ವಾಟಾಳ್ ನಾಗರಾಜ್ ಎಚ್ಚರಿಕೆ : 1 ವರ್ಷದ ಹೋರಾಟ ಶುರು

ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ಸಂದೇಶ ಒಂದನ್ನು ರವಾನಿಸಿದ್ದಾರೆ. 

Vatal Nagaraj Starts One Year Campaigning snr

ರಾಮನಗರ (ನ.01) :  ಕೇಂದ್ರ ಸರ್ಕಾರ ಕರ್ನಾ​ಟ​ಕ​ವನ್ನು ಕಡೆ​ಗ​ಣಿ​ಸಿ​ರು​ವು​ದನ್ನು ಖಂಡಿಸಿ ಹಾಗೂ ಸಮಗ್ರ ಕನ್ನಡಿಗರ ಬೇಡಿಕೆಗೆ ಈಡೇರಿಸುವಂತೆ ಆಗ್ರಹಿಸಿ ಒಂದು ವರ್ಷಗಳ ಕಾಲ ಕನ್ನಡ ಚಳವಳಿ ನಡೆಸಲಾಗುತ್ತಿದೆ ಎಂದು ಕನ್ನಡ ಪರ ಚಳವಳಿಗಾರ ವಾಟಾಳ್‌ ನಾಗರಾಜ್‌ ತಿಳಿಸಿದರು.

ನಗರದ ಐಜೂರು ವೃತ್ತದಲ್ಲಿ ಕನ್ನ​ಡ​ಪರ ಸಂಘ​ಟ​ನೆ​ಗ​ಳೊಂದಿಗೆ ಪ್ರತಿಭಟನೆ ನಡೆಸಿದ ತರು​ವಾಯ ಮಾತ​ನಾ​ಡಿದ ವಾಟಾಳ್‌ ನಾಗ​ರಾಜ್‌, ಕರ್ನಾಟಕ ಏಕೀಕರಣವಾಗಿ 65 ವರ್ಷ ತುಂಬಲಿದೆ. ಕರ್ನಾಟಕ ಏಕೀಕರಣ ಆದನಂತರ ಅಂದಿನ ಮತ್ತುಇಂದಿನ ರಾಜ್ಯವನ್ನು ಗಮನಿಸಿದ್ದೇನೆ. ಏಕೀಕರಣವಾದರೂ ಕನ್ನಡಿಗರ ಬೆಳವಣಿಗೆ ಆಗಿಲ್ಲ. ರಾಜ್ಯದಲ್ಲಿಯೇ ಕನ್ನಡಿಗರ ಸ್ಥಿತಿ ಹೀನಾಯವಾಗಿದೆ ಎಂದರು.

ಗಡಿನಾಡಿನಲ್ಲಿ ಕನ್ನಡ ಭಾಷೆಯೇ ಇಲ್ಲ. ಅದರಲ್ಲೂ ರಾಯಚೂರು, ಕಲ್ಬುರ್ಗಿ ಸೇರಿದಂತೆ ಯಾವ ಜಿಲ್ಲೆಯಲ್ಲಿ ಇಲ್ಲ. ರಾಜಧಾನಿಯಲ್ಲಿಯೂ ಇದೇ ಸ್ಥಿತಿ. ಕನ್ನಡ ಬೆಳವಣಿಗೆಗೆ ಸರ್ಕಾ​ರ​ಗಳು ಪ್ರಮಾಣಿಕವಾದ ಪ್ರಯತ್ನ ಮಾಡುತ್ತಿಲ್ಲ ಎಂದು ಹೇಳಿದರು.

ಸಾಮಾಜಿಕ ಹೋರಾಟಗಾರ ವಾಟಾಳ್ ನಾಗರಾಜ್ ಅರೆಸ್ಟ್ ...

ಈ ತಿಂಗಳ 28ರಿಂದ ಒಂದು ವರ್ಷಗಳ ಕಾಲ ಇಡೀ ರಾಜ್ಯಾದ್ಯಂತ ಕನ್ನಡ ಚಳವಳಿ ಮಾಡಲಾಗುವುದು. ಬೆಂಗಳೂರಿನ ಪ್ರದರ್ಶನಗೊಳ್ಳುತ್ತಿರುವ ಪರ ಭಾಷಾ ಚಿತ್ರಗಳ ರೀಲ್‌ಗೆ ಬೆಂಕಿ ಇಡಲಾಗುತ್ತದೆ. ಇಂಗ್ಲಿಷ್‌ ಭಾಷೆ​ಯ​ಲ್ಲಿ​ರುವ ಬೋರ್ಡು​ಗ​ಳಿಗೆ ಮಸಿ ಬಳಿಯಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳ ಹಾವಳಿ ಹೆಚ್ಚಾಗಿದೆ. ಬೇರೆ ರಾಜ್ಯದಲ್ಲಿ ಇದಕ್ಕೆ ತದ್ವಿರುದ್ಧವಾಗಿದ್ದು, ಕನ್ನಡ ಚಿತ್ರಗಳೇ ಪ್ರದರ್ಶನಗೊಳ್ಳುವುದಿಲ್ಲ. ಎಂಇಎಸ್‌ ಕರಾಳದಿನಾಚರಣೆ ಮಾಡುತ್ತೇವೆ ಎಂದಿದೆ. ಅವರನ್ನು ಗಡಿಪಾರು ಮಾಡಬೇಕು. ಕರಾಳ ದಿನಕ್ಕೆ ಅವಕಾಶ ನೀಡಬಾರದು. ಕನ್ನಡ ಉಳಿಸುವುದರಲ್ಲಿ ಸರಕಾರ ವಿಫಲರಾಗಿದ್ದಾರೆ ಎಂದು ವಾಟಾಳ್‌ ನಾಗ​ರಾಜ್‌ ಹೇಳಿದರು.

ಪ್ರತಿ​ಭ​ಟ​ನೆ​ಯಲ್ಲಿ ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಜಗದೀಶ್‌, ಪದಾಧಿಕಾರಿಗಳಾದ ಜಯಕುಮಾರ್‌, ಗಾಯತ್ರಿ ಬಾಯಿ ಮತ್ತಿ​ತ​ರರು ಭಾಗ​ವ​ಹಿ​ಸಿ​ದ್ದರು

Latest Videos
Follow Us:
Download App:
  • android
  • ios