ಮಂಗಳೂರು(ಡಿ.23): ಮಂಗಳೂರಿನಲ್ಲಿ ಈಗಷ್ಟೇ ಬಿಗುವಿನ ವಾತಾವರಣ ಸ್ವಲ್ಪಮಟ್ಟಿಗೆ ತಿಳಿಯಾಗುತ್ತಿದ್ದು, ನಿಷೇಧಾಜ್ಞೆ ಮುಂದುವರಿದಿದೆ. ಇದೇ ಸಂದರ್ಭ ಮುಂಜಾಗೃತಾ ಕ್ರಮಾವಾಗಿ ನಗರದೊಳಗೆ ಹೊರಭಾಗದ ವಾಹನಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಭಾನುವಾರ ಸಂಜೆ ಬಳಿಕ ಮಂಗಳೂರಿನಲ್ಲಿ ಕರ್ಫ್ಯೂ ಜಾರಿಯಲ್ಲಿದ್ದುದರಿಂದ ಮಂಗಳೂರು ನಗರಕ್ಕೆ ಹೊರಗಿನಿಂದ ಬರುವ ವಾಹನಗಳನ್ನು ನಿರ್ಬಂಧಿಸಲಾಗಿದೆ. ತುರ್ತು ಬರಬೇಕಾದ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

ಪೇಜಾವರ ಶ್ರೀ: 3 ದಿನಗಳಿಂದ ಪ್ರಜ್ಞೆ ಬಂದಿಲ್ಲ, ಕೃತಕ ಉಸಿರಾಟ ಮುಂದುವರಿಕೆ

ರಾಷ್ಟ್ರೀಯ ಹೆದ್ದಾರಿ 75ರ ಅರ್ಕುಳದಲ್ಲಿ ಖಾಸಗಿ ವಾಹನಗಳನ್ನು ನಗರ ಪ್ರವೇಶಿಸದಂತೆ ನಿರ್ಬಂಧಿಸಲಾಗುತ್ತಿತ್ತು. ಮನೆಗೆ ತೆರಳುವ ಸ್ಥಳೀಯರಿಗೆ ಅವಕಾಶ ನೀಡಲಾಗುತ್ತಿತ್ತು ಎಂದು ತಿಳಿದುಬಂದಿದೆ.

ಪೌರತ್ವ ತಿದ್ದುಪಡಿ ಕಾಯ್ದೆ: ಮಾಹಿತಿಗಾಗಿ ಮಂಗಳೂರಲ್ಲಿ ಹೆಲ್ಪ್‌ ಡೆಸ್ಕ್‌..!