Asianet Suvarna News Asianet Suvarna News

ಮಹದಾಯಿ: 'ರಾಜಕಾರಣಿಗಳು ರೈತ ಸಮುದಾಯಕ್ಕೆ ತಪ್ಪು ಸಂದೇಶ ನೀಡುತ್ತಿದ್ದಾರೆ'

ಮಹದಾಯಿ ಯೋಜನೆ ಜಾರಿಗೆ ಯಾವುದೇ ಕಾನೂನು ತೊಡಕಿ​ಲ್ಲ|ಮಹ​ದಾಯಿ ಹೋರಾಟ ವೇದಿ​ಕೆ​ಯಲ್ಲಿ ರೈತ​ಸೇನಾ ಉಪಾ​ಧ್ಯಕ್ಷ ರಮೇಶ ನಾಯ್ಕರ್‌|

Vice President of Farmers Sena Organization Ramesh Naykar Talks Over Mahadayi Dispute
Author
Bengaluru, First Published Jan 13, 2020, 12:14 PM IST
  • Facebook
  • Twitter
  • Whatsapp

ನರಗುಂದ(ಜ.13): ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿಗೆ ಯಾವುದೇ ರೀತಿ ಕಾನೂನು ತೊಂದರೆ ಇರುವುದಿಲ್ಲ. ರಾಜಕಾರಣಿಗಳು ಉದ್ದೇಶ ಪೂರ್ವಕವಾಗಿ ಈ ಯೋಜನೆ ಜಾರಿಗೆ ಕಾನೂನು ತೊಂದರೆ ಇದೆ ಎಂದು ರೈತ ಸಮುದಾಯಕ್ಕೆ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದು ತಾಲೂಕು ರೈತ ಸೇನಾ ಸಂಘಟನೆ ಉಪಾಧ್ಯಕ್ಷ ಹಾಗೂ ನ್ಯಾಯವಾದಿ ರಮೇಶ ನಾಯ್ಕರ ಆರೋಪಿಸಿದ್ದಾರೆ.

1641ನೇ ದಿನದ ನಿರಂತರ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಹೋರಾಟ ವೇದಿಕೆಯಲ್ಲಿ ಮಾತನಾಡಿ, ರಾಜ್ಯದ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ಕಣಕುಂಬಿ ಗ್ರಾಮದಲ್ಲಿ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳಗಳು ಜನ್ಮ ತಾಳಿ ಪ್ರತಿ ವರ್ಷ ನಮ್ಮ ನೆಲದ 35 ಕಿಮೀ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಹರಿದು ಮುಂದೆ ಗೋವಾ ಅರಣ್ಯ ಪ್ರದೇಶದ ಮೂಲಕ ಸಮುದ್ರ ಸೇರಿ ಪ್ರತಿ ವರ್ಷ 210 ಟಿಎಂಸಿ ನೀರು ವ್ಯರ್ಥ​ವಾಗಿ ಸಮುದ್ರ ಸೇರುತ್ತಿದೆ. ಈ ನೀರಿನಲ್ಲಿ ನಾವು ಕೇವಲ 36.5 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಬೇಕೆಂದರೆ, ಅದಕ್ಕೆ ಗೋವಾ ರಾಜ್ಯದ ರಾಜಕಾರಣಿಗಳ ಮತ್ತು ಕರ್ನಾಟಕ ರಾಜ್ಯದವರು ಸೇರಿಕೊಂಡು ಈ ಭಾಗದ ರೈತರನ್ನು ದಾರಿ ತಪ್ಪಿಸಲು ಈ ನೀರು ಬಳಕೆ ಮಾಡಿಕೊಳ್ಳಲು ಕಾನೂನು ತೊಂದರೆ ಇದೆ ಎಂದು ಹೋರಾ​ಟ​ಗಾ​ರ​ರಿಗೆ ಸುಳ್ಳು ಹೇಳುತ್ತಿ​ದ್ದಾರೆ ಎಂದು ಆರೋ​ಪಿ​ಸಿ​ದ​ರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈಗಾಗಲೇ ಮಹದಾಯಿ ಜಲ ವಿವಾದಕ್ಕೆ ನೇಮಕವಾದ ನ್ಯಾಯಾಧಿಕರಣದ ನ್ಯಾಯಾಧೀಶರು 2018ರಲ್ಲಿಯೇ ಕರ್ನಾಟಕ ರಾಜ್ಯ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳಗಳಲ್ಲಿ ಹರಿಯುವ ನೀರಿನಲ್ಲಿ 13.42ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಯಾವುದೇ ರೀತಿ ತೊಂದರೆ ಇರುವುದಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ತಿಳಿಸಿದರೂ ಕೂಡ ಕೇಂದ್ರ ಸರ್ಕಾರವು ಗೋವಾ ರಾಜ್ಯದವರಿಗೆ ಹೆದರಿ ಕರ್ನಾಟಕ ರಾಜ್ಯಕ್ಕೆ ಈ ನೀರು ಬಳಕೆ ಮಾಡಿಕೊಳ್ಳಲು ಗೆಜೆಟ್‌ ನೊಟಿಫಿಕೇಷನ್‌ ಹೊರಡಸಿಲ್ಲವೆಂದು ಹೇಳಿದರು.

ರೈತ ಸೇನಾ ಸದಸ್ಯ ಯಲ್ಲಪ್ಪ ಓಲೇಕಾರ ಮಾತ​ನಾ​ಡಿ​ದರು. ಮೃತ್ಯುಂಜಯ ಹಿರೇಮಠ, ಅಡಿಯಪ್ಪ ಕೋರಿ, ಎಸ್‌.ಬಿ. ಜೋಗಣ್ಣವರ, ಎ.ಪಿ. ಪಾಟೀಲ, ಬಸವರಾಜ ಐನಾಪೂರ, ಅರ್ಜುನ ಮಾನೆ, ಮಲ್ಲೇಶಪ್ಪ ಅಣ್ಣಿಗೇರಿ, ಸುಭಾಸ ಗಿರಿಯಣ್ಣವರ, ಸಂಗಪ್ಪ ಶಾನವಾಡ, ವೆಂಕಪ್ಪ ಹುಜರತ್ತಿ, ಹನಮಂತ ಸರನಾಯ್ಕರ, ವಾಸು ಚವ್ಹಾಣ, ಯಲ್ಲಪ್ಪ ಗುಡದೇರಿ, ಮಾರುತಿ ಬಡಿಗೇರ, ಬಸವ್ವ ಪೂಜಾರ, ಮಹಾದೇವಪ್ಪ ಐನಾಪೂರ, ಮಂಜುಳಾ ಸರನಾಯ್ಕರ, ಮಲ್ಲಪ್ಪ ಐನಾಪೂರ, ಕೆ.ಎಚ್‌. ಮೊರಬದ, ನಾಗರತ್ನ ಸವಳಬಾವಿ, ಅನಸವ್ವ ಶಿಂದೆ, ಶಾಂತವ್ವ ಭೂಸರಡ್ಡಿ, ಈರಣ್ಣ ಗಡಗಿ, ಸೋಮಲಿಂಗಪ್ಪ ಆಯಿಟ್ಟಿಸೇರಿದಂತೆ ಮುಂತಾದವರು ಇದ್ದರು.
 

Follow Us:
Download App:
  • android
  • ios