ಬೇಲೂರು (ಜ.02): ಪ್ರತಿನಿತ್ಯ ವಾಹನಗಳ ನಿಲುಗಡೆ ಟೆಂಡರ್ ಪಡೆದಿದ್ದ ಬಿಡ್‌ದಾರರಿಗೆ ದೇವಸ್ಥಾನದ ಮುಂಭಾಗದಲ್ಲಿ ವಾಹನಗಳನ್ನು ನಿಲ್ಲಿಸದೇ ಚನ್ನಕೇಶವ ದೇವಾಲಯದ ಹಿಂಭಾಗದ ಜಾಗದಲ್ಲಿ ನಿಲ್ಲಿಸಬೇಕೆಂದು ದೇವಾಲಯದ ಆಡಳಿತ ಸೂಚನೆ ನೀಡಿತು.

ಆದರೂ, ಕೆಲ ಬಿಡ್‌ದಾರರು ವಾಹನವನ್ನು ದೇವಾಲಯದ ಮುಂಭಾಗದಲ್ಲಿ ನಿಲ್ಲಿಸುತ್ತಿದ್ದರು. ಇದರಿಂದ ಸಾರ್ವಜನಿಕರಿಗೆ ಮತ್ತು ಪ್ರವಾಸಿಗರಿಗೆ ಓಡಾಡಲು ತುಂಬ ತೊಂದರೆ ಯಾಗುತಿತ್ತು. ಈಚೆಗೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳು ದೇವಾಲಯಕ್ಕೆ ಭೇಟಿ ನೀಡಿದ ಸಮಯದಲ್ಲಿ ಪಾರ್ಕಿಂಗ್ ಅವ್ಯವಸ್ಥೆ ಕಂಡು ಬದಲಿ ಜಾಗದಲ್ಲಿ ನಿಲ್ಲಿಸಬೇಕು ಮುಂಭಾಗದಲ್ಲಿ ಬ್ಯಾರಿಕೇಟ್ ಹಾಕಿ ಸಾರ್ವಜನಿಕರಿಗೆ ಓಡಾಡಲು ಮತ್ತು ದೇವಸ್ಥಾನಕ್ಕೆ ಬರುವಂತಹ ಪ್ರವಾಸಿಗರಿಗೆ ಅನುಕೂಲವಾಗುವಂತೆ ಸೂಚಿಸಿದರು.

ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ದೇವಾಲಯದ ಮುಂಭಾಗದಲ್ಲಿ ಯಾವುದೇ ವಾಹನಗಳನ್ನು ನಿಲ್ಲಿಸದಂತೆ ಬ್ಯಾರಿಕೇಟ್ ಹಾಕಿ ವಾಹನಗಳನ್ನು ದೇವಾಲಯದ ಹಿಂಭಾಗದಲ್ಲಿ ನಿಲ್ಲಿಸುವಂತೆ ತಾಕೀತು ಸೂಚಿಸಿದರು. ಈ ವೇಳೆ ಮಾತನಾಡಿದ ಕಾರ್ಯನಿರ್ವಹ ಣಾಧಿಕಾರಿ ವಿದ್ಯುಲತಾ, ಈ ಹಿಂದೆ ಪಾರ್ಕಿಂಗ್ ಬಿಡ್‌ದಾರರು ಪಾರ್ಕಿಂಗ್ ಕೂಗುವ ಸಂದರ್ಭದಲ್ಲಿ ಮೊದಲ ನಿಭಂದನೆಯಂತೆ ದೇವಾಲಯ ಹಿಂಭಾಗದ ಸರ್ವೆ ಸ.ನಂ.216/3ಸಿ ಯಾತ್ರಿ ನಿವಾಸದ ಪಕ್ಕದಲ್ಲಿರುವ ಜಾಗದಲ್ಲಿ ನಿಲ್ಲಿಸಲು ಸ್ಥಳಾವಕಾಶ ಕಲ್ಪಿಸಲಾಗಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆದರೆ, ಕೆಲವರು ದೇವಾಲಯದ ಮುಂಭಾಗ ದಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಿಕೊಂಡಿದ್ದ ರು. ಇದರ ಬಗ್ಗೆ ಈಗಾಗಲೇ ಅವರನ್ನು ಕರೆದು ಇಲ್ಲಿ ನಿಲ್ಲಿಸದಂತೆ ತಿಳಿ ಹೇಳಿದ್ದರೂ ಸಹ ಯಾರೂ ಒಪ್ಪಿರಲಿಲ್ಲ ಅದರಂತೆ ಜಿಲ್ಲಾಧಿಕಾ ರಿಗಳ ಆದೇಶದಂತೆ ಸಮಿತಿಯ ನಿರ್ಣಯ ದಂತೆ ದೇವಾಲಯದ ವತಿಯಿಂದ ಸುಮಾರು 25 ಬ್ಯಾರಿಕೇಡ್ ತರಿಸಿ ಹಾಕಲಾಗಿದೆ. 

ಯಾವುದೇ ಕಾರಣಕ್ಕೂ ಪ್ರವಾಸಿಗರಿಗೆ, ಸಾರ್ವಜನಿಕರಿಗೆ ತೊಂದರೆ ನೀಡದಂತೆ ಬಿಡ್ ದಾರರಿಗೆ ತಿಳಿಸಿಲಾಗಿದೆ. ಇನ್ನು ಮುಂದೆ ದೇವಾಲಯದ ಮುಂಭಾಗದಲ್ಲಿ ವಾಹನಗಳನ್ನು ನಿಲ್ಲಿಸದಂತೆ ಎಚ್ಚರಿಕೆ ನೀಡಲಾಗಿದೆ ಎಂದರು.