ಹಿರಿಯ ರಂಗಕರ್ಮಿ ಆನಂದ್ ಕೊರೋನಾಗೆ ಬಲಿ
ಆನಂದ್ ಅವರ ಪತ್ನಿಗೂ ಕೂಡ ಕೋವಿಡ್ ಕಾಣಿಸಿಕೊಂಡಿದ್ದು ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ| ಕಿರುಚಿತ್ರಗಳ ನಿರ್ಮಾಣ, ಕಿರುಚಿತ್ರಗಳ ಸೊಸೈಟಿ, ಸುಚಿತ್ರಾ ಫಿಲ್ಮ್ ಸೊಸೈಟಿಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಆನಂದ್|
ಬೆಂಗಳೂರು(ಮೇ.05): ಕೋವಿಡ್ ಸೋಂಕಿನಿಂದ ಹಿರಿಯ ರಂಗಕರ್ಮಿ ಹಾಗೂ ರಂಗ ಕಲಾವಿದ ಎಂ.ಸಿ. ಆನಂದ್(72) ಮಂಗಳವಾರ ನಿಧನರಾದರು.
ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳ ಹಿಂದಷ್ಟೇ ಕೋಣನಕುಂಟೆ ಕ್ರಾಸ್‌ನಲ್ಲಿರುವ ಆಸ್ಟ್ರಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಪತ್ನಿ, ಇಬ್ಬರು ಮಕ್ಕಳನ್ನು ಅವರು ಅಗಲಿದ್ದಾರೆ. ಆನಂದ್ ಅವರ ಪತ್ನಿಗೂ ಕೂಡ ಕೋವಿಡ್ ಕಾಣಿಸಿಕೊಂಡಿದ್ದು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
"
‘ಜೋಕುಮಾರಸ್ವಾಮಿ, ‘ತಾಯಿ, ‘ಯಯಾತಿ’, ‘ಸಂಕ್ರಾಂತಿ, ‘ಗೆಲಿಲಿಯೋ’ ಸೇರಿದಂತೆ ಹಲವು ನಾಟಕಗಳಲ್ಲಿ ಅಭಿನಯಿಸಿದ್ದರು. ಅನುವಾದಕರಾಗಿ ಕೂಡ ಹೆಸರು ಮಾಡಿದ್ದ ಎಂ.ಸಿ. ಆನಂದ ಅವರು ಹಲವು ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಶಹಾಪುರ: ಹಿರಿಯ ರಂಗಕರ್ಮಿ ಎಲ್ಬಿಕೆ ಆಲ್ದಾಳ ಇನ್ನಿಲ್ಲ
ಸಿ.ಆರ್.ಸಿಂಹ ಅವರ ವೇದಿಕೆ ತಂಡದ ಟಿಪಿಕಲ್ ಟಿಪಿ ಕೈಲಾಸಂ ಮತ್ತು ಬಿ.ಜಯಶ್ರೀ ಅವರ ಸ್ಪಂದನ ತಂಡದ ಲಕ್ಷಾಪತಿ ರಾಜ ನಾಟಕಗಳಿಗೆ ಆನಂದ್ ರಂಗ ವಿನ್ಯಾಸ ಮಾಡಿದ್ದರು. ಕಿರುಚಿತ್ರಗಳ ನಿರ್ಮಾಣ, ಕಿರುಚಿತ್ರಗಳ ಸೊಸೈಟಿ, ಸುಚಿತ್ರಾ ಫಿಲ್ಮ್ ಸೊಸೈಟಿಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona