕುಗಳು ಈರುಳ್ಳಿ ಕಟ್ ಮಾಡಲಿಕ್ಕೆ ಇಟ್ಟಿಲ್ಲ. ಎಲ್ಲದಕ್ಕೂ ನಾವು ರೆಡಿಯಾಗಿದ್ದೇವೆ. ಶಿವಾಜಿ, ಮಹಾರಾಣಾ ಪ್ರತಾಪ್, ಚನ್ನಮ್ಮರ ಖಡ್ಗ ಕೂಡ ನಮ್ಮ ಹತ್ರ ಇದೆ. ಎಲ್ಲರೂ ತಮ್ಮ ಮನೆಯಲ್ಲಿ ತಯಾರಾಗಿ ಇಟ್ಟುಕೊಳ್ಳಿ. ನಮ್ಮ ಆತ್ಮರಕ್ಷಣೆಗಾಗಿ ನಾವು ಸನ್ನದ್ದರಾಗಬೇಕು ಎಂದು ಕರೆ ನೀಡಿದರು. ಮೀಸಲಾತಿ ತೆಗೆಯುತ್ತೇವೆಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಇದನ್ನು ದಲಿತರು ವಿಚಾರ ಮಾಡಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ಮೀಸಲಾತಿ ತೆಗೆದು ಹಾಕುತ್ತಾರೆ, ದಲಿತರ ಹಕ್ಕು ಕಸಿದುಕೊಳ್ತಾರೆ, ಸಂವಿಧಾನ ಬದಲಾವಣೆ ಆಗತ್ತೆ ಎಂದು ಬಿಜೆಪಿ ಮೇಲೆ ಅಪವಾದ ಮಾಡುತ್ತಿದ್ದರು. ನರೇಂದ್ರ ಮೋದಿ ಅವರು ಬಂದು ಹತ್ತು ವರ್ಷ ಆಯ್ತು. ಹಿಂದೆ ಆರೂವರೆ ವರ್ಷ ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತ ಇತ್ತು. ನಾವೇನಾದರೂ ಸಂವಿಧಾನ ಟಚ್ ಮಾಡಿದ್ವಾ? ಅಂಬೇಡ್ಕರ್ ಹುಟ್ಟಿದ ಮನೆ ಹಾಗೂ ದೆಹಲಿಯಲ್ಲಿ ಕೊನೆಯ ದಿನ ಕಳೆದ ಸ್ಥಳ ಸ್ಮಾರಕ ಮಾಡಿದ್ದು ನರೇಂದ್ರ ಮೋದಿ. ಈಗ ಅಮೆರಿಕಾಗೆ ಹೋಗಿ ದೇಶ ದ್ರೋಹಿ ಹೇಳಿಕೆ ಕೊಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದರು.
ಪ್ರಚೋದನಾಕಾರಿ ಹೇಳಿಕೆ: ಯತ್ನಾಳ್ ವಿರುದ್ಧದ ಕೋರ್ಟ್ ವಿಚಾರಣೆ ರದ್ದು
ರಾಹುಲ್ ಗಾಂಧಿ ಜಾತಿ ಸಮೀಕ್ಷೆ ಮಾಡುತ್ತೇವೆ ಅಂತಿದ್ದಾರೆ ಅವರಿಗೆ ಗೊತ್ತಿಲ್ಲ ತಾನು ಯಾವ ಜಾತಿಯಲ್ಲಿ ಹುಟ್ಟಿದ್ದೇನೆ ಎಂದು. ರಾಹುಲ್ ಗಾಂಧಿ ಹುಟ್ಟಿನ ಬಗ್ಗೆ ಸಂಶಯ ವ್ಯಕ್ತಪಡಿಸಿ, ವಿವಾದಿತ ಹೇಳಿಕೆ ನೀಡಿದರು. ಮುಸ್ಲಿಮರಿಗೆ ಹುಟ್ಟಿದ್ದಾನೋ, ಕ್ರಿಸ್ತರಿಗೆ ಹುಟ್ಟಿದಾನೋ ಅನ್ನೋದು ತನಿಖೆ ಆಗಬೇಕಿದೆ. ಜನಿವಾರ ಹಾಕಿದ ಬ್ರಾಹ್ಮಣ ಅಂತ ತಿಳಿದುಕೊಂಡಿದ್ದಾನೆ. ಅವರ ಅಪ್ಪ ಬೇರೆ, ಅವ್ವ ಇಟಲಿಯಾಕಿ, ಅಪ್ಪ ಮೊಘಲರ ಕೈಯಲ್ಲಿ ಕೆಲಸ ಮಾಡಿದವ, ಮರಿ ಮೊಮ್ಮಗ ಕಂಟ್ರಿ ಪಿಸ್ತೂಲ್ ಇದ್ದಂಗೆ. ಇಂಡಿಯಾದ ಕಂಟ್ರಿ ಪಿಸ್ತೂಲ್ ಸಿಗುತ್ತಿದ್ದವು. ಕಂಟ್ರಿ ಪಿಸ್ತೂಲ್ ಇದ್ದಂಗೆ ರಾಹುಲ್ ಗಾಂಧಿ. ಈಗ ಮೀಸಲಾತಿ ಬಗ್ಗೆ ಯಾಕೆ ದಲಿತರು ಮಾತನಾಡುತ್ತಿಲ್ಲ?. ಹಿಂದುಳಿದವರ ಮೀಸಲಾತಿ ತೆಗಿಯುತ್ತಾನೆ ಅಂತಾನೆ, ಈಗ ದಲಿತರು ಮಾತನಾಡಬೇಕಲ್ಲವೆ? ಎಂದು ಪ್ರಶ್ನಿಸಿದರು.
ಬಿಜೆಪಿ ನಾಯಕರು ಒಗ್ಗಟ್ಟಾಗಿ ಹೋಗಬೇಕು, ಇಲ್ಲವಾದಲ್ಲಿ ಶಿಸ್ತು ಕ್ರಮದ ಬಗ್ಗೆ ಸೂಚನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಯತ್ನಾಳ, ನಿನ್ನೆ ಬಹಳ ಒಳ್ಳೆಯ ಸಭೆ ಆಗಿದೆ, ಆತ್ಮಾವಲೋಕನ ಆಗಿದೆ. ನನಗೆ ವಿಶ್ವಾಸವಿದೆ, ಪಕ್ಷದ ಹೈಕಮಾಂಡ್ ಸರಿಯಾದ ನಿರ್ಣಯ ತೆಗೆದುಕೊಳ್ಳುತ್ತದೆ. ನಾವೆಲ್ಲರೂ ಒಗ್ಗಟ್ಟಾಗಿ ಹೋಗಬೇಕು ಅಂತ ಹೈಕಮಾಂಡ್ ಹೇಳಿದೆ. ಪಕ್ಷದ ನಾಯಕರಿಗೆ ಮಾತು ಕೊಟ್ಟಿದ್ದೇವೆ ಅದರಂತೆ ನಡೆಯುತ್ತೇವೆ. ಸಭೆಯಲ್ಲಿ ವಿಜಯೇಂದ್ರ, ಯಡಿಯೂರಪ್ಪ ವಿರುದ್ಧ ಹೆಚ್ಚು ನಾಯಕರಿದ್ದರು ಎನ್ನುವ ವಿಚಾರಕ್ಕೆ ಮಾತನಾಡಿ, ಸಭೆಯಲ್ಲಿ ಏನು ಚರ್ಚೆ ಆಗಿದೆ ಅನ್ನೋದು ಎಲ್ಲಿಯೂ ಮಾತನಾಡಬೇಡಿ ಎಂದಿದ್ದಾರೆ. ಅದನ್ನು ನಾನು ಹೇಳಲ್ಲ ಎಂದರು.