* ಸಾಮಾಜಿಕ ಜಾಲ ತಾಣಗಳಲ್ಲಿ ಅಭಿಮಾನಿಗಳ ಟ್ರೋಲ್‌* ಸಂಕಷ್ಟದ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಬೇಕಾದಲ್ಲಿ ಪಾಟೀಲರೇ ಸೂಕ್ತ ವ್ಯಕ್ತಿ*  ಕಾಂಗ್ರೆಸ್‌ ವರಿಷ್ಠರು ಎಚ್‌.ಕೆ. ಪಾಟೀಲರಿಗೆ ಆದ್ಯತೆ ನೀಡಬೇಕು ಎಂಬ ಕೂಗು 

ಗದಗ(ಜೂ.30): ವಿಧಾನಸಭೆ ಚುನಾವಣೆಗೆ ಎರಡು ವರ್ಷ ಬಾಕಿ ಇರುವಾಗಲೇ ಕಾಂಗ್ರೆಸ್‌ನಲ್ಲಿ ಸಿಎಂ ಅಭ್ಯರ್ಥಿ ಕುರಿತು ತೀವ್ರ ಚರ್ಚೆ ಶುರುವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ‘ಎಚ್‌.ಕೆ. ಪಾಟೀಲ್‌ ಮುಂದಿನ ಸಿಎಂ’ ಎನ್ನುವ ಸಾಲು ಇದೀಗ ವೈರಲ್‌ ಆಗಿದೆ.

ಮುಂದಿನ ಸಿಎಂ ಅಭ್ಯರ್ಥಿ ರೇಸ್‌ನಲ್ಲಿ ಹಿರಿಯ ಕಾಂಗ್ರೆಸ್‌ ನಾಯಕ ಎಚ್‌.ಕೆ. ಪಾಟೀಲ ಕೂಡಾ ಒಬ್ಬರು. ಅವರೇಕೆ ಸಿಎಂ ಆಗಬಾರದು? ಎನ್ನುವ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಮಹಾರಾಷ್ಟ್ರದ ಉಸ್ತುವಾರಿಯೂ ಆಗಿರುವ ಎಚ್‌.ಕೆ. ಪಾಟೀಲ ಅವರೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿ, ಈಗಾಗಲೇ ಪಕ್ಷದ ಹಿರಿಯ ನಾಯಕರು ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ರಾಜ್ಯ ಎದುರಿಸುತ್ತಿರುವ ಸಂಕಷ್ಟದ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಬೇಕಾದಲ್ಲಿ ಎಚ್‌.ಕೆ. ಪಾಟೀಲರೇ ಸೂಕ್ತ ವ್ಯಕ್ತಿ ಎನ್ನುವ ಚರ್ಚೆ ಫೇಸ್‌ಬುಕ್‌, ವಾಟ್ಸಾಪ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟುನಡೆಯುತ್ತಿದೆ.

3ನೇ ಅಲೆ ದೊಡ್ಡ ಸವಾಲಾಗಿ ಬರ್ತಿದೆ, ಬಿಜೆಪಿಗೆ ಅದರ ಪರಿವೆಯೇ ಇಲ್ಲ: HK ಪಾಟೀಲ

ಹಿಂದೆ ಕೈ ತಪ್ಪಿದೆ:

ಎಚ್‌.ಕೆ. ಪಾಟೀಲ ಅವರ ತಂದೆ ದಿ. ಕೆ.ಎಚ್‌. ಪಾಟೀಲರಿಗೂ ಮುಖ್ಯಮಂತ್ರಿ ಸ್ಥಾನ ಒಲಿದು ಬಂದಿತ್ತು. ಆದರೆ ಅಂದಿನ ಪಕ್ಷದ ರಾಷ್ಟ್ರೀಯ ನಾಯಕ ರಾಜೀವ ಗಾಂಧಿ ಅವರು ಬಂಗಾರಪ್ಪ ಅವರಿಗೆ ಬಿಟ್ಟುಕೊಡುವಂತೆ ಸೂಚಿಸಿದಾಗ ಮರು ಮಾತನಾಡದೇ ಪಕ್ಷದ ಹಿತಕ್ಕಾಗಿ ಸಿಎಂ ಸ್ಥಾನ ತ್ಯಾಗ ಮಾಡಿದ್ದರು. ಮುಂಬರುವ ದಿನಗಳಲ್ಲಾದರೂ ಕಾಂಗ್ರೆಸ್‌ ವರಿಷ್ಠರು ಎಚ್‌.ಕೆ. ಪಾಟೀಲರಿಗೆ ಆದ್ಯತೆ ನೀಡಬೇಕು ಎನ್ನುವ ಕೂಗು ಅಭಿಮಾನಿಗಳಿಂದ ಕೇಳಿ ಬರುತ್ತಿದೆ.