Tumakuru: ಅವಿಶ್ವಾಸ ನಿರ್ಣಯಕ್ಕೆ ಒಪ್ಪದ ಗ್ರಾ.ಪಂ ಸದಸ್ಯನಿಗೆ ಚಪ್ಪಲಿಯಿಂದ ಥಳಿಸಿದ ಉಪಾಧ್ಯಕ್ಷ!
ಗ್ರಾಮ ಪಂಚಾಯ್ತಿ ಅಧ್ಯಕ್ಷನ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸಹಿ ಹಾಕಲು ಒಪ್ಪದ ಸದಸ್ಯ ಮೇಲೆ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಚಪ್ಪಲಿಯಿಂದ ಥಳಿಸಿದ್ದಾರೆ. ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ನೋಣವಿನಕೆರೆಯಲ್ಲಿ ಈ ಘಟನೆ ನಡೆದಿದೆ.
ತುಮಕೂರು (ಜು.01): ಗ್ರಾಮ ಪಂಚಾಯ್ತಿ ಅಧ್ಯಕ್ಷನ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸಹಿ ಹಾಕಲು ಒಪ್ಪದ ಸದಸ್ಯ ಮೇಲೆ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಚಪ್ಪಲಿಯಿಂದ ಥಳಿಸಿದ್ದಾರೆ. ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ನೋಣವಿನಕೆರೆಯಲ್ಲಿ ಈ ಘಟನೆ ನಡೆದಿದೆ. ತುರುವೇಕೆರೆ ತಾಲ್ಲೂಕಿನ ತಂಡಗ ಪಂಚಾಯ್ತಿ ಉಪಾಧ್ಯಕ್ಷ ಚನ್ನಬಸವೇಗೌಡ ಚಪ್ಪಲಿಯಿಂದ ಹಲ್ಲೆ ನಡೆಸಿದವರು.
ಮೋಹನ್ ಗೆ ಹಲ್ಲೆಗೊಳಗಾದ ಸದಸ್ಯ. ಈ ಇಬ್ಬರು ತಿಪಟೂರು ತಾಲ್ಲೂಕಿನ ನೋಣವಿನಕೆರೆಯಲ್ಲಿ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದರು, ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಆಗ ಇಬ್ಬರು ಕೈ ಕೈ ಮಿಲಾಯಿಸಿದ್ದಾರೆ, ಈ ವೇಳೆ ಚನ್ನಬಸವೇಗೌಡ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ. ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಡಿನಿಂದ ನಾಡಿಗೆ ಸ್ಥಳಾಂತರ ಮಾಡುವಂತೆ ಮೆಂದಾರೆ ಗ್ರಾಮಸ್ಥರ ಅಳಲು: ಸರ್ವೇ ನಡೆಸಿದ ಅಧಿಕಾರಿಗಳು ಮಾಡಿದ್ದೇನು?
ಮೂಲ ದುರ್ಗಮ್ಮ ದೇವಸ್ಥಾನ ಭೂಮಿ ರಕ್ಷಣೆಗೆ ನಿರ್ಣಯ: ನಗರದ ಕೋಡಿ ಬಸವಣ್ಣ ದೇವಸ್ಥಾನದ ಎದುರಿನಲ್ಲಿರುವ ಎನ್.ಆರ್ ಕಾಲೋನಿ ಮಾದಿಗ ಸಮುದಾಯದ ಕುಲ ದೇವರಾದ ಶ್ರೀ ದುರ್ಗಮ್ಮ ದೇವಸ್ಥಾನದಲ್ಲಿ ಎನ್.ಆರ್ ಕಾಲೋನಿ ಅಭಿವೃದ್ಧಿ ಸಂಘ ಅಧ್ಯಕ್ಷ ಕೆ.ದೊರೈರಾಜ್ ಅಧ್ಯಕ್ಷತೆಯಲ್ಲಿ ತುರ್ತು ಸಭೆ ಸೇರಿ ಮೂಲ ದೇವಸ್ಥಾನಕ್ಕೆ ಸಂಬಂಧಿಸಿದ ಭೂಮಿಯನ್ನು ರಕ್ಷಣೆ ಮಾಡಲು ಒಕ್ಕೋರಲ ನಿರ್ಣಯ ಕೈಗೊಳ್ಳಲಾಯಿತು. ತುಮಕೂರು ಕಸಬಾ ಸರ್ವೇ ನಂ 170 ಮತ್ತು 171 ರಲ್ಲಿ ಕಂದಾಯ ದಾಖಲಾತಿಗಳ ಪ್ರಕಾರ 2.16 ಎಕರೆ ಭೂಮಿ ದುರ್ಗಿಗುಡಿ ಮತ್ತು ದುರ್ಗಿ ಮಂಟಪವೆಂದು ನಮೂದಾಗಿರುತ್ತದೆ.
1966ರಲ್ಲಿ ಕೈಗಾರಿಕೆ ಉದ್ದೇಶಕ್ಕಾಗಿ ಜಿಲ್ಲಾಧಿಕಾರಿಗಳು ಕೆಲವರಿಗೆ ನೀಡಿದ ಮಂಜೂರಾತಿಯನ್ನು ಹರಿಜನ ಸೇವಾ ಸಂಘ ಜಿಲ್ಲಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಿದ ನಂತರ ಕೈಗಾರಿಕಾ ಉದ್ದೇಶಕ್ಕೆ ನೀಡಿದ್ದ ಎಲ್ಲಾ ಮಂಜೂರಾತಿಯನ್ನು 1999ರಲ್ಲಿ ಅಂದಿನ ಜಿಲ್ಲಾಧಿಕಾರಿಗಳಾದ ಗೋಪಾಲಕೃಷ್ಣ ಗೌಡರು ತೆರೆದ ನ್ಯಾಯಾಲಯದಲ್ಲಿ ರದ್ದುಪಡಿಸಿ ಎನ್.ಆರ್ ಕಾಲೋನಿಯ ಹರಿಜನರ ಮತ್ತು ಗಿರಿಜನರ ಉದ್ದೇಶಕ್ಕೆ ಭೂಮಿ ಮೀಸಲಿಡಲು ತುಮಕೂರು ತಾಲೂಕು ತಹಸೀಲ್ದಾರ್ ಪ್ರಸ್ತಾವನೆ ಸಲ್ಲಿಸಲು ಆದೇಶ ನೀಡಿದ್ದರು. ಈ ಮಧ್ಯೆ ಜಿಲ್ಲಾಧಿಕಾರಿಗಳು ರದ್ದುಪಡಿಸಿರುವ ಆದೇಶವನ್ನು ಮರೆಮಾಚಿ ಕೆಲವರು ತುಮಕೂರು ಮಹಾನಗರ ಪಾಲಿಕೆಯಿಂದ ಪಿಐಡಿ ಪಡೆದಿದ್ದು, ಹಿಂದಿನ ಆಯುಕ್ತ ಭೂಬಾಲನ್ ರದ್ದುಪಡಿಸಿದ್ದು, ಪಾವತಿ ವಾರಸುದಾರರ ಮೇರೆಗೆ ನಗರಪಾಲಿಕೆಯಿಂದ ಖಾತೆ ಮಾಡಿಸಲು ಮುಂದಾಗಿದೆ.
ರಾಜ, ರಾಜ್ಯ ಮತ್ತು ಕೇಂದ್ರವಾಗಲಿ ತೆರಿಗೆ ವಸೂಲಿ ಮಾಡಿಯೇ ಆಡಳಿತ ನಡೆಸೋದು: ಸಿಎಂ ಸಿದ್ದರಾಮಯ್ಯ
ಇತ್ತೀಚಿಗೆ ಸಮೀಕ್ಷೆ ಮಾಡಲು ಬಂದಾಗ ಕಾಲೋನಿಯ ಮುಖಂಡರು ತಡೆದಿರುತ್ತಾರೆ. ನಮ್ಮೆಲ್ಲ ದಾಖಲೆಗಳನ್ನು ಈಗಾಗಲೇ ತುಮಕೂರಿನ 4ನೇ ಅಧಿಕ ಸಿವಿಲ್ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ದುರ್ಗಮ್ಮ ದೇವಸ್ಥಾನ ಜೀರ್ಣೋದ್ಧಾರ ಮತ್ತು ಎನ್.ಆರ್ ಕಾಲೋನಿ ಅಭಿವೃದ್ಧಿ ಸಂಘ ದಾವೆ ಸಲ್ಲಿಸಿದೆ ಇಷ್ಟೇಲ್ಲ ಬೆಳವಣಿಗೆಗಳಿರುವ ಈ ಜಾಗಕ್ಕೆ ಟಿ.ಎಸ್ ಸುರೇಶ್ ಮತ್ತು ಹೇಮಲತಾ ಎನ್ನುವವರು ಪಾವತಿ ವಾರಸುದಾರರ ಮೇಲೆ ಆಸ್ತಿ ದಾಖಲೆ ಮಾಡಿಸಿಕೊಡಲು ಮುಂದಾಗಿರುವುದು ಸರ್ಕಾರಕ್ಕೆ ದಿಕ್ಕು ತಪ್ಪಿಸುವ ನಡೆಯಾಗಿದೆ ಎಂದು ಸಭೆಯಲ್ಲಿ ಖಂಡಿಸಲಾಯಿತು.