Asianet Suvarna News Asianet Suvarna News

ಧರ್ಮಸ್ಥಳಕ್ಕೆ ತಮ್ಮ ಪೂರ್ವಜರಿಗೆ ಸಂದ ಗೌರವ: ಡಾ. ವೀರೇಂದ್ರ ಹೆಗ್ಗಡೆ

*  ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಡಾ. ವೀರೇಂದ್ರ ಹೆಗ್ಗಡೆಗೆ ಧರ್ಮಸ್ಥಳದಲ್ಲಿ ಭವ್ಯ ಸ್ವಾಗತ
*  ಪ್ರಸ್ತುತ ರಾಜ್ಯದಲ್ಲಿರುವ ಧರ್ಮಸ್ಥಳದ ಎಲ್ಲ ಸೇವಾ ಕಾರ್ಯಗಳನ್ನು ರಾಷ್ಟ್ರಮಟ್ಟದಲ್ಲಿ ವಿಸ್ತರಣೆ
*  ಎಲ್ಲರೂ ದೇಶದ ಪ್ರಗತಿಗಾಗಿ ಪ್ರಾರ್ಥಿಸಿ, ಶ್ರಮಿಸೋಣ 
 

Veerendra Heggade React on Rajya Sabha Nomination grg
Author
Bengaluru, First Published Jul 10, 2022, 4:30 AM IST

ಬೆಳ್ತಂಗಡಿ(ಜು.10): ರಾಜ್ಯಸಭೆ ಅಂದರೆ ‘ಹಿರಿಯರ ಸಭೆ’. ಶ್ರೀ ಮಂಜುನಾಥ ಸ್ವಾಮಿಯ ವಿಶೇಷ ಅನುಗ್ರಹದಿಂದ ತನಗೆ ರಾಷ್ಟ್ರಮಟ್ಟದಲ್ಲಿ ಪಕ್ಷಾತೀತವಾಗಿ ಸೇವೆ ಮಾಡುವ ಸುವರ್ಣಾವಕಾಶ ದೊರಕಿದೆ. ಇದು ಧರ್ಮಸ್ಥಳಕ್ಕೆ, ತನಗೆ ಹಾಗೂ ತಮ್ಮ ಪೂರ್ವಜರಿಗೆ ಸಂದ ಗೌರವವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಬಳಿಕ ಪ್ರಥಮವಾಗಿ ಶನಿವಾರ ಧರ್ಮಸ್ಥಳಕ್ಕೆ ಬಂದ ಅವರನ್ನು ಚಾರ್ಮಾಡಿಯಲ್ಲಿ ತಾಲೂಕಿನ ಜನತೆಯ ಪರವಾಗಿ ಶಾಸಕ ಹರೀಶ್‌ ಪೂಂಜ ಸ್ವಾಗತಿಸಿದರು. ಬಳಿಕ ವಾಹನ ಜಾಥಾದಲ್ಲಿ ಭವ್ಯ ಮೆರವಣಿಗೆಯಲ್ಲಿ ಹೆಗ್ಗಡೆ ಅವರನ್ನು ಧರ್ಮಸ್ಥಳಕ್ಕೆ ಕರೆದುಕೊಂಡು ಬರಲಾಯಿತು.

ವೀರೇಂದ್ರ ಹೆಗ್ಗಡೆ ಮಾತನಾಡುವ ದೇವರು: ಸಚಿವ ಸುಧಾಕರ್

ಬೀಡಿನಲ್ಲಿ (ಹೆಗ್ಗಡೆಯವರ ನಿವಾಸ) ಹೇಮಾವತಿ ವೀ. ಹೆಗ್ಗಡೆ ಮತ್ತು ಡಿ. ಹರ್ಷೇಂದ್ರ ಕುಮಾರ್‌ ಹಾಗೂ ಕುಟುಂಬದವರು, ಸಿಬ್ಬಂದಿ ಮತ್ತು ಅಭಿಮಾನಿಗಳು ಸ್ವಾಗತಿಸಿದರು. ಬೀಡಿನ ಚಾವಡಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಶಾಸಕ ಹರೀಶ್‌ ಪೂಂಜ ಸ್ವಾಗತಿಸಿದರು.

ಪ್ರಧಾನಿ ಮೋದಿಯವರು ಧರ್ಮಸ್ಥಳದ ಎಲ್ಲ ಸೇವಾ ಕಾರ್ಯಗಳನ್ನು ಸೂಕ್ಷ್ಮವಾಗಿ ಗಮನಿಸಿ ದೂರವಾಣಿ ಮೂಲಕ ಮಾತನಾಡಿ ತನಗೆ ಈ ಅವಕಾಶ ನೀಡಿದ್ದಾರೆ. ತಕ್ಷಣ ನಾನು ಅದನ್ನು ಸ್ವೀಕರಿಸಿದೆ ಎಂದು ಡಾ. ಹೆಗ್ಗಡೆ, ಪ್ರಸ್ತುತ ರಾಜ್ಯದಲ್ಲಿರುವ ಧರ್ಮಸ್ಥಳದ ಎಲ್ಲ ಸೇವಾ ಕಾರ್ಯಗಳನ್ನು ರಾಷ್ಟ್ರಮಟ್ಟದಲ್ಲಿ ವಿಸ್ತರಿಸಲಾಗುವುದು. ತನ್ನ ಆಯುಷ್ಯದ ಪ್ರತಿಕ್ಷಣವನ್ನೂ ದೇಶ ಸೇವೆಗಾಗಿ ವಿನಿಯೋಗಿಸುತ್ತೇನೆ. ಎಲ್ಲರೂ ದೇಶದ ಪ್ರಗತಿಗಾಗಿ ಪ್ರಾರ್ಥಿಸಿ, ಶ್ರಮಿಸೋಣ ಎಂದರು. ಹೇಮಾವತಿ ವೀ. ಹೆಗ್ಗಡೆು, ಡಿ. ಹರ್ಷೇಂದ್ರಕುಮಾರ್‌, ಕಿಯೊನಿಕ್ಸ್‌ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ವಿಧಾನ ಪರಿಷತ್‌ ಸದಸ್ಯ ಕೆ. ಪ್ರತಾಪಸಿಂಹ ನಾಯಕ್‌ ಮೊದಲಾದವರು ಉಪಸ್ಥಿತರಿದ್ದರು.
 

Follow Us:
Download App:
  • android
  • ios