Asianet Suvarna News Asianet Suvarna News

Karwar Warship Museum: ವಾರ್‌ಶಿಪ್ ಮ್ಯೂಸಿಯಂನಲ್ಲಿ ವಿಜಯ ದಿವಸ ಆಚರಣೆ

ಪಾಕಿಸ್ತಾನಿ ಸೈನಿಕರನ್ನು ಶರಣಾಗಿಸಿ, ಯುದ್ಧದಲ್ಲಿ ಭಾರತ ಗೆಲುವು ದಾಖಲಿಸುವ ಮೂಲಕ ಬಾಂಗ್ಲಾದೇಶದ ಉಗಮಕ್ಕೆ ಸಾಕ್ಷಿಯಾದ ವಿಜಯ ದಿವಸವನ್ನು ಕಾರವಾರದಲ್ಲಿಂದು ಆಚರಿಸಲಾಯಿತು.

Victory Day Celebration at Warship Museum karwar gow
Author
First Published Dec 16, 2022, 6:25 PM IST

ಕಾರವಾರ(ಡಿ.16): ಪಾಕಿಸ್ತಾನಿ ಸೈನಿಕರನ್ನು ಶರಣಾಗಿಸಿ, ಯುದ್ಧದಲ್ಲಿ ಭಾರತ ಗೆಲುವು ದಾಖಲಿಸುವ ಮೂಲಕ ಬಾಂಗ್ಲಾದೇಶದ ಉಗಮಕ್ಕೆ ಸಾಕ್ಷಿಯಾದ ವಿಜಯ ದಿವಸವನ್ನು ಕಾರವಾರದಲ್ಲಿಂದು ಆಚರಿಸಲಾಯಿತು. ನಗರದ ವಾರ್‌ಶಿಪ್‌ ಮ್ಯೂಸಿಯಂ ಆವರಣದಲ್ಲಿ ನೌಕಾನೆಲೆಯ ಮಟೇರಿಯಲ್ ಅಸೋಸಿಯೇಷನ್ ಹಾಗೂ ಸೈನಿಕ ಬೋರ್ಡ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಮಟೇರಿಯಲ್ ಕಮೋಡೋರ್ ವಿಜು ಸ್ಯಾಮ್ಯುಯೆಲ್ ಹಾಗೂ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮಕ್ಕೂ ಮುನ್ನ ವಾರ್‌ಶಿಪ್ ಮ್ಯೂಸಿಯಂ ಆವರಣದಲ್ಲಿ ಸ್ಥಾಪಿಸಲಾಗಿರುವ ಪರಮವೀರ ಚಕ್ರ ಪುರಸ್ಕೃತ ಮೇಜರ್ ರಾಮಾ ರಾಘೋಬಾ ರಾಣೆ ಅವರ ಪುತ್ಥಳಿಗೆ ಪುಷ್ಪನಮನ ಅರ್ಪಿಸಲಾಯಿತು. ಬಳಿಕ ಹುತಾತ್ಮ ಯೋಧರ ಕುಟುಂಬಸ್ಥರಿಗೆ ಸನ್ಮಾನಿಸಿ ಗೌರವಿಸಲಾಯಿತು.

Karwar Warship Museum: ವಾರ್‌ಶಿಪ್ ಮ್ಯೂಸಿಯಂ ನಿರ್ವಹಣೆಯಲ್ಲಿ ನಿರ್ಲಕ್ಷ್ಯ, ಪ್ರವಾಸಿಗರ ಬೇಸರ

ಈ ವೇಳೆ ಮಾತನಾಡಿದ ವಿಜು ಸ್ಯಾಮ್ಯುಯೆಲ್, ಭದ್ರತೆ ಮತ್ತು ಅಭಿವೃದ್ಧಿ ಒಂದೇ ನಾಣ್ಯದ ಎರಡು ಮುಖಗಳಂತಿದ್ದು, ಒಂದಕ್ಕೊಂದು ಪೂರಕವಾಗಿವೆ. ಭಾರತ ಸರ್ಕಾರದ ಆತ್ಮನಿರ್ಭರ ಭಾರತಕ್ಕೆ ನೀಡುತ್ತಿರುವ ಹೆಚ್ಚಿನ ಪ್ರಾಮುಖ್ಯತೆಗಳಿಂದಾಗಿ ರಕ್ಷಣಾ ಕ್ಷೇತ್ರದ ಉತ್ಪಾದನೆಗಳಲ್ಲಿ ಹೆಚ್ಚಿನವರಿಗೆ ಅವಕಾಶ ಸಿಗುವಂತಾಗಿದೆ ಎಂದರು. ನಗರದ ಟ್ಯಾಗೊರ್ ಕಡಲ ತೀರದಲ್ಲಿರುವ ಚಪೆಲ್ ವಾರ್ಶಿಪ್ ಮ್ಯೂಸಿಯಂ ಆವರಣದಲ್ಲಿ ಶುಕ್ರವಾರ  ವಿಜಯ ದಿವಸ್ ಕಾರ್ಯಕ್ರಮವನ್ನು ನಡೆಯಿತು.

Karwar: ಮೀನುಗಾರರ ಜೀವನವನ್ನು ಅತಂತ್ರಗೊಳಿಸಿದ ಮ್ಯಾಂಡೌಸ್ ಚಂಡಮಾರುತ

 ಭಾರತೀಯ ನೌಕಾಪಡೆಯ ಅಂಗಸಂಸ್ಥೆಯಾದ ಮೆಟಿರಿಯಲ್ ಸಂಘಟನೆಯ ಕಮಾಂಡರ್ ವಿಜು ಸ್ಯಾಮ್ಯುಯಲ್ ಮಾತನಾಡಿ ರಾಜಕೀಯ ಮತ್ತು ಸೇನೆ ಒಂದೇ ನಾಣ್ಯದ ಎರೆಡು ಮುಖಗಳು. ಹೀಗಾಗಿ ಎರೆಡು ಒಟ್ಟಿಗೆ ಹೊಂದಾಣಿಕೆಯಿಂದ ಸಾಗಿದಾಗ ಮಾತ್ರ ಉತ್ತಮ ಭದ್ರತೆ ಸಾಧ್ಯ ಎಂದರು. ಕಾರವಾರ ನಗರಸಭೆಯ ಅಧ್ಯಕ್ಷ ನಿತಿನ್ ಪಿಕಳೆ, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಈಶ್ವರ ಖಂಡೂ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ಎನ್., ಕರ್ನಾಟಕ ಎನ್ ಸಿ ಸಿ ಕಮಾಂಡಿಂಗ್ ಆಫಿಸರ್ ಸತ್ಯನಾಥ ಬೋಸ್ಲೆ ಹಾಗೂ ಕಮಾಂಡರ್ ಇಂದುಪ್ರಭಾ ಭಾಗವಹಿಸಿದ್ದರು.

Follow Us:
Download App:
  • android
  • ios